ಬ್ಯೂನಸ್ ಐರಿಸ್(ಅರ್ಜೆಂಟೀನಾ): ಅರ್ಜೆಂಟೀನಾ ಮಧ್ಯಂತರ ಚುನಾವಣೆ (Argentina Midterm Elections) ಫಲಿತಾಂಶ ಹೊರಬಂದಿದ್ದು, ಅಧ್ಯಕ್ಷ ಆಲ್ಬರ್ಟೊ ಫರ್ನಾಂಡಿಸ್ (President Alberto Fernandez) ಅವರಿಗೆ ಭಾರೀ ಹಿನ್ನೆಡೆಯಾಗಿದೆ. ಆಡಳಿತ ಪಕ್ಷದ ಮುಂದೆ ಪ್ರತಿಪಕ್ಷ ಗೆದ್ದು ಬೀಗಿದೆ.
ಅಧಿಕ ಹಣದುಬ್ಬರ ಮತ್ತು ಹೆಚ್ಚುತ್ತಿರುವ ಬಡತನದ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅರ್ಜೆಂಟೀನಾದಲ್ಲಿ ಭಾನುವಾರ ಮಧ್ಯಂತರ ಚುನಾವಣೆ ನಡೆಸಲಾಗಿತ್ತು. ಚುನಾವಣೆಯಲ್ಲಿ 'ಫ್ರಂಟ್ ಫಾರ್ ಎವೆರಿವನ್' (Front for Everyone) - ಅಂದರೆ, ಆಲ್ಬರ್ಟೊ ಫರ್ನಾಂಡಿಸ್ ಅವರ ಸಮ್ಮಿಶ್ರ ಸರ್ಕಾರ ಸೋಲುಂಡಿದೆ. ಹೀಗಾಗಿ ಇವರ ಆಡಳಿತ ಒಕ್ಕೂಟವು ಸೆನೆಟ್‌ನ (ಕೆಳಮನೆ) ಅಧಿಕಾರವನ್ನು ಕಳೆದುಕೊಂಡಿದೆ.
ಅರ್ಜೆಂಟೀನಾದ ರಾಜಧಾನಿ ಬ್ಯೂನಸ್ ಐರಿಸ್ನಲ್ಲಿ ವಿರೋಧ ಪಕ್ಷಗಳ ಒಕ್ಕೂಟವು ಶೇ.40.1ರಷ್ಟು ಮತ ಪಡೆದುಕೊಂಡಿದ್ದರೆ, ಆಡಳಿತ ಪಕ್ಷವು ಶೇ.38.4 ರಷ್ಟು ವೋಟ್ ಪಡೆದುಕೊಂಡು ಹಿನ್ನೆಡೆ ಕಂಡಿದೆ. 'ಟುಗೆದರ್ ಫಾರ್ರ ಚೇಂಜ್' ಹೆಸರಿನ ಪ್ರತಿಪಕ್ಷಗಳ ಒಕ್ಕೂಟವು ಮುಂದಿನ ಎರಡು ವರ್ಷಗಳ ವರೆಗೆ ಅಂದರೆ ಮುಂದಿನ ಸಾರ್ವತ್ರಿಕ ಚುನಾವಣೆ ವರೆಗೆ ಆಡಳಿತ ನಡೆಸಲಿದೆ.
ಇದನ್ನೂ ಓದಿ: ಅಮೆರಿಕ, ಇಸ್ರೇಲಿ ಅಧಿಕಾರಿಗಳ ಮೇಲೆ ಬೇಹುಗಾರಿಕೆ: ಸೊಲೈಮಾನಿ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಮುಂದಾಯ್ತಾ ಹಿಜ್ಬುಲ್ಲಾ ?
2019r ಅಕ್ಟೋಬರ್ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಪಡೆದ ಮತ್ತೊಂದು ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು 'ಫ್ರಂಟ್ ಫಾರ್ ಎವೆರಿವನ್' ಒಕ್ಕೂಟ ರಚಿಸಿ ಆಲ್ಬರ್ಟೊ ಫರ್ನಾಂಡಿಸ್ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.
ಇದೀಗ, ಮುಂದಿನ ಎರಡು ವರ್ಷಗಳ ಕಾಲ ಅಧಿಕಾರ ನಡೆಸಲಿರುವ 'ಟುಗೆದರ್ ಫಾರ್ ಚೇಂಜ್' ಮೈತ್ರಿಕೂಟಕ್ಕೆ ಸಾಮಾಜಿಕ ಬಿಕ್ಕಟ್ಟನ್ನು ಎದುರಿಸುವ ಜೊತೆಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯೊಂದಿಗಿರುವ ದೇಶದ ಸಾಲದ ಸಮಸ್ಯೆಯನ್ನೂ ಬಗೆಹರಿಸುವ ಸವಾಲು ಎದುರಾಗಿದೆ.