ಕೈರೋ: ಲಿಬಿಯಾದ ಕರಾವಳಿಯಲ್ಲಿ ರಬ್ಬರ್ ದೋಣಿಯೊಂದು ಮುಳುಗಿ 100ಕ್ಕೂ ಅಧಿಕ ಮಂದಿ ನಿರಾಶ್ರಿತರು ಹಾಗೂ ವಲಸಿಗರು ಮೃತಪಟ್ಟಿರುವ ಮಹಾ ದುರಂತ ಸಂಭವಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಎಸ್‌ಒಎಸ್ ಮೆಡಿಟರೇನಿಯನ್ ರಕ್ಷಣಾ ಪಡೆ, ಕಳೆದ ಬುಧವಾರ ಲಿಬಿಯಾ ಮೆಡಿಟರೇನಿಯನ್ ಕರಾವಳಿಯಿಂದ ಯೂರೋಪಿನತ್ತ ತೆರಳುತ್ತಿದ್ದ ದೋಣಿ ಸಮುದ್ರದಲ್ಲಿ ಮುಳುಗಡೆಯಾಗಿದೆ. ದೋಣಿಯಲ್ಲಿ 130 ಜನ ವಲಸಿಗರು ಇದ್ದರು ಎಂದು ತಿಳಿಸಿದೆ.
ಇದನ್ನೂ ಓದಿ: ಆಂಧ್ರಪ್ರದೇಶದ ಪೂರ್ವ ಗೋದಾವರಿಯಲ್ಲಿನ ಒಎನ್‌ಜಿಸಿಯಲ್ಲಿ ಭಾರಿ ಅಗ್ನಿ ಅವಘಡ
ಘಟನಾ ಸ್ಥಳದಲ್ಲಿ ದೋಣಿಯ ಅವಶೇಷ ದೊರೆತಿದ್ದು, 10 ಮೃತ ದೇಹಗಳು ಪತ್ತೆಯಾಗಿವೆ. ಉಳಿದವರು ಕೂಡ ಜಲ ಸಮಾಧಿಯಾಗಿರಬಹುದು ಎಂದು ರಕ್ಷಣಾ ಪಡೆ ಶಂಕೆ ವ್ಯಕ್ತಪಡಿಸಿದೆ. ಲಿಬಿಯಾ ಕರಾವಳಿ ಪಡೆ ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿಸಿದೆ.