ವರ್ಜಿನ್ ಗ್ಯಾಲಕ್ಸಿಯ ರಿಚರ್ಡ್ ಬ್ರಾನ್ಸನ್ ಬಾಹ್ಯಾಕಾಶ ಪ್ರವಾಸ ಕೈಗೊಂಡು ಮರಳಿದ ಒಂಬತ್ತು ದಿನಗಳ ನಂತರ ಇಂದು ಸಂಜೆ ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಜೆಫ್ ಬೆಜೋಸ್ ಅಂತರಿಕ್ಷಕ್ಕೆ ಪ್ರಯಾಣ ಬೆಳೆಸಿದರು.
ಜೆಫ್ ಬೆಜೋಸ್ ಇಂದು ಅಮೆರಿಕದ ಪಶ್ಚಿಮ ಟೆಕ್ಸಾಸ್‌ನಲ್ಲಿ ನಾಲ್ವರು ಗಗನಯಾತ್ರಿಗಳ ಜೊತೆ ನ್ಯೂ ಶೆಪರ್ಡ್ ರಾಕೆಟ್‌ನಲ್ಲಿ ಬಾಹ್ಯಾಕಾಶ ಯಾನ ಮಾಡಿ ಮರಳಿದ್ದಾರೆ. ಒಟ್ಟು ನಾಲ್ವರು ಪ್ರಯಾಣಿಕರು ಅಂತರಿಕ್ಷದಲ್ಲಿ 11 ನಿಮಿಷಗಳ ಕಾಲ ರೋಚಕ ಅನುಭವ ಪಡೆದರು. ವರ್ಜಿನ್ ಗ್ಯಾಲಕ್ಸಿಯ ರಿಚರ್ಡ್ ಬ್ರಾನ್ಸನ್ ನಂತರ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಸ್ವಂತ ರಾಕೆಟ್‌ನಲ್ಲಿ ಬಾಹ್ಯಾಕಾಶಕ್ಕೆ ಹಾರಲಿರುವ 2ನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
-
Scenes from #NSFirstHumanFlight astronaut load. pic.twitter.com/L7u1ZaYn60
— Blue Origin (@blueorigin) July 20, 2021 " class="align-text-top noRightClick twitterSection" data="
">Scenes from #NSFirstHumanFlight astronaut load. pic.twitter.com/L7u1ZaYn60
— Blue Origin (@blueorigin) July 20, 2021Scenes from #NSFirstHumanFlight astronaut load. pic.twitter.com/L7u1ZaYn60
— Blue Origin (@blueorigin) July 20, 2021
ಜೆಫ್ ಬೆಜೋಸ್ ಮತ್ತು ಮೂವರು ಸಹ ಪ್ರಯಾಣಿಕರು ಪಶ್ಚಿಮ ಟೆಕ್ಸಾಸ್‌ನಿಂದ ಬಾಹ್ಯಾಕಾಶಕ್ಕೆ ಪ್ರಯಾಣಿಸಿ, ವಾಪಸಾಗಿದ್ದಾರೆ. ಜೆಫ್ ಅವರ ಈ ಕನಸಿನ ಯಾನದಲ್ಲಿ ಅವರ ಜತೆ ಸಹೋದರ ಮಾರ್ಕ್ ಪ್ರಯಾಣಿಸಿದ್ದು, 18 ವರ್ಷದ ಆಲಿವರ್ ಡೀಮೆನ್ ಅತ್ಯಂತ ಕಿರಿಯ ಬಾಹ್ಯಾಕಾಶ ಪ್ರವಾಸಿಗರಾಗಿದ್ದರು. 82 ವರ್ಷದ ವಾಲಿ ಫಂಕ್ ಬಾಹ್ಯಾಕಾಶಕ್ಕೆ ಹೋದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ.
ನ್ಯೂ ಶೆಪರ್ಡ್ ರಾಕೆಟ್ ನಾಲ್ವರು ಪ್ರಯಾಣಿಕರನ್ನು ಹೊತ್ತು ಕರ್ಮನ್ ರೇಖೆಯನ್ನು ಮೀರಿ, ಭೂಮಿಯಿಂದ ಸರಿ ಸುಮಾರು 100 ಕಿಲೋಮೀಟರ್ ದೂರಕ್ಕೆ ಸಾಗಿತು. ಇದು ವಿಶ್ವದ ಮೊದಲ ಪೈಲಟ್ ರಹಿತ ವಿಮಾನವಾಗಿದೆ. ಟೆಕ್ಸಾಸ್‌ನಿಂದ ಹೊರಟು ಹೋದಾಗ ಬಾಹ್ಯಾಕಾಶ ನೌಕೆಯನ್ನು ನೇವಿಗೇಟ್ ಮಾಡಲು ತರಬೇತಿ ಪಡೆದ ಗಗನಯಾತ್ರಿಗಳು ಇದರಲ್ಲಿ ಇರಲಿಲ್ಲ.
-
🚀🇺🇸 - #NSFirstHumanFlight: Welcome back !
— Actualités Spatiales🚀 (@ActuSpatiales) July 20, 2021 " class="align-text-top noRightClick twitterSection" data="
Jeff Bezos, Mark, Wally Funk et Oliver sont de retour sur terre ! 🎉🚀 pic.twitter.com/3IokPICIyd
">🚀🇺🇸 - #NSFirstHumanFlight: Welcome back !
— Actualités Spatiales🚀 (@ActuSpatiales) July 20, 2021
Jeff Bezos, Mark, Wally Funk et Oliver sont de retour sur terre ! 🎉🚀 pic.twitter.com/3IokPICIyd🚀🇺🇸 - #NSFirstHumanFlight: Welcome back !
— Actualités Spatiales🚀 (@ActuSpatiales) July 20, 2021
Jeff Bezos, Mark, Wally Funk et Oliver sont de retour sur terre ! 🎉🚀 pic.twitter.com/3IokPICIyd
ನ್ಯೂ ಶೆಪರ್ಡ್‌ನ ರಾಕೆಟ್ ಮತ್ತು ಕ್ಯಾಪ್ಸುಲ್ ಅನ್ನು ಲಂಬವಾಗಿ ಉಡಾಯಿಸಲಾಯಿತು. ರಾಕೆಟ್ ಲಾಂಚ್‌ಪ್ಯಾಡ್‌ಗೆ ಮರಳಿತು. ಆದರೆ, ಕ್ಯಾಪ್ಸುಲ್ ಧುಮುಕು ಕೊಡೆಗಳೊಂದಿಗೆ ಭೂಮಿಗೆ ಮರಳಿತು. ಇದು ಪಶ್ಚಿಮ ಟೆಕ್ಸಾಸ್ ಮರುಭೂಮಿಯಲ್ಲಿ ಇಳಿಯಿತು. ಸ್ಪೇಸ್‌ಎಕ್ಸ್ ಫಾಲ್ಕನ್-9 ರಾಕೆಟ್‌ಗಳಂತೆ ಲಂಬವಾಗಿ ಹೊರ ಹೋಗಲು ಮತ್ತು ಇಳಿಯಲು ವಿನ್ಯಾಸಗೊಳಿಸಲಾದ ರಾಕೆಟ್ ಇದಾಗಿದೆ.
ಒಟ್ಟು 11 ನಿಮಿಷಗಳ ಈ ಬಾಹ್ಯಾಕಾಶ ಪ್ರವಾಸದಲ್ಲಿ ಬೆಜೋಸ್ ಅವರ ಹಲವು ವರ್ಷಗಳ ಕನಸು ನನಸಾಗಿದೆ.
ಇದನ್ನು ಓದಿ: ವಿಶ್ವದ ಅತ್ಯಂತ ಸಿರಿವಂತ ವ್ಯಕ್ತಿಯ ಬಾಹ್ಯಾಕಾಶ ಯಾನ: ರೋಚಕ ಪ್ರವಾಸದಲ್ಲಿ ಅತ್ಯಂತ ಕಿರಿಯ, ಹಿರಿಯ ಗಗನಯಾತ್ರಿ!