ETV Bharat / international

ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿ ಜೊತೆ ಮಹಿಳಾ ನ್ಯಾಯಾಧೀಶೆ ಲಿಪ್‌ಲಾಕ್!

ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ ಜೊತೆ ಮಹಿಳಾ ನ್ಯಾಯಾಧೀಶೆಯೊಬ್ಬರು ಲಿಪ್​ ಲಾಕ್​ ಮಾಡಿರುವ ಘಟನೆ ಅರ್ಜೆಂಟೀನಾದಲ್ಲಿ ನಡೆದಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಸೂಚಿಸಲಾಗಿದೆ.

Argentinian judge caught kissing cop killer

author img

By

Published : Jan 6, 2022, 5:37 PM IST

ಅರ್ಜೆಂಟೀನಾ: ಪೊಲೀಸ್‌ ಅಧಿಕಾರಿಯನ್ನು​​​ ಕೊಲೆಗೈದು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಗೆ ಮಹಿಳಾ ನ್ಯಾಯಾಧೀಶೆ ಮುತ್ತಿಕ್ಕಿರುವ ಘಟನೆ ನಡೆದಿದ್ದು, ವಿಡಿಯೋ ವೈರಲ್​​ ಆಗಿದೆ.

ಅರ್ಜೆಂಟೀನಾದಲ್ಲಿ ಈ ಘಟನೆ ನಡೆದಿದೆ. ಕೊಲೆ ಅಪರಾಧಿ ಕ್ರಿಶ್ಚಿಯನ್​​ ಬುಸ್ಟೊಸ್​​​​​​​ ಪರ ತನ್ನ ಅಭಿಪ್ರಾಯ ಮಂಡಿಸುತ್ತಿದ್ದ ನ್ಯಾಯಾಧೀಶೆ ಮರಿಲ್​ ಸೌರೆಜ್​​ ಈ ರೀತಿ ನಡೆದುಕೊಂಡಿದ್ದಾರೆ. ಅಪರಾಧಿ ಜೊತೆ ಲಿಪ್​ ಲಾಕ್​​ ಮಾಡಿರುವ ವಿಡಿಯೋ ವೈರಲ್​ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ನ್ಯಾಯಾಧೀಶೆ, ಆತನ ಬಗ್ಗೆ ಪುಸ್ತಕ ಬರೆಯುತ್ತಿದ್ದೇನೆ. ಆತನನ್ನು ಮಾತನಾಡಿಸಲು ಜೈಲಿಗೆ ಹೋದಾಗ ಮುತ್ತಿಕ್ಕಿದ್ದು ಹೌದು ಎಂದಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕೋವಿಡ್ ವಿಪರೀತ: ಪೊಲೀಸರಿಗೂ 'ವರ್ಕ್‌ ಫ್ರಮ್ ಹೋಮ್‌'

ಪೊಲೀಸ್​ ಅಧಿಕಾರಿಯನ್ನು ಕೊಲೆಗೈದು ಶಿಕ್ಷೆಗೆ ಗುರಿಯಾಗಿದ್ದ ಕ್ರಿಶ್ಚಿಯನ್​​ ಬುಸ್ಟೊಸ್​​ಗೆ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಲು ನ್ಯಾಯಾಧೀಶೆ ಮರಿಲ್​​ ಸೌರೆಜ್​​ ಪ್ರಯತ್ನಿಸುತ್ತಿದ್ದರು. ಅದಕ್ಕಾಗಿ ರಚಿಸಲಾಗಿದ್ದ ನಾಲ್ವರು ನ್ಯಾಯಾಧೀಶರ ಸಮಿತಿಯಲ್ಲಿ ಸೌರೆಜ್​ ಕೂಡ ಇದ್ದರು. ಆತನಿಗೆ ಜೀವಾವಧಿ ಶಿಕ್ಷೆ ವಿಧಿಸುವುದನ್ನು ಅನೇಕ ಸಲ ವಿರೋಧಿಸಿದ್ದ ಈಕೆ, ಆತನ ಪರ ವಿಶೇಷ ಒಲವು ತೋರಿದ್ದರು.

ಇದೀಗ ಜೈಲಿನಲ್ಲಿಯೇ ಅಪರಾಧಿಗೆ ಲಿಪ್‌ಲಾಕ್​ ಮಾಡಿರುವ ವಿಡಿಯೋ ವೈರಲ್​ ಆಗುತ್ತಿದ್ದಂತೆ ಪ್ರಕರಣದ ತನಿಖೆ ನಡೆಸಲು ಸೂಚನೆ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.