ಲಾಗೋಸ್ (ನೈಜೀರಿಯಾ): ಅಪರಿಚಿತ ಬಂದೂಕುಧಾರಿಗಳು ಉತ್ತರ ಮಧ್ಯ ನೈಜೀರಿಯಾದ ಮಾಧ್ಯಮಿಕ ಶಾಲೆಗೆ ನುಗ್ಗಿ ಕೆಲವು ವಿದ್ಯಾರ್ಥಿಗಳನ್ನು ಅಪಹರಿಸಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ.
ನೈಜರ್ನ ಕಾಗರ ಎಂಬಲ್ಲಿರುವ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಸುಮಾರು 1,000 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗ ಇದ್ದರು. ಆದರೆ ಬಂದೂಕುಧಾರಿಗಳ ದಾಳಿಯ ವೇಳೆ ಕೆಲ ವಿದ್ಯಾರ್ಥಿಗಳು ತಪ್ಪಿಸಿಕೊಂಡು ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಯಲ್ಲಿ ಎಷ್ಟು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ ಎಂಬ ಬಗ್ಗೆ ಇನ್ನು ಸರಿಯಾದ ಮಾಹಿತಿ ಲಭ್ಯವಾಗಿಲ್ಲ.
ಮೂಲಗಳ ಪ್ರಕಾರ, ಮಿಲಿಟರಿ ವಿಮಾನಗಳನ್ನು ನಿಯೋಜಿಸುವ ಮೂಲಕ ಬಂದೂಕುಧಾರಿಗಳನ್ನು ಪತ್ತೆ ಹಚ್ಚಿ ಅಪಹರಣಕ್ಕೊಳಗಾದ ವಿದ್ಯಾರ್ಥಿಗಳನ್ನು ರಕ್ಷಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ: ನ್ಯೂಜೆರ್ಸಿ: ಅಟ್ಲಾಂಟಿಕ್ ಸಿಟಿಯ ಪ್ರಸಿದ್ಧ ಟ್ರಂಪ್ ಕ್ಯಾಸಿನೊ ನೆಲಸಮ