ಬ್ರಜಿಲಿಯಾ(ಬ್ರೆಜಿಲ್): ಅಮೆಜಾನ್ ಕಾಡಿನಲ್ಲಿ ಕಳೆದೊಂದು ವಾರದಿಂದ ಕಾಳ್ಗಿಚ್ಚು ಭಾರಿ ಆತಂಕ ಸೃಷ್ಟಿಸಿದ್ದು, ವಿನಾಶದ ಮುನ್ಸೂಚನೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೆಲ ವಾರಗಳ ಹಿಂದೆ ಶುರುವಾಗಿ ವಿಸ್ತರಿಸಿರುವ ಕಾಳ್ಗಿಚ್ಚು ಅಮೆಜಾನ್ ಮಳೆಕಾಡನ್ನು ಪೂರ್ತಿಯಾಗಿ ಆವರಿಸುವ ಸೂಚನೆ ನೀಡಿದೆ. ಆಕಾಶದೆತ್ತರಿಂದ ನೋಡಿದಾಗ ದಟ್ಟ ಹೊಗೆ ಕಾಣಿಸುತ್ತಿದ್ದು, ಇದು ಬೆಂಕಿಯ ತೀವ್ರತೆಯನ್ನು ಸಾರಿ ಹೇಳುತ್ತಿದೆ.
ಅಮೆಜಾನಾಸ್, ರೊಡೋನಿಯಾ, ಪಾರಾ ಮತ್ತು ಮ್ಯಾಟೊ ಗ್ರೋಸೋ ಹೆಸರಿನ ಬ್ರೆಜಿಲ್ ರಾಜ್ಯಗಳಲ್ಲಿ ಹರಡಿರುವ ಬೆಂಕಿಯ ಉಪಗ್ರಹ ಆಧಾರಿತ ಚಿತ್ರಗಳನ್ನು ನಾಸಾ ಪ್ರಕಟಿಸಿದೆ. ವಿಶ್ವದ ಅತೀ ದೊಡ್ಡ ಮಳೆಕಾಡು ಅಮೆಜಾನ್, ಜಾಗತಿಕ ತಾಪಮಾನವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಸುಮಾರು 3 ಕೋಟಿಗೂ ಅಧಿಕ ಸಸ್ಯ-ಪ್ರಾಣಿ ಪ್ರಬೇಧಗಳನ್ನು ಹೊಂದಿರುವ ಅಮೆಜಾನ್ ಕಾಡು, ಒಂದು ಮಿಲಿಯನ್ ಬುಡಕಟ್ಟು ಜನರಿಗೆ ಆಶ್ರಯ ನೀಡಿದೆ. ವಿಶ್ವದ ಶೇ.20ರಷ್ಟು ಆಮ್ಲಜನಕವನ್ನು ಈ ಅಮೆಜಾನ್ ಕಾಡು ಹೊರಸೂಸುತ್ತದೆ. ಈ ಎಲ್ಲ ಕಾರಣಗಳಿಂದ ಅಮೆಜಾನ್ ಕಾಡಿನ ಸದ್ಯದ ಭಾರಿ ಕಾಳ್ಗಿಚ್ಚು ಮನುಷ್ಯ ಸಂಕುಲದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ನಿಚ್ಚಳವಾಗಿದೆ.
ಅಮೆಜಾನ್ ಕಾಡಿನಲ್ಲಿ ನಡೆದ ಕಾಳ್ಗಿಚ್ಚು ಪ್ರಕರಣಗಳು:
ಈ ವರ್ಷದ ಜನವರಿಯಿಂದ ಅಮೆಜಾನ್ ಕಾಡಿನಲ್ಲಿ ಸುಮಾರು 74,155 ಕಾಡ್ಗಿಚ್ಚು ಪ್ರಕರಣಗಳು ದಾಖಲಾಗಿವೆ. 2018ಕ್ಕೆ ಹೋಲಿಕೆ ಮಾಡಿದಲ್ಲಿ ಇದು ಶೇ.85ರಷ್ಟು ಏರಿಕೆ ಎಂದು ನ್ಯಾಷನಲ್ ಇನ್ಸ್‌ಟ್ಯೂಟ್ ಫಾರ್ ಸ್ಪೇಸ್ ರಿಸರ್ಚ್ ವರದಿಯಲ್ಲಿ ಹೇಳಿದೆ. 2016ರಲ್ಲಿ 67,790 ಕಾಡ್ಗಿಚ್ಚು ಪ್ರಕರಣಗಳು ಕಂಡುಬಂದಿದ್ದವು.
-
The Amazon Forest produces more than 20 percentage the world’s oxygen and is home to more than half of the world’s species of plants, animals and insects. It has been burning for 3 weeks and we have just found out about it! 😿 #PrayForTheAmazon #AmazonFire pic.twitter.com/3CPykQt3ns
— Shekhar 🇮🇳 (@Shekhar_O7) August 22, 2019 " class="align-text-top noRightClick twitterSection" data="
">The Amazon Forest produces more than 20 percentage the world’s oxygen and is home to more than half of the world’s species of plants, animals and insects. It has been burning for 3 weeks and we have just found out about it! 😿 #PrayForTheAmazon #AmazonFire pic.twitter.com/3CPykQt3ns
— Shekhar 🇮🇳 (@Shekhar_O7) August 22, 2019The Amazon Forest produces more than 20 percentage the world’s oxygen and is home to more than half of the world’s species of plants, animals and insects. It has been burning for 3 weeks and we have just found out about it! 😿 #PrayForTheAmazon #AmazonFire pic.twitter.com/3CPykQt3ns
— Shekhar 🇮🇳 (@Shekhar_O7) August 22, 2019
ಅಮೇಜಾನ್ ಕಾಳ್ಗಿಚ್ಚಿಗೆ ಯಾಕಿಷ್ಟು ಪ್ರಾಮುಖ್ಯತೆ?
ಅಮೆಜಾನ್ ಕಾಡು ಸುಮಾರು 7.4 ಮಿಲಿಯನ್ ಸ್ಕ್ವೇರ್ ಕಿ.ಮೀನಲ್ಲಿ ವ್ಯಾಪಿಸಿದೆ. ಇದು ಸುಮಾರು ಶೇ.40ರಷ್ಟು ಲ್ಯಾಟಿನ್ ಅಮೆರಿಕಾ ಖಂಡವನ್ನೇ ಸುತ್ತುವರೆದಿದೆ. ಲ್ಯಾಟಿನ್ ಅಮೆರಿಕಾ ದೇಶಗಳಾದ ಬೊಲಿವಿಯಾ, ಬ್ರೆಜಿಲ್, ಕೊಲಂಬಿಯಾ, ಈಕ್ವೇಡಾರ್, ಫ್ರೆಂಚ್ ಗಯಾನ, ಗಯಾನ, ಪೆರು, ಸುರಿನೇಮ್ ಹಾಗೂ ವೆನುಜುವೆಲಾ ದೇಶಗಳಲ್ಲಿ ಹರಡಿಕೊಂಡಿದೆ.
![Amazon burning](https://etvbharatimages.akamaized.net/etvbharat/prod-images/4216392_w.jpg)
ಅಮೆಜಾನ್ ಕಾಡಿನದಲ್ಲಿ ವಿವಿಧ ಪ್ರಬೇಧದ ಅತ್ಯಂತ ಅಮೂಲ್ಯ ಸಸ್ಯ ಪ್ರಬೇಧಗಳಿವೆ. ವಿಶ್ವದ ಯಾವುದೇ ಭಾಗದಲ್ಲಿ ಕಂಡುಬರದ ಎಷ್ಟೋ ಸಸ್ಯ ಪ್ರಬೇಧಗಳು ಅಮೇಜಾನ್ ಕಾಡಿನಲ್ಲಿರುವುದು ಈ ಕಾಡಿನ ವಿಶೇಷತೆಗಳಲ್ಲೊಂದು.
ಅಮೇಜಾನ್ ಕಾಡಿನಲ್ಲಿ 30,000 ವಿವಿಧ ಜಾತಿಯ ಸಸ್ಯಗಳು, 2,500 ವಿಧದ ಮೀನುಗಳು, 1,500 ವಿಧದ ಪಕ್ಷಿಗಳು, 500 ಬಗೆಯ ಸಸ್ತನಿಗಳು, 550 ಸರೀಸೃಪಗಳು ಹಾಗೂ 2.5 ಮಿಲಿಯನ್ ಕೀಟಗಳು ಈ ಕಾಡಿನಲ್ಲಿವೆ ಎಂದು ಅಂದಾಜಿಸಲಾಗಿದೆ.
![Amazon burning](https://etvbharatimages.akamaized.net/etvbharat/prod-images/4216392_yy.jpg)
ಭೂಮಿಯ ಶ್ವಾಸಕೋಶ ಈ ಕಾಡು!
ವಿಶ್ವಕ್ಕೆ ಶೇ.20 ಆಮ್ಲಜನಕವನ್ನು ಒದಗಿಸುವ ಅಮೆಜಾನ್ ಕಾಡನ್ನು 'ಭೂಮಿಯ ಶ್ವಾಸಕೋಶ' ಎಂದು ಕರೆಯುತ್ತಾರೆ. ಈ ಕಾಡಿನಲ್ಲಿ ವಿಶ್ವದ ಅತ್ಯಂತ ಉದ್ದದ ನದಿ ಅಮೆಜಾನ್ ಕೂಡಾ ಹರಿಯುತ್ತಿದೆ.
-
I don’t know what to say. Basically we don’t deserve this world. #PrayForTheAmazon pic.twitter.com/60clPE9vfD
— Tanya Gupta (@tanyag5) August 22, 2019 " class="align-text-top noRightClick twitterSection" data="
">I don’t know what to say. Basically we don’t deserve this world. #PrayForTheAmazon pic.twitter.com/60clPE9vfD
— Tanya Gupta (@tanyag5) August 22, 2019I don’t know what to say. Basically we don’t deserve this world. #PrayForTheAmazon pic.twitter.com/60clPE9vfD
— Tanya Gupta (@tanyag5) August 22, 2019
ಭಾರಿ ಅರಣ್ಯನಾಶ!
ಕಳೆದ ಐವತ್ತು ವರ್ಷಗಳಲ್ಲಿ ಅಮೆಜಾನ್ ಕಾಡಿನ ಶೇ.20ರಷ್ಟು ಕಾಡು ಮನುಷ್ಯರ ದುರಾಸೆಗೆ ಬಲಿಯಾಗಿದೆ. 2019ರಲ್ಲಿ ಬ್ರೆಜಿಲ್ ಅಧ್ಯಕ್ಷಗಾದಿಗೆ ಏರಿದ ಜೈರ್ ಬೊಲ್ಸೋನಾರೋ ಅಧಿಕಾರದಲ್ಲಿ ಅರಣ್ಯನಾಶ ಶೇ.4ರಷ್ಟು ಏರಿಕೆಯಾಗಿದೆ.
![Amazon burning](https://etvbharatimages.akamaized.net/etvbharat/prod-images/4216392_ee.jpg)
ಟ್ವಿಟರ್ನಲ್ಲಿ ಟ್ರೆಂಡ್:
#PrayForTheAmazon ಎನ್ನುವ ಹ್ಯಾಶ್ಟ್ಯಾಗ್ ಮೂಲಕ ಟ್ವಿಟರ್ ಮಂದಿ ಸಹ ಭಾರಿ ಕಾಡ್ಗಿಚ್ಚಿಗೆ ಮರುಕ ಹಾಗೂ ಆತಂಕ ವ್ಯಕ್ತಪಡಿಸಿದ್ದಾರೆ. ಅಮೆಜಾನ್ ಕಾಡ್ಗಿಚ್ಚಿನ ವಿವಿಧ ಫೋಟೋಗಳು ಟ್ವಿಟರ್ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಾರಿ ಕಾಳ್ಗಿಚ್ಚನ್ನು ಹತೋಟಿಗೆ ತರಲು ಹರಸಾಹಸ ಮುಂದುವರೆದಿದೆ.
-
It is incredible that so many people donated to the Notre Dame Cathedral, but nobody cares about the current state of the Amazon.
— _sky (@sky89676199) August 22, 2019 " class="align-text-top noRightClick twitterSection" data="
Nobody seems to be interested in everything that is being lost; 500 thousand hectares and 50% of the species in our world.#PrayForTheAmazon pic.twitter.com/dsd17fcowG
">It is incredible that so many people donated to the Notre Dame Cathedral, but nobody cares about the current state of the Amazon.
— _sky (@sky89676199) August 22, 2019
Nobody seems to be interested in everything that is being lost; 500 thousand hectares and 50% of the species in our world.#PrayForTheAmazon pic.twitter.com/dsd17fcowGIt is incredible that so many people donated to the Notre Dame Cathedral, but nobody cares about the current state of the Amazon.
— _sky (@sky89676199) August 22, 2019
Nobody seems to be interested in everything that is being lost; 500 thousand hectares and 50% of the species in our world.#PrayForTheAmazon pic.twitter.com/dsd17fcowG