ವಾಷಿಂಗ್ಟನ್: ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರು ಭಾರತದ 5 ಲಕ್ಷಕ್ಕೂ ಹೆಚ್ಚು ಮಂದಿ ಸೇರಿದಂತೆ ಸುಮಾರು 11 ಮಿಲಿಯನ್ ದಾಖಲೆ ರಹಿತ ವಲಸಿಗರಿಗೆ ಅಮೆರಿಕದ ಪೌರತ್ವಕ್ಕೆ ಮಾರ್ಗಸೂಚಿಯನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದಾರೆ ಎನ್ನಲಾಗ್ತಿದೆ.
ವಾರ್ಷಿಕವಾಗಿ 95,000 ನಿರಾಶ್ರಿತರನ್ನು ಅಮೆರಿಕಕ್ಕೆ ಪ್ರವೇಶಿಸುವ ವ್ಯವಸ್ಥೆಯನ್ನು ಮಾಡಲಿದ್ದಾರೆ ಎಂದು ಬೈಡನ್ ಅಭಿಯಾನ ಬಿಡುಗಡೆ ಮಾಡಿದ ನೀತಿ ದಾಖಲೆಯಲ್ಲಿ ಹೇಳಲಾಗಿದೆ.
ಬೈಡನ್ ಶೀಘ್ರದಲ್ಲೇ ಕಾಂಗ್ರೆಸ್ನಲ್ಲಿ ವಲಸೆ ಸುಧಾರಣಾ ಕಾನೂನನ್ನು ಜಾರಿಗೆ ತರುವ ಕೆಲಸವನ್ನು ಪ್ರಾರಂಭಿಸುತ್ತಾರೆ. ಈ ಮೂಲಕ ನಮ್ಮ ವ್ಯವಸ್ಥೆಯನ್ನು ಆಧುನೀಕರಿಸಲಾಗುವುದು ಎಂದು ಹೇಳಲಾಗಿದೆ. ದಾಖಲೆಗಳಿಲ್ಲದ ಐದು ಲಕ್ಷಕ್ಕೂ ಹೆಚ್ಚು ಭಾರತೀಯರು ಸೇರಿದಂತೆ ಸುಮಾರು 11 ಮಿಲಿಯನ್ ವಲಸಿಗರಿಗೆ ಅಮೆರಿಕ ಪೌರತ್ವ ನೀಡಲು ಮಾರ್ಗಸೂಚಿ ಸಿದ್ಧಪಡಿಸಲಾಗುತ್ತದೆ ಎನ್ನಲಾಗಿದೆ.
ಬೈಡನ್ ಆಡಳಿತವು ಕುಟುಂಬ ಆಧಾರಿತ ವಲಸೆಯನ್ನು ಬೆಂಬಲಿಸುತ್ತದೆ ಮತ್ತು ಕುಟುಂಬ ಸಂಘಟನೆ ಅಮೆರಿಕ ವಲಸೆ ವ್ಯವಸ್ಥೆಯ ಪ್ರಮುಖ ತತ್ವವಾಗಿ ಕಾಪಾಡುತ್ತದೆ. ಕುಟುಂಬ ವೀಸಾ ಬ್ಯಾಕ್‌ಲಾಗ್ ಅನ್ನು ಕಡಿಮೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
"ವಾರ್ಷಿಕ ಜಾಗತಿಕ ನಿರಾಶ್ರಿತರ ಪ್ರವೇಶದ ಗುರಿಯನ್ನು 1,25,000ಕ್ಕೆ ನಿಗದಿಪಡಿಸುವ ಮೂಲಕ ನಾವು ಈ ದೇಶಕ್ಕೆ ಸ್ವಾಗತಿಸುವ ನಿರಾಶ್ರಿತರ ಸಂಖ್ಯೆಯನ್ನು ಹೆಚ್ಚಿಸುತ್ತೇವೆ. ನಮ್ಮ ಜವಾಬ್ದಾರಿ, ನಮ್ಮ ಮೌಲ್ಯಗಳು ಮತ್ತು ಅಭೂತಪೂರ್ವ ಜಾಗತಿಕ ಅಗತ್ಯಕ್ಕೆ ಅನುಗುಣವಾಗಿ ಅದನ್ನು ನಂತರದಲ್ಲಿ ಹೆಚ್ಚಿಸಲು ಪ್ರಯತ್ನಿಸುತ್ತೇವೆ. ವಾರ್ಷಿಕವಾಗಿ 95,000 ನಿರಾಶ್ರಿತರು ಅಮೆರಿಕಕ್ಕೆ ಪ್ರವೇಶಿಸುವ ವ್ಯವಸ್ಥೆಯನ್ನು ಮಾಡಲಿದ್ದಾರೆ ಎಂದು ನೀತಿ ದಾಖಲೆ ಹೇಳಿದೆ.