ಅಂಟಾನನರಿವೊ (ಮಡಗಾಸ್ಕರ್): ಭಾರಿ ಪ್ರವಾಹ ಮತ್ತು ಭೂಕುಸಿತದಿಂದ ಕಂಗಾಲಾಗಿದ್ದ ಸಂದರ್ಭದಲ್ಲಿ ಮಡಗಾಸ್ಕರ್ ಜನರ ಸಹಾಯಕ್ಕೆ ನಿಂತಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮಡಗಾಸ್ಕರ್ ಅಧ್ಯಕ್ಷ ಆಂಡ್ರಿ ರಾಜೋಲಿನಾ ಧನ್ಯವಾದ ಅರ್ಪಿಸಿದ್ದಾರೆ.
-
Thank you Prime Minister @narendramodi and Defence Minister @rajnathsingh for standing with the Malagasy people and for your support during the time of heavy flooding in #Madagascar.
— Andry Rajoelina (@SE_Rajoelina) February 4, 2020 " class="align-text-top noRightClick twitterSection" data="
">Thank you Prime Minister @narendramodi and Defence Minister @rajnathsingh for standing with the Malagasy people and for your support during the time of heavy flooding in #Madagascar.
— Andry Rajoelina (@SE_Rajoelina) February 4, 2020Thank you Prime Minister @narendramodi and Defence Minister @rajnathsingh for standing with the Malagasy people and for your support during the time of heavy flooding in #Madagascar.
— Andry Rajoelina (@SE_Rajoelina) February 4, 2020
'ಭಾರಿ ಪ್ರವಾಹದ ಸಂದರ್ಭದಲ್ಲಿ ಮಲಗಾಸಿ ಜನರ ಸಹಾಯಕ್ಕೆ ನಿಂತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಧನ್ಯವಾದಗಳು' ಎಂದು ಆಂಡ್ರಿ ರಾಜೋಲಿನಾ ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ಪೂರ್ವ ಆಫ್ರಿಕಾದ ರಾಷ್ಟ್ರದಲ್ಲಿ ಭಾರಿ ಮಳೆಯಿಂದ ಪ್ರವಾಹ ಮತ್ತು ಭೂಕುಸಿತ ಉಂಟಾಗಿತ್ತು. ಈ ಸಂದರ್ಭದಲ್ಲಿ ಮಡಗಾಸ್ಕರ್ ಸಹಾಯಕ್ಕಾಗಿ ಭಾರತ ನೌಕಾದಳ 'ಆಪರೇಶನ್ ವೆನಿಲ್ಲಾ' ಹೆಸರಿನಲ್ಲಿ ಐರಾವತಾ ನೌಕೆಯ ಮೂಲಕ ಪರಿಹಾರ ಸಾಮಗ್ರಿಗಳನ್ನು ಹೊತ್ತು ಸಾಗಿತ್ತು. ಪರಿಹಾರ ಸಾಮಗ್ರಿಗಳಲ್ಲಿ ಅಕ್ಕಿ, ಟೀ ಪುಡಿ, ಅಡುಗೆ ಎಣ್ಣೆ, ಹಿಟ್ಟು, ಚಾಕೊಲೆಟ್, ಹಾಲಿನ ಪುಡಿ, ಬಿಸ್ಕತ್ತುಗಳು, ಜಾಮ್, ಬಟ್ಟೆ, ಟಾರ್ಪಾಲಿನ್ಗಳು, ಬೆಡ್ ಶೀಟ್ಗಳು, ಹಾಸಿಗೆ, ಶೂಗಳು, ಅಗತ್ಯ ವಸ್ತುಗಳು, ಬ್ಯಾಟರಿಗಳು, ಸಿಬ್ಬಂದಿ ರಕ್ಷಣಾ ಸಾಧನಗಳು ಹಾಗು ಔಷಧಿ ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನ ಕಳುಹಿಸಿಕೊಡಲಾಗಿತ್ತು. ಪ್ರವಾಹದಿಂದ ಮಡಗಾಸ್ಕರ್ನಲ್ಲಿ 30 ಜನ ಸಾವಿಗೀಡಾಗಿದ್ದು, ಸಾವಿರಾರು ಜನರನ್ನ ಸ್ಥಳಾಂತರಿಸಲಾಗಿದೆ.