ETV Bharat / international

ಹವಾಯಿಯ ಬಿಗ್‌ ಐಲ್ಯಾಂಡ್​​ನಲ್ಲಿ ತೀವ್ರ ಭೂಕಂಪ

author img

By

Published : Oct 11, 2021, 8:02 AM IST

ಹವಾಯಿಯ ಬಿಗ್‌ ಐಲ್ಯಾಂಡ್​​ನಲ್ಲಿ 6.1ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.

ಹವಾಯಿಯ ಬಿಗ್‌ ಐಲ್ಯಾಂಡ್​​ನಲ್ಲಿ ತೀವ್ರ ಭೂಕಂಪ
ಹವಾಯಿಯ ಬಿಗ್‌ ಐಲ್ಯಾಂಡ್​​ನಲ್ಲಿ ತೀವ್ರ ಭೂಕಂಪ

ಹಿಲೋ(ಯುನೈಟೆಡ್ ಸ್ಟೇಟ್ಸ್‌): ಹವಾಯಿಯ ಬಿಗ್‌ ಐಲ್ಯಾಂಡ್‌ ತೀರದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.1ರಷ್ಟು ತೀವ್ರತೆ ದಾಖಲಾಗಿದೆ.

ಈ ಪ್ರದೇಶದಲ್ಲಿ ವಾಸಿಸುವ ಜನರು ಭೂಕಂಪದ ಅನುಭವದಿಂದ ಬೆಚ್ಚಿಬಿದ್ದಿದ್ದಾರೆ. ಮನೆಯ ಶೆಲ್ಪ್‌ನಲ್ಲಿದ್ದ ವಸ್ತುಗಳು ಕೆಳಗೆ ಬಿದ್ದಾಗ ನಿವಾಸಿಗಳು ಆತಂಕಕ್ಕೀಡಾದರು ಎಂದು ಅಂತರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಭೂಕಂಪನ ಕೇಂದ್ರ ಪ್ರದೇಶವು 17 ಕಿಲೋ ಮೀಟರ್ ಆಳದಲ್ಲಿತ್ತು ಎಂದು ಯುಸ್ ಜಿಯಲಾಜಿಕಲ್ ಸರ್ವೇ ತಿಳಿಸಿದೆ.

ಸದ್ಯಕ್ಕೆ ಯಾವುದೇ ಸುನಾಮಿ ಭಯ, ಆತಂಕ ಇಲ್ಲ ಎಂದು ಹನೊಲುಲುನಲ್ಲಿರುವ ರಾಷ್ಟ್ರೀಯ ಹವಾಮಾನ ಸೇವೆ ಮಾಹಿತಿ ನೀಡಿದೆ. ಇದೇ ವೇಳೆ, ಹವಾಯಿಯ ಓಹು ಪ್ರದೇಶದ ಜನರು ಭೂಮಿ ನಡುಗಿದ ಅನುಭವವನ್ನು ಹೇಳಿದ್ದಾರೆ. ಘಟನೆಯಲ್ಲಿ ಸದ್ಯಕ್ಕೆ ಯಾವುದೇ ಸಾವು-ನೋವು, ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.