ನ್ಯೂಯಾರ್ಕ್: ನ್ಯೂಯಾರ್ಕ್ ರಾಜ್ಯದಲ್ಲಿ ಎರಡು ಸಾಕು ಬೆಕ್ಕುಗಳಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಯುಕ್ತ ರಾಷ್ಟ್ರದ ಅಧಿಕಾರಿಗಳು ಇದೇ ಮೊಟ್ಟ ಮೊದಲ ಬಾರಿಗೆ ಕ್ಯಾಟ್ಗಳಲ್ಲಿ ಸೋಂಕು ದೃಢಪಟ್ಟಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಉಸಿರಾಟದ ಸಮಸ್ಯೆ ಹೊಂದಿದ್ದ ಹಾಗೂ ಚೇತರಿಸಿಕೊಳ್ಳುವ ನಿರೀಕ್ಷೆಯಿರುವ ಬೆಕ್ಕುಗಳು ತಮ್ಮ ಮನೆಗಳಲ್ಲಿ ಅಥವಾ ನೆರೆಹೊರೆಯ ಜನರಿಂದ ಈ ವೈರಸ್‌ಗೆ ತುತ್ತಾಗಿವೆ ಎಂದು ಯುಎಸ್ ಕೃಷಿ ಇಲಾಖೆ ಮತ್ತು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ತಿಳಿಸಿವೆ.
ಬ್ರಾಂಕ್ಸ್ ಮೃಗಾಲಯದಲ್ಲಿನ ಕೆಲವು ಹುಲಿಗಳು ಮತ್ತು ಸಿಂಹಗಳಲ್ಲಿ ಪಾಸಿಟಿವ್ ಕಂಡುಬಂದಿದ್ದು ಬಿಟ್ಟರೆ, ವಿಶ್ವಾದ್ಯಂತ ಪ್ರಾಣಿಗಳಲ್ಲಿ ಕಂಡುಬಂದಿರುವ ಪಾಸಿಟಿವ್ ಪ್ರಕರಣಕ್ಕೆ ಈ ಪ್ರಕರಣವೂ ಸೇರ್ಪಡೆಯಾಗಲಿದೆ.
ಕೆಲವು ಪ್ರಾಣಿಗಳು ಜನರಿಂದ ವೈರಸ್ ಪಡೆಯುವ ಸಾಧ್ಯತೆ ಕಂಡುಬರುತ್ತದೆಯೇ ಹೊರತು, ಸಾಕುಪ್ರಾಣಿಗಳು ಅದನ್ನು ಎಂದಿಗೂ ಮನುಷ್ಯರಿಗೆ ಹರಡುವ ಸೂಚನೆ ಕಂಡುಬಂದಿಲ್ಲ ಎಂದು ರಾಷ್ಟ್ರದ ಉನ್ನತ ಸಾಂಕ್ರಾಮಿಕ ರೋಗ ತಜ್ಞ ಡಾ. ಆಂಥೋನಿ ಫೌಸಿ ಸೇರಿದಂತೆ ಯುಎಸ್ ಅಧಿಕಾರಿಗಳು ಹೇಳಿದ್ದಾರೆ.