ETV Bharat / international

ವಿಶ್ವದಾದ್ಯಂತ 2 ಲಕ್ಷ ಸಮೀಪಿಸಿದ ಸಾವಿನ ಸಂಖ್ಯೆ... ಅಮೆರಿಕಾದಲ್ಲೇ ಅರ್ಧ ಲಕ್ಷ ಜನರು ಮಹಾಮಾರಿಗೆ ಬಲಿ! - ಕೋವಿಡ್​ 19

ಜಗತ್ತಿನಾದ್ಯಂತ ಮಹಾಮಾರಿ ಕೊರೊನಾಗೆ 1,97,297 ಮಂದಿ ಬಲಿಯಾಗಿದ್ದು, ಈ ಪೈಕಿ ಅಮೆರಿಕಾದಲ್ಲೇ 51,017 ಜನರು ಮೃತಪಟ್ಟಿದ್ದಾರೆ.

COVID-19 deaths in US cross 51,000
ಕೊರೊನಾ
author img

By

Published : Apr 25, 2020, 10:40 AM IST

ವಾಷಿಂಗ್ಟ್​ನ್​(ಅಮೆರಿಕಾ): ಪ್ರಪಂಚದಾದ್ಯಂತ ಕೋವಿಡ್​-19 ಅಟ್ಟಹಾಸ ಮುಂದುವರೆದಿದೆ. ಅತಿ ಹೆಚ್ಚು ಸಾವು-ನೋವು ಅನುಭವಿಸುತ್ತಿರುವ ಅಮೆರಿಕಾದಲ್ಲಿ 51,017 ಮಂದಿ ಕೊರೊನಾಕ್ಕೆ ಬಲಿಯಾಗಿದ್ದಾರೆ.

ಅಮೆರಿಕಾದಲ್ಲಿ ಒಂದೇ ದಿನದಲ್ಲಿ 1,258 ಕೊರೊನಾ ಸೋಂಕಿತರು ಮೃತಪಟ್ಟಿದ್ದು, ಕಳೆದ 3 ವಾರಗಳಿಗೆ ಹೋಲಿಸಿದರೆ ಕಡಿಮೆ ಸಾವಿನ ಸಂಖ್ಯೆ ವರದಿಯಾದಂತಾಗಿದೆ. ಸೋಂಕಿತರ ಪೈಕಿಯೂ ಅಮೆರಿಕಾ ಮುಂಚೂಣಿಯಲ್ಲಿದ್ದು, ಈವರೆಗೆ ಬರೋಬ್ಬರಿ 8,90,524 ಪ್ರಕರಣಗಳು ಪತ್ತೆಯಾಗಿವೆ ಎಂಬ ಮಾಹಿತಿಯನ್ನು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ನೀಡಿದೆ.

ಇನ್ನು, ಜಗತ್ತಿನಾದ್ಯಂತ ಮಹಾಮಾರಿಗೆ 1,97,297 ಮಂದಿ ಬಲಿಯಾಗಿದ್ದು, 28,31,337 ಪ್ರಕರಣಗಳು ವರದಿಯಾಗಿವೆ. ಈ ಪೈಕಿ 8,06,439 ರೋಗಿಗಳು ಸೋಂಕಿನಿಂದ ಗುಣಮುಖರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.