ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧ್ಯಕ್ಷೀಯ ಕಚೇರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂದು ಮುಂಜಾನೆ ಕೇಪ್ ಟೌನ್‌ನಲ್ಲಿ ಮಾಜಿ ಉಪ ಅಧ್ಯಕ್ಷ ಎಫ್‌ಡಬ್ಲ್ಯೂ ಡಿ ಕ್ಲರ್ಕ್ ಅವರ ಗೌರವಾರ್ಥವಾಗಿ ರಾಜ್ಯ ಸ್ಮಾರಕ ಸೇವೆಯ ನಂತರ ರಾಮಫೋಸಾ ಅಸ್ವಸ್ಥಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ರಕ್ಷಣಾ ಪಡೆಯ ಮಿಲಿಟರಿ ಆರೋಗ್ಯ ಸೇವೆಯಿಂದ ಮೇಲ್ವಿಚಾರಣೆ ಮಾಡಲಾಗುತ್ತಿದೆ. ರಾಮಾಫೋಸಾ ಅವರು ಕೇಪ್ ಟೌನ್‌ನಲ್ಲಿ ಐಸೋಲೆಷನ್ಗೆ ಒಳಗಾಗಿದ್ದಾರೆ. ಮುಂದಿನ ವಾರದವರೆಗೆ ಎಲ್ಲಾ ಜವಾಬ್ದಾರಿಗಳನ್ನು ಉಪಾಧ್ಯಕ್ಷ ಡೇವಿಡ್ ಮಬುಜಾ ಅವರಿಗೆ ವಹಿಸಲಾಗಿದೆ.
ಡಿಸೆಂಬರ್ 8 ರಂದು ಜೋಹಾನ್ಸ್‌ಬರ್ಗ್‌ಗೆ ಹಿಂದಿರುಗಿದ ನಂತರ ರಾಮಫೋಸಾ ಅವರನ್ನು ಪರೀಕ್ಷಿಸಿದಾಗ ವರದಿ ನೆಗಟಿವ್ ವರದಿ ಬಂದಿತ್ತು. ಸದ್ಯ ಅಧ್ಯಕ್ಷರು ಲಸಿಕೆ ಪಡೆದು ಎಲ್ಲರೂ ಜಾಗೃತರಾಗಿರುವಂತೆ ಜನರಿಗೆ ಸಲಹೆ ನೀಡಿದ್ದಾರೆ.
ಕೆಲ ದಿನಗಳ ಹಿಂದೆ, ನೈಜೀರಿಯಾ, ಕೋಟ್ ಡಿ ಐವೊಯಿರ್, ಘಾನಾ ಮತ್ತು ಸೆನೆಗಲ್ ಸೇರಿದಂತೆ ಪಶ್ಚಿಮ ಆಫ್ರಿಕಾದ ನಾಲ್ಕು ರಾಜ್ಯಗಳ ಭೇಟಿಯನ್ನು ಪೂರ್ಣಗೊಳಿಸಿದ್ದರು. ನಂತರ ಅಧ್ಯಕ್ಷರು ಹಾಗೂ ದಕ್ಷಿಣ ಆಫ್ರಿಕಾದ ನಿಯೋಗವನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂದು ಅಧ್ಯಕ್ಷ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
-
Wishing you a speedy recovery my friend, President @CyrilRamaphosa. https://t.co/mYudl71Dmz
— Narendra Modi (@narendramodi) December 13, 2021 " class="align-text-top noRightClick twitterSection" data="
">Wishing you a speedy recovery my friend, President @CyrilRamaphosa. https://t.co/mYudl71Dmz
— Narendra Modi (@narendramodi) December 13, 2021Wishing you a speedy recovery my friend, President @CyrilRamaphosa. https://t.co/mYudl71Dmz
— Narendra Modi (@narendramodi) December 13, 2021
ಈ ಕುರಿತು ಟ್ಟೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಕೋವಿಡ್-19 ನಿಂದ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.