ಹೌಸ್ಟನ್, (ಅಮೆರಿಕ) : ಜಗತ್ತಿನಲ್ಲೇ ಇನ್ನೂಬ್ಬ ಓಡದಷ್ಟು ವೇಗವಾಗಿ ಓಡಿ ಒಲಿಂಪಿಕ್‌ನಲ್ಲಿ ವಿಶ್ವ ದಾಖಲೆ ಬರೆದವ ಜಮೈಕಾದ ಉಸೇನ್ ಬೋಲ್ಟ್. 2017ರಲ್ಲಷ್ಟೇ ನಿವೃತ್ತಿ ಹೊಂದಿರುವ ಬೋಲ್ಟ್ ರೆಕಾರ್ಡ್‌ನ ಈವರೆಗೂ ಯಾರೂ ಬ್ರೇಕ್ ಮಾಡಿಲ್ಲ. ಆದರೆ, ಅದನ್ನ ಹಿಂದಿಕ್ಕಲು ಮೀಸೆ ಮೂಡದ ವಿದ್ಯಾರ್ಥಿಯೊಬ್ಬ ರೆಡಿಯಾಗಿದ್ದಾನೆ.
ಕಣ್ಮುಚ್ಚಿ ತೆರೆಯುವಷ್ಟರಲ್ಲೇ ಗುರಿ ತಲುಪುವ ವೇಗದ ಓಟಗಾರ:
![run](https://etvbharatimages.akamaized.net/etvbharat/prod-images/dkknooywwaalukb_0505newsroom_1557031373_71.jpg)
ಓಡುತಿದ್ರೇ ಆತನದು ಚಿರತೆ ವೇಗ. ಕಣ್ಮುಚ್ಚಿ ತೆರೆಯೋವಷ್ಟರಲ್ಲೇ ಗುರಿ ತಲುಪಿರುತ್ತಿದ್ದ. ಗಾಳಿಯನ್ನೇ ಹಿಂದಿಕ್ಕುತ್ತಿದ್ದ. ಜಗತ್ತಿನಲ್ಲಿ ಆ ಸ್ಪೀಡ್‌ನ ತಡೆಯಬಲ್ಲ ಇನ್ನೊಬ್ಬ ವೇಗದ ಓಟಗಾರನೇ ಇಲ್ಲ. ಒಲಿಂಪಿಕ್‌ನಲ್ಲಿ 100 ಮೀಟರ್ ಓಟವನ್ನ ಬರೀ 9.58 ನಿಮಿಷದಲ್ಲಿ ಓಡಿ ವಿಶ್ವ ದಾಖಲೆ ಬರೆದ ವೀರ ಜಮೈಕಾದ ಉಸೇನ್ ಬೋಲ್ಟ್. ಬರೀ 41 ಹೆಜ್ಜೆಯಲ್ಲೇ ಗುರಿ ತಲುಪಿದ್ದ ಬೋಲ್ಟ್. ಈವರೆಗೂ ಈತನ ರೆಕಾರ್ಡ್‌ನ ವಿಶ್ವದಲ್ಲಿ ಯಾರೊಬ್ಬರೂ ಬ್ರೇಕ್ ಮಾಡಿಲ್ಲ. ಆದರೆ, ಹಾಗಂತಾ ನಿರಾಶರಾಗಬೇಕಿಲ್ಲ. ಈಗ ಅಮೆರಿಕಾದಲ್ಲಿ ಬೆಳ್ಳಿಮಿಂಚೊಂದು ಮೂಡಿದೆ.
![run](https://etvbharatimages.akamaized.net/etvbharat/prod-images/d24dc4fwkaa249b_0505newsroom_1557031373_1036.jpg)
18ರ ಹೈದ ಬಿರುಗಾಳಿಗಿಂತ ವೇಗವಾಗಿ ಟ್ರ್ಯಾಕ್‌ನಲ್ಲಿ ಓಡ್ತಾನೆ:
![run](https://etvbharatimages.akamaized.net/etvbharat/prod-images/kt5jjv0r_0505newsroom_1557031373_555.jpg)
ಮ್ಯಾಥೀವ್ ಬೋಲಿಂಗ್ 18ರ ಪೋರ. ಎಲ್ಲರೂ ಇವನನ್ನ 'ವೈಟ್ ಲೈಟ್ನಿಂಗ್' ಅಂತಾರೆ. ಇದರ್ಥ 'ಬೆಳ್ಳಿ ಮಿಂಚು'. ಅಮೆರಿಕಾದಲ್ಲಿ ಮ್ಯಾಥೀವ್ ಬೆಳ್ಳಿಮಿಂಚಿನಂತೆ ಕಂಗೊಳಿಸುತ್ತಿದ್ದಾನೆ. 9.98 ಸೆಕೆಂಡ್ಗಳಲ್ಲೇ 100ಮೀ ಓಡಿ ಮುಗಿಸಿರುವ ಮ್ಯಾಥೀವ್ ಬೋಲಿಂಗ್, ಸ್ವಲ್ಪದರಲ್ಲಿಯೇ ಬೋಲ್ಟ್ ರೆಕಾರ್ಡ್ ಹಿಂದಿಕ್ಕುತ್ತಲಿದ್ದ. ಹೌಸ್ಟನ್ನ ಸ್ಟ್ರೇಕ್ ಜೆಸ್ಯೂಟ್ ಕಾಲೇಜ್ ಪ್ರೆಪ್ನಲ್ಲಿ ನಡೆಸಿದ ಟೆಕ್ಸಾಸ್ ಪ್ರದೇಶ III-6A ಟ್ರ್ಯಾಕ್‌ನಲ್ಲಿ ಓಡಿ ದಾಖಲೆ ನಿರ್ಮಿಸಿದ್ದಾನೆ. 100 ಮೀಟರ್ ಓಟವನ್ನು 9.98ಸೆಕೆಂಡ್ಗಳಲ್ಲೇ ಓಡಿ ಲೆಜೆಂಡರಿ ರನ್ನರ್ ಹುಸೇನ್ ಬೋಲ್ಟ್ ಸಾಧನೆಗೆ ಹತ್ತಿರವಾಗಿದ್ದಾನೆ. ಉಸೇನ್ ಬೋಲ್ಟ್ 100ಮೀ. ಓಟವನ್ನು 9.58ಸೆಕೆಂಡ್ಗಳಲ್ಲಿ ಓಡಿದರೆ, ಈತ ಅದಕ್ಕಿಂತ ಕೇವಲ 0.4ಸೆಕೆಂಡ್ಸ್ ಹಿಂದಿದ್ದಾನೆ.
![run](https://etvbharatimages.akamaized.net/etvbharat/prod-images/dj7p-uxu8aacqlo_0505newsroom_1557031373_670.jpg)
ಬೆವರು ಹರಿಸುವ ಬೋಲಿಂಗ್ಗೆ ವೇಗ ಇನ್ನಷ್ಟು ಹೆಚ್ಚಿಸುವ ತವಕ:
![run](https://etvbharatimages.akamaized.net/etvbharat/prod-images/d5nlaicwkae2etq_0505newsroom_1557031373_206.jpg)
ಕೊನೆಯ ಬಾರಿ ಬೋಲ್ಟ್ ಒಲಿಂಪಿಕ್ಸ್ನಲ್ಲಿ ಓಡಿದ ವೇಗಕ್ಕೆ ಹೊಲಿಸಿದರೆ ಕೇವಲ 0.17 ಸೆಕೆಂಡ್ಸ್ ಹಿಂದಿದ್ದಾನೆ ಮ್ಯಾಥೀವ್. ಪ್ರಸ್ತುತ 4.2 ಎಂಪಿಹೆಚ್ ಗಾಳಿ ಚಾಲ್ತಿಯಲ್ಲಿರುವ ಕಾರಣ ಬೋಲಿಂಗ್ನ 9.98 ಸೆಕೆಂಡ್ ಡ್ಯಾಶ್‌ನ ರಾಷ್ಟ್ರೀಯ ದಾಖಲೆಯೆಂದು ಪರಿಗಣಿಸಿಲ್ಲ ಎಂದು ಹೌಸ್ಟನ್ ಕ್ರಾನಿಕಲ್ ವರದಿ ಮಾಡಿದೆ. ಸಂದರ್ಶನವೊಂದರಲ್ಲಿ ತಮ್ಮ ಮನದಾಳ ಹಂಚಿಕೊಂಡ ಬೋಲಿಂಗ್, ಇದ್ಯಾವುದೂ ರಾತ್ರೊರಾತ್ರಿ ಬಂದ ಯಶಸ್ಸಲ್ಲ. ಇದಕ್ಕಾಗಿ ಬೆವರಿಳಿಸಿ ಶ್ರಮ ಪಡಬೇಕು, ಶ್ರದ್ಧೆ ಅವಶ್ಯಕತೆ. ನನ್ನ ಮುಂದೆ ಇನ್ನೂ ಸಾಕಷ್ಟು ಇವೆಂಟ್‌ಗಳಿವೆ. ವೇಗವನ್ನ ಇನ್ನಷ್ಟು ಹೆಚ್ಚಿಸುವತ್ತ ಗಮನ ಹರಿಸಿರುವೆ. ನನ್ನ ಈ ದಾಖಲೆಯನ್ನ ಇನ್ನಷ್ಟು ಸುಧಾರಿಸೋದಕ್ಕೆ ಎಫರ್ಟ್ ಹಾಕುವೆ ಅಂತಾ ಹೇಳಿದ್ದಾರೆ.
![run](https://etvbharatimages.akamaized.net/etvbharat/prod-images/d3onzmqwkaeemd1_0505newsroom_1557031373_505.jpg)
ಟೊಕಿಯೊ 2020 ಒಲಿಂಪಿಕ್‌ನಲ್ಲಿ ಚಿನ್ನಕ್ಕೆ ಮುತ್ತಿಕ್ಕುವ ತವಕ:
![run](https://etvbharatimages.akamaized.net/etvbharat/prod-images/d3w2hmwu8aaogwx_0505newsroom_1557031373_4.jpg)
![run](https://etvbharatimages.akamaized.net/etvbharat/prod-images/evowcgee_0505newsroom_1557031373_339.jpg)
2017ರಿಂದ ತಮ್ಮ ಶೂ ಕಳಚಿ ನಿವೃತ್ತಿ ಘೋಷಿಸಿದ್ದಾರೆ ಉಸೇನ್ ಬೋಲ್ಟ್. ಆದರೆ, ಬೋಲ್ಟ್ ಮೀರಿಸಲು ಇನ್ನೊಬ್ಬ ಹುಟ್ಟಿಕೊಂಡಿದ್ದಾನೆ. 20 ವಯಸ್ಸಿನೊಳಗಿನ ಕೆಟಗೆರಿಯೊಳಗೆ 2014ರಲ್ಲಿ ಟ್ರೆಂಟಾವಿಸ್ ಫ್ರೈಡೇ ಎಂಬಾತ 10 ಸೆಕೆಂಡ್‌ನಲ್ಲಿ 100 ಮೀಟರ್ ಓಟ ಕಂಪ್ಲೀಟ್ ಮಾಡಿದ್ದ. ಆದರೆ, ಅದನ್ನ ಬಿಟ್ರೇ ಮ್ಯಾಥೀವ್ ಬೋಲಿಂಗ್ ಬರೀ 9.98 ಸೆಕೆಂಡ್‌ನಲ್ಲಿ 100 ಮೀಟರ್ ಓಟ ಕಂಪ್ಲೀಟ್ ಮಾಡಿದ್ದಾನೆ. ಟೊಕಿಯೊದ 2020 ಒಲಿಂಪಿಕ್ ಗೇಮ್ಸ್‌ಗೆ ಆಯ್ಕೆಯಾಗಿ ಚಿನ್ನದ ಪದಕ ಬೇಟೆ ಆಡ್ಬೇಕು ಅನ್ನೋದು ಬೋಲಿಂಗ್ ಮುಂದಿರುವ ಗುರಿ.