ಬೇಕರ್ಸ್ಫೀಲ್ಡ್ (ಅಮೆರಿಕ): ಸ್ಯಾನ್ ಜೊವಾಕ್ವಿನ್ ವ್ಯಾಲಿ ಮನೆಯೊಳಗೆ ಒತ್ತೆಯಾಳುಗಳಾಗಿರುವ ಜನರನ್ನು ರಕ್ಷಿಸಲು ತಂಡ (SWAT- Special Weapons And Tactics)ವೊಂದು ಹೋಗಿದ್ದು, ಆ ವೇಳೆಯಲ್ಲಾದ ಗುಂಡಿನ ದಾಳಿಯಲ್ಲಿ ಕ್ಯಾಲಿಫೋರ್ನಿಯಾದ ಭದ್ರತಾ ಅಧಿಕಾರಿ ಸೇರಿದಂತೆ ಐವರು ಮೃತಪಟ್ಟಿದ್ದಾರೆಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಬೇಕರ್ಸ್ಫೀಲ್ಡ್ನ ವಾಯವ್ಯದಲ್ಲಿರುವ ಕೃಷಿ ಪ್ರದೇಶದ ಮಧ್ಯದಲ್ಲಿರುವ ವಾಸ್ಕೊದಲ್ಲಿ ಭಾನುವಾರ ಮಧ್ಯಾಹ್ನ ಗುಂಡಿನ ದಾಳಿ ನಡೆದಿದೆ. ಗನ್ಮ್ಯಾನ್ನ ತಾಯಿ, ಪುತ್ರರನ್ನು ಗುರಿಯಾಗಿಸಿಟ್ಟುಕೊಂಡು ಗುಂಡಿನ ದಾಳಿ ನಡೆಸಲಾಗಿದೆ. ನಂತರ ಶಂಕಿತನು ಮನೆಯ ಮೇಲೆ ಬಂದೂಕುಗಳೊಂದಿಗೆ ಎಸ್ಕೇಪ್ ಆಗುವ ವೇಳೆ, ಭದ್ರತಾ ಅಧಿಕಾರಿ ಮೇಲೆ ಗುಂಡಿನ ದಾಳಿ ನಡೆಸಿ, ಬಳಿಕ ಆತನು ಸಾವನ್ನಪ್ಪಿದ್ದಾನೆ.
ಹತ್ಯೆಗೀಡಾದ ಅಧಿಕಾರಿ ಕ್ಯಾಂಪಸ್ ಎಂದು ಗುರುತಿಸಲಾಗಿದೆ. ಇವರು ಶೆರಿಫ್ ಕಚೇರಿಯಲ್ಲಿ ಐದು ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದರು. ಅಫ್ಘಾನಿಸ್ತಾನದಲ್ಲಿ ಅಮೆರಿಕದ ಮೆರೀನ್ಗಳಲ್ಲಿ ಸಾರ್ಜೆಂಟ್ ಆಗಿ ಸೇವೆ ಸಲ್ಲಿಸಿದ ಅನುಭವ ಸಹ ಹೊಂದಿದ್ದರು.
ಕೌಟುಂಬಿಕ ಕಲಹ:
ಕೌಟುಂಬಿಕ ಕಲಹವೇ ಈ ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ಕೌಟುಂಬಿಕ ಕಲಹ ಸಂಬಂಧ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಒತ್ತೆಯಾಳುಗಳಾಗಿರುವವರನ್ನು ರಕ್ಷಿಸಲು ಭದ್ರತಾ ಸಿಬ್ಬಂದಿ/ಪೊಲೀಸರು ಸ್ಥಳಕ್ಕೆ ತಲುಪಿದ್ದರು. ಶಂಕಿತನು 41 ವರ್ಷದ ವ್ಯಕ್ತಿ ಎಂದು ತಿಳಿದು ಬಂದಿದ್ದು, ಹೆಚ್ಚು ಮಾಹಿತಿ ಲಭ್ಯವಾಗಿಲ್ಲ. ರಕ್ಷಣಾ ಕಾರ್ಯಾಚರಣೆ ಸಂದರ್ಭ ಶಂಕಿತ, ಅಧಿಕಾರಿಯೂ ಸೇರಿ ಐವರು ಮೃತಪಟ್ಟಿದ್ದಾರೆ. ಆ ವೇಳೆ ಇಬ್ಬರು ಮಹಿಳೆಯರು, ಇಬ್ಬರು ಬಾಲಕಿಯರು ತಪ್ಪಿಸಿಕೊಂಡಿದ್ದಾರೆ. ಈ ಇಬ್ಬರು ಯಾರೆಂದು ಇನ್ನೂ ಸ್ಪಷ್ಟವಾಗಿಲ್ಲ.