ಮಿನ್ನಿಯಾಪೊಲೀಸ್ ( ಅಮೆರಿಕ) : ಜಾರ್ಜ್ ಫ್ಲಾಯ್ಡ್ ಬಂಧನ ಮತ್ತು ಸಾವಿನ ಪ್ರಕರಣದಲ್ಲಿ ಆರೋಪಿಗಳಾಗಿರುವ ನಾಲ್ವರು ಮಾಜಿ ಮಿನ್ನಿಯಾಪೋಲಿಸ್ ಪೊಲೀಸ್ ಅಧಿಕಾರಿಗಳನ್ನು ಫೆಡರಲ್ ಗ್ರ್ಯಾಂಡ್ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ. ಇವರ ವಿರುದ್ಧ ಕಪ್ಪುವರ್ಣಿಯ ವ್ಯಕ್ತಿಯ ಸಾಂವಿಧಾನಿಕ ಹಕ್ಕುಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಡೆರೆಕ್ ಚೌವಿನ್, ಥಾಮಸ್ ಲೇನ್, ಜೆ. ಕುಯೆಂಗ್ ಮತ್ತು ಟೌಥಾವೊ ವಿರುದ್ಧ ಶುಕ್ರವಾರ ದೋಷರೋಪ ಪಟ್ಟಿ ಸಲ್ಲಿಕೆಯಾಗಿದೆ. ಈ ಪೈಕಿ ಚೌವಿನ್ ಜಾರ್ಜ್ ಫ್ಲಾಯ್ಡ್ ಹತ್ಯೆಯ ಅಪರಾಧಿ ಎಂದು ಕಳೆದ ತಿಂಗಳು ನ್ಯಾಯಾಲಯ ತೀರ್ಪು ನೀಡಿತ್ತು. ಇನ್ನುಳಿದ ಮೂವರ ವಿರುದ್ಧ ಕಳೆದ ಆಗಸ್ಟ್ 23 ರಂದು ವಿಚಾರಣೆ ನಡೆದಿದೆ. ಪ್ರಕರಣದಲ್ಲಿ ಏನಾಗಲಿದೆ ಎಂದು ಗೊತ್ತಿಲ್ಲ. ಸಾಮಾನ್ಯವಾಗಿ ಆರೋಪಿಗಳ ವಿರುದ್ಧ ಫೆಡರಲ್ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿದೆ.
ಮಾಜಿ ಪೊಲೀಸ್ ಅಧಿಕಾರಿಗಳ ವಿರುದ್ಧದ ದೋಷಾರೋಪಣೆ ಪಟ್ಟಿಯು ನ್ಯಾಯಾಂಗದ ಆದ್ಯತೆ ಬಗ್ಗೆ ಬಲವಾದ ಸಂದೇಶ ರವಾನಿಸಲಿದೆ. ಕಳೆದ ವರ್ಷ ಮೇ 25 ರಂದು ಕಪ್ಪು ವರ್ಣಿಯ ಜಾರ್ಜ್ ಫ್ಲಾಯ್ಡ್ ಎಂಬ ವ್ಯಕ್ತಿಯನ್ನು ಬಂಧಿಸಿ, ಸಾರ್ವಜನಿಕವಾಗಿ ಆತನನ್ನು ಹತ್ಯೆ ಮಾಡಲಾಗಿತ್ತು. ಪೊಲೀಸರ ದೌರ್ಜನ್ಯವನ್ನು ಪ್ರತ್ಯಕ್ಷದರ್ಶಿಯೊಬ್ಬ ಮೊಬೈಲ್ ಫೋನ್ನಲ್ಲಿ ಸೆರೆ ಹಿಡಿದಿದ್ದ. ವಿಡಿಯೋ ನೋಡಿದ ಜನ ರೊಚ್ಚಿಗೆದ್ದಿದ್ದರು. ಅಮೆರಿಕದಾದ್ಯಂತ ಈ ವಿಷಯದಲ್ಲಿ ದೊಡ್ಡ ಆಂದೋಲನೇ ನಡೆಯಿತು. ಇಡೀ ಜಗತ್ತಿನಾದ್ಯಂತ ಪ್ರತಿಭಟನೆಯ ಕಾವು ಹಬ್ಬಿತ್ತು. ಕಪ್ಪು ವರ್ಣಿಯರ ಮೇಲಿನ ದೌರ್ಜನ್ಯ ಕೊನೆಗೊಳಿಸಬೇಕೆಂಬ ಕೂಗು ದೊಡ್ಡ ಮಟ್ಟದಲ್ಲಿ ಕೇಳಿ ಬಂದಿತ್ತು.