ETV Bharat / international

ಅಮೆರಿಕದ ಡೆನ್ವೇರ್​ನಲ್ಲಿ ಶೂಟೌಟ್: ಅಪರಾಧಿ ಸೇರಿ ಮೂವರ ಸಾವು - ಅರ್ವಾಡಾದ ಓಲ್ಡೇ ಟೌನ್​

ಡೆನ್ವೇರ್​ನಿಂದ ವಾಯವ್ಯಕ್ಕೆ 10 ಕಿಲೋಮೀಟರ್ ದೂರದಲ್ಲಿರುವ ಅರ್ವಾಡಾದ ಓಲ್ಡೇ ಟೌನ್​ನಲ್ಲಿ ಬಂದೂಕುಧಾರಿಯಿಂದ ಗುಂಡಿನ ದಾಳಿ ನಡೆದಿದೆ.

3 killed in Denver-area shooting, including officer, suspect
ಅಮೆರಿಕದ ಡೆನ್ವೇರ್​ನಲ್ಲಿ ಶೂಟೌಟ್: ಅಪರಾಧಿ ಸೇರಿ ಮೂವರ ಸಾವು..!
author img

By

Published : Jun 22, 2021, 8:24 AM IST

ಅರ್ವಾಡಾ(ಅಮೆರಿಕ): ಬಂದೂಕುಧಾರಿಯೊಬ್ಬ ಓರ್ವ ಅಧಿಕಾರಿ ಮತ್ತು ಮತ್ತೋರ್ವ ವ್ಯಕ್ತಿಯನ್ನು ಕೊಂದು ತದನಂತರ ಪೊಲೀಸರ ಗುಂಡಿನಿಂದ ಹತ್ಯೆಗೀಡಾದ ಘಟನೆ ಅಮೆರಿಕದ ಡೆನ್ವೇರ್ ಉಪ ನಗರದಲ್ಲಿ ನಡೆದಿದೆ.

ಸೋಮವಾರ ಮಧ್ಯಾಹ್ನ 1.15ಕ್ಕೆ ಅಧಿಕಾರಿಯೊಬ್ಬ ಕರೆ ಮಾಡಿ ಅರ್ವಾಡಾ ನಗರದ ಗ್ರಂಥಾಲಯ ಸಮೀಪದಲ್ಲಿ ಅನುಮಾನಾಸ್ಪದ ಘಟನೆ ನಡೆಯುತ್ತಿದೆ ಎಂದು ಹೇಳಿದ್ದಾನೆ. ಇದಾದ 15 ನಿಮಿಷದಲ್ಲಿ ಬಂದೂಕುಧಾರಿಯಿಂದ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಓರ್ವ ಅಧಿಕಾರಿ ಮೃತಪಟ್ಟಿರುವ ಬಗ್ಗೆ ತುರ್ತು ಕರೆಯೊಂದರ ಮೂಲಕ ಗೊತ್ತಾಗಿದೆ ಎಂದು ಪೊಲೀಸ್ ಅಧಿಕಾರಿ ಎಡ್​ ಬ್ರಾಡಿ ಸ್ಪಷ್ಟನೆ ನೀಡಿದ್ದಾರೆ.

ಬಂದೂಕುಧಾರಿಯಿಂದ ಗುಂಡಿನ ದಾಳಿಗೆ ಒಳಗಾದ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದು, ದಾಳಿಕೋರನನ್ನೂ ಹೊಡೆದುರುಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಡೆನ್ವೇರ್​ನಿಂದ ವಾಯವ್ಯಕ್ಕೆ 10 ಕಿಲೋಮೀಟರ್ ದೂರದಲ್ಲಿರುವ ಅರ್ವಾಡಾದ ಓಲ್ಡೇ ಟೌನ್​ನಲ್ಲಿ ಈ ಘಟನೆ ನಡೆದಿದೆ. ಈ ಸ್ಥಳ ರಾಷ್ಟ್ರೀಯ ಐತಿಹಾಸಿಕ ಸ್ಥಳಗಳ ಪಟ್ಟಿಯಲ್ಲಿ ನೋಂದಣಿಯಾಗಿದೆ. ರೆಸ್ಟೋರೆಂಟ್​ಗಳು, ಮಾಲ್​ಗಳ ಮುಂತಾದ ವ್ಯವಹಾರಗಳಿಗೆ ಈ ಸ್ಥಳ ಪ್ರಸಿದ್ಧಿಯಾಗಿದೆ.

ಇದನ್ನೂ ಓದಿ: ಮುಂಬೈನ ಮಂತ್ರಾಲಯಕ್ಕೆ ಹುಸಿ ಬಾಂಬ್ ಸಂದೇಶ: ಓರ್ವನ ಬಂಧನ

ಕೆಲವೇ ದಿನಗಳ ಹಿಂದೆ ಅರ್ವಾಡಾದ ಬೌಲ್ಡರ್ ಪ್ರದೇಶದ ಸಮೀಪದಲ್ಲಿ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿ, ಓರ್ವ ಪೊಲೀಸ್ ಅಧಿಕಾರಿ ಸೇರಿ 10 ಮಂದಿಯನ್ನು ಹತ್ಯೆ ಮಾಡಿದ್ದನು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.