ಸ್ಯಾನ್ ಫ್ರಾನ್ಸಿಸ್ಕೋ : ಯುಕೆಯ 19 ವರ್ಷದ ಮೇಸನ್ ಶೆಪರ್ಡ್ ವಿರುದ್ಧ ಕ್ಯಾಲಿಫೋರ್ನಿಯಾದ ಉತ್ತರ ಜಿಲ್ಲೆಯಲ್ಲಿ ಕ್ರಿಮಿನಲ್ ದೂರಿನಡಿ ವೈರ್ ಫ್ರಾಡ್ ಮಾಡಲು ಸಂಚು, ಮನಿ ಲಾಂಡ್‌ರಿಂಗ್ ಸಂಚು ಮತ್ತು ಸಂರಕ್ಷಿತ ಕಂಪ್ಯೂಟರ್ನೊಳಗೆ ಉದ್ದೇಶಪೂರ್ವಕವಾಗಿ ಆ್ಯಕ್ಸೆಸ್ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದೆ.

ಫ್ಲೋರಿಡಾದ ಒರ್ಲ್ಯಾಂಡೊದ ನಿಮಾ ಫಜೇಲಿ ಮೇಲೆ ಕ್ಯಾಲಿಫೋರ್ನಿಯಾದ ಉತ್ತರ ಜಿಲ್ಲೆಯಲ್ಲಿ ಕ್ರಿಮಿನಲ್ ದೂರಿನ ಆರೋಪಿತರ ಸುರಕ್ಷತೆಗೆ ಸಹಾಯ ಮಾಡಿದ ಹಾಗೂ ಕಂಪ್ಯೂಟರ್‌ನ ಉದ್ದೇಶಪೂರ್ವಕ ಆ್ಯಕ್ಸೆಸ್ಗೆ ಸಹಾಯ ಮಾಡಿದ ಆರೋಪ ಹೊರಿಸಲಾಗಿದೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ.

ಮೂರನೇ ಅಪರಾಧಿ ಬಾಲಾಪರಾಧಿಯಾಗಿದ್ದಾನೆ. ಬಾಲಾಪರಾಧಿಗಳ ಗುರುತನ್ನು ಬಹಿರಂಗಪಡಿಸಲಾಗುವುದಿಲ್ಲ ಎಂದು ಹೇಳಿಕೆ ತಿಳಿಸಿದೆ.

ಕ್ರಿಪ್ಟೋಕರೆನ್ಸಿ ಹಗರಣದಲ್ಲಿ ಸೆಲೆಬ್ರಿಟಿಗಳು, ರಾಜಕಾರಣಿಗಳು ಮತ್ತು ವ್ಯವಹಾರಗಳ ಬೃಹತ್ ಟ್ವಿಟರ್ ಖಾತೆಗಳು ಹ್ಯಾಕಿಂಗ್ಗೆ ಒಳಗಾಗಿವೆ ಎಂದು ಟ್ವಿಟರ್ ನಿನ್ನೆ ಬಹಿರಂಗಪಡಿಸಿದೆ.