ವಾಷಿಂಗ್ಟನ್ [ಯುಎಸ್]: ಯುಎಸ್ ಎಫ್-35 ಜೆಟ್ ದಕ್ಷಿಣ ಚೀನಾ ಸಮುದ್ರದಲ್ಲಿ ಪತನಗೊಂಡಿದೆ. ಅವಘಡದಲ್ಲಿ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದು, ಮಿಲಿಟರಿ ಹೆಲಿಕಾಪ್ಟರ್ ಮೂಲಕ ಸ್ಥಳಾಂತರಿಸಲಾಗಿದೆ ಎಂದು ಯುಎಸ್ ನೌಕಾಪಡೆ ಮಾಹಿತಿ ನೀಡಿದೆ.
ದಕ್ಷಿಣ ಚೀನಾ ಸಮುದ್ರದಲ್ಲಿ ಯುಎಸ್ಎಸ್ ಕಾರ್ಲ್ ವಿನ್ಸನ್ (CVN 70) ಮೂಲಕ ನಡೆಸಲಾದ ಹಾರಾಟದ ಕಾರ್ಯಾಚರಣೆ ವೇಳೆ ಲ್ಯಾಂಡಿಂಗ್ ಆಗುವಾಗ ಅಪಘಾತ ಸಂಭವಿಸಿದೆ. ಈ ಸಂದರ್ಭದಲ್ಲಿ ಪೈಲಟ್ ಸುರಕ್ಷಿತವಾಗಿ ವಿಮಾನದಿಂದ ಹೊರಬಂದಿದ್ದು, ಯುಎಸ್ ಮಿಲಿಟರಿ ಹೆಲಿಕಾಪ್ಟರ್ ಮೂಲಕ ಅವರನ್ನು ಸ್ಥಳಾಂತರ ಮಾಡಲಾಗಿದೆ.
ಘಟನೆಯಲ್ಲಿ ಇತರ ಏಳು ಮಂದಿ ನಾವಿಕರು ಗಾಯಗೊಂಡಿದ್ದು, ಇವರಲ್ಲಿ ಮೂವರನ್ನು ಫಿಲಿಪೈನ್ಸ್‌ನ ಮನಿಲಾಕ್ಕೆ ಚಿಕಿತ್ಸೆಗೆಂದು ಸ್ಥಳಾಂತರಿಸಲಾಗಿದೆ. ಇತರ ನಾಲ್ವರು ನಾವಿಕರು ಸ್ಥಳದಲ್ಲೇ ವೈದ್ಯಕೀಯ ಸಿಬ್ಬಂದಿಯಿಂದ ಚಿಕಿತ್ಸೆ ಪಡೆದಿದ್ದಾರೆ.
ಇದನ್ನೂ ಓದಿ: Watch Video: ಕಂದಕದ ಅಂಚಿನಲ್ಲಿ ಕಾರು ಯೂಟರ್ನ್ ಮಾಡಿ ಚಾಲಕನ ದುಸ್ಸಾಹಸ