ETV Bharat / international

ದಕ್ಷಿಣ ಆಫ್ರಿಕಾದಲ್ಲಿವೆ ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆಗಳು: ಭಾರತದ ಸ್ಥಾನ ಎಷ್ಟು ಗೊತ್ತಾ? - ಅಪಾಯಕಾರಿ ರಸ್ತೆಗಳು

ಅಂತಾರಾಷ್ಟ್ರೀಯ ಚಾಲಕ ಶಿಕ್ಷಣ ಕಂಪನಿ ಜುಟೋಬಿ ಕೈಗೊಂಡ ಸಂಶೋಧನಾ ಅಧ್ಯಯನದ ಪ್ರಕಾರ ದಕ್ಷಿಣ ಆಫ್ರಿಕಾವು ವಾಹನ ಚಲಾಯಿಸುವವರಿಗೆ ವಿಶ್ವದ ಅತ್ಯಂತ ಅಪಾಯಕಾರಿ ದೇಶವೆಂದು ಗುರುತಿಸಲಾಗಿದೆ. ವಿಶೇಷ ಎಂದರೆ ಈ ವರದಿಯಲ್ಲಿ ಭಾರತ ನಾಲ್ಕನೇ ಸ್ಥಾನ ಪಡೆದುಕೊಂಡು ಆತಂಕಕ್ಕೆ ಕಾರಣವಾಗಿದೆ.

South Africa
ಅಂತಾರಾಷ್ಟ್ರೀಯ ಚಾಲಕ ಶಿಕ್ಷಣ ಕಂಪನಿ ಜುಟೋಬಿ
author img

By

Published : Mar 19, 2021, 8:35 AM IST

ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾವು ವಾಹನ ಚಲಾಯಿಸುವವರಿಗೆ ವಿಶ್ವದ ಅತ್ಯಂತ ಅಪಾಯಕಾರಿ ದೇಶವೆಂದು ಗುರುತಿಸಲಾಗಿದೆ. ಈ ಪಟ್ಟಿಯಲ್ಲಿ ಭಾರತಕ್ಕೂ ನಾಲ್ಕನೇ ಸ್ಥಾನ ದಕ್ಕಿದೆ. ಅಂತಾರಾಷ್ಟ್ರೀಯ ಚಾಲಕ ಶಿಕ್ಷಣ ಕಂಪನಿ ಜುಟೋಬಿ ಸಂಶೋಧನಾ ಅಧ್ಯಯನ ಈ ಮಾಹಿತಿ ಬಹಿರಂಗಪಡಿಸಿದೆ.

ಅಧ್ಯಯನದ 56 ದೇಶಗಳ ಪಟ್ಟಿಯಲ್ಲಿ, ಥಾಯ್ಲೆಂಡ್​ ಎರಡನೇ ಸ್ಥಾನದಲ್ಲಿದೆ ಮತ್ತು ಅಮೆರಿಕ ಈ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

ವಿಶ್ವದ ಸುರಕ್ಷಿತ ರಸ್ತೆಗಳ ಪಟ್ಟಿಯಲ್ಲಿ ನಾರ್ವೆ ಮೊದಲ ಸ್ಥಾನ ಪಡೆದರೆ, ಜಪಾನ್ ಎರಡನೇ ಸ್ಥಾನ ಮತ್ತು ಸ್ವೀಡನ್ ಮೂರನೇ ಸುರಕ್ಷಿತ ರಸ್ತೆಗಳನ್ನು ಹೊಂದಿದ ರಾಷ್ಟ್ರಗಳು ಎಂಬ ಶ್ರೇಯಕ್ಕೆ ಭಾಜನವಾಗಿವೆ.

1,00,000 ಜನಸಂಖ್ಯೆಯಲ್ಲಿ ರಸ್ತೆ ಅಪಘಾತದಲ್ಲಿ ಸಾವಿನ ಸಂಖ್ಯೆಯ ಅಂದಾಜು ವಾಹನದ ಮುಂಭಾಗದಲ್ಲಿ ಪ್ರಯಾಣಿಸುವಾಗ ಸೀಟ್-ಬೆಲ್ಟ್ ಬಳಸುವವರ ಶೇಕಡಾವಾರು, ರಾಷ್ಟ್ರೀಯ ಕಾನೂನು ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಆಲ್ಕೊಹಾಲ್ ಸೇವಿಸಿ ರಸ್ತೆ ಅಪಘಾತ ಅಪಘಾತಕ್ಕೆ ಕಾರಣವಾದ ಪ್ರಮಾಣದ ಮೇಲೆ ಈ ವರದಿ ಸಿದ್ಧವಾಗಿದೆ. ಈ ಅಂದಾಜುಗಳು ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಆರೋಗ್ಯ ವೀಕ್ಷಣಾಲಯ ದತ್ತಾಂಶವನ್ನು ಆಧರಿಸಿವೆ ಎಂಬುದು ಗಮನಿಸಬೇಕಾದ ಅಂಶವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.