ನೈರೋಬಿ : ಇಥಿಯೋಪಿಯಾ ಮಿಲಿಟರಿ ಹಾಗೂ ಟೈಗ್ರೆ ಪ್ರದೇಶದಲ್ಲಿರುವ ಸ್ಥಳೀಯ ಸೇನೆಯ ನಡುವೆ ಸಂಘರ್ಷ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಟೈಗ್ರೆ ಸ್ಥಳೀಯ ಸೇನೆಗೆ ಶರಣಾಗಲು ನೀಡಿದ್ದ 72 ಗಂಟೆಗಳ ಅವಧಿ ಮುಕ್ತಾಯವಾಗಿದೆ ಎಂದು ಪ್ರಧಾನಿ ಸ್ಪಷ್ಟನೆ ನೀಡಿದ್ದಾರೆ.
ಬುಧವಾರ ಮಾತನಾಡಿರುವ ಪ್ರಧಾನಿ ಅಬಿ ಅಹ್ಮದ್, ಒಳ್ಳೆಯ ಸ್ನೇಹಿತರು ನಮ್ಮ ಕಾಳಜಿಗಾಗಿ ಹೇಳುವ ಮಾತುಗಳನ್ನು ನಾವು ಕೇಳಿಸಿಕೊಳ್ಳುತ್ತೇವೆ. ಆದರೆ, ನಮ್ಮ ಆಂತರಿಕ ವಿಚಾರದಲ್ಲಿ ಯಾರೂ ಕೂಡ ಹಸ್ತಕ್ಷೇಪ ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
'ಟ್ರೀಟಿ ಆಫ್ ಓಪನ್ ಸ್ಕೈಸ್'ನಿಂದ ಹೊರ ಬರುವುದಾಗಿ ಘೋಷಿಸಿದ ಯುಎಸ್
ಇದರ ಜೊತೆಗೆ ಇಥಿಯೋಪಿಯಾ ಸರ್ಕಾರದ ಪರವಾಗಿ ಅಂತಾರಾಷ್ಟ್ರೀಯ ಸಮುದಾಯ ನಿಲ್ಲಬೇಕು ಹಾಗೂ ನಮ್ಮ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವುದರಿಂದ ಅಂತಾರಾಷ್ಟ್ರೀಯ ಸಮುದಾಯ ದೂರವಿರುವುದನ್ನು ನಾವು ಗೌರವಿಸುತ್ತೇವೆ ಎಂದು ಪ್ರಧಾನಿ ಹೇಳಿದ್ದಾರೆ.
ಏನಿದು ಇಥಿಯೋಪಿಯಾ ಹಾಗೂ ಟೈಗ್ರೆ ಸಂಘರ್ಷ?
ಇಥಿಯೋಪಿಯಾ ಹಲವು ಪ್ರಾದೇಶಿಕ ಒಕ್ಕೂಟಗಳನ್ನು ಹೊಂದಿದ್ದು, ಅದರಲ್ಲಿ ಟೈಗ್ರೆ ಪ್ರದೇಶವೂ ಕೂಡ ಒಂದು. ಇಲ್ಲಿರುವ ಸಮುದಾಯ ಅಲ್ಪಸಂಖ್ಯಾತರಾಗಿದ್ದು, ಇಲ್ಲಿನ ರಾಜಕೀಯ ನಾಯಕರನ್ನು ಬದಿಗೊತ್ತಿರುವ ಆರೋಪ ಇಥಿಯೋಪಿಯಾ ಸರ್ಕಾರದ ಮೇಲೆ ಹಾಗೂ ಅಲ್ಲಿನ ಪ್ರಧಾನಿಗಳ ಮೇಲೆ ಕೇಳಿ ಬರುತ್ತಿದೆ.
ಇದರಿಂದಾಗಿ ನವೆಂಬರ್ ತಿಂಗಳಿನಿಂದ ಟೈಗ್ರೆ ಪ್ರದೇಶದ ಸ್ಥಳೀಯ ಮಿಲಿಟರಿ ಹಾಗೂ ಇಥಿಯೋಪಿಯಾ ಸರ್ಕಾರದ ಮಿಲಿಟರಿ ವಿರುದ್ಧ ಬಂಡೆದಿದ್ದು, ಹಲವು ದಾಳಿಗಳನ್ನು ನಡೆಸಿದೆ. ಈ ದಾಳಿಗಳನ್ನ ನಿಲ್ಲಿಸಿ, ಶರಣಾಗುವಂತೆ ಟೈಗ್ರೆ ಮಿಲಿಟರಿಗೆ ಇಥಿಯೋಪಿಯಾ ಸರ್ಕಾರ 72 ಗಂಟೆಗಳ ಡೆಡ್‌ಲೈನ್ ನೀಡಿತ್ತು.
ಇಥಿಯೋಪಿಯಾ ಸರ್ಕಾರದ ಡೆಡ್‌ಲೈನ್ ಮೀರಿದ ಕಾರಣದಿಂದ ಸ್ಥಳೀಯ ಮಿಲಿಟರಿ ವಿರುದ್ಧ ಯುದ್ಧ ಘೋಷಣೆಯ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ಯುದ್ಧದಲ್ಲಿ ಅಂತಾರಾಷ್ಟ್ರೀಯ ಸಮುದಾಯದ ಹಸ್ತಕ್ಷೇಪ ಬೇಡ ಎಂದು ಪ್ರಧಾನಿ ಅಬಿ ಅಹ್ಮದ್ ಹೇಳಿದ್ದಾರೆ.