ನೈರೋಬಿ : ಕೊರೊನಾ ಜಗತ್ತಿನಾದ್ಯಂತ ಹರಡಿ ಎಲ್ಲರನ್ನು ತತ್ತರಿಸುವಂತೆ ಮಾಡಿದೆ. ಆದರೆ, ಪೂರ್ವ ಆಫ್ರಿಕಾದಲ್ಲಿ ಇದು ಮೋಡಿ ಮಾಡಿರೋದು ಕೇಶರಾಶಿಯ ಮೇಲೆ. ಇಲ್ಲಿ ತಲೆಗೂದಲನ್ನೇ ವೈರಸ್ನಂತೆ ಹೋಲುವ ವಿನ್ಯಾಸದಲ್ಲಿ ಹೆಣೆಯಲ್ಪಟ್ಟ ಸ್ಪೈಕ್‌ಗಳನ್ನು ಮಾಡಿ ಜನ ಖುಷಿ ಪಟ್ಟಿದ್ದಾರೆ.
ಕೊರೊನಾ ಕಾರಣದಿಂದ ಲಾಕ್ಡೌನ್ ಸ್ಥಿತಿ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಜನರು ವಿಶಿಷ್ಟ ರೀತಿಯ ಕೇಶವಿನ್ಯಾಸವನ್ನು ಮಾಡಿಕೊಂಡಿರುವುದನ್ನ ನೋಡಿರುತ್ತೇವೆ. ಆಫ್ರಿಕಾದ ಈ ಶೈಲಿಗೆ ಅಲ್ಲಿನ ತಾಯಂದಿರು ಹೇಳುವುದೇನೆಂದರೆ ಇದು ತೀರಾ ಸುಲಭವಾಗಿ ಮಾಡುವ ಕೇಶ ವಿನ್ಯಾಸ, ಅದರೊಂದಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ ಎನ್ನುತ್ತಾರೆ.
ಆದರೆ, ಇತ್ತೀಚೆಗೆ ಭಾರತ, ಚೀನಾ ಮತ್ತು ಬ್ರೆಜಿಲ್‌ನಿಂದ ನೈಜ ಮತ್ತು ಸಿಂಥೆಟಿಕ್ ಕೂದಲನ್ನು ಆಮದು ಮಾಡಿಕೊಳ್ಳುವುದರಿಂದ ಕೇಶ ವಿನ್ಯಾಸದ ಫ್ಯಾಷನ್ನಿಂದ ಜನರು ದೂರ ಉಳಿದಿದ್ದರು. ಆದರೆ, ಹೇರ್ ಸಲೂನ್ಗಳಲ್ಲಿನ ಮಹಿಳೆಯರಿಗೆ ಇದು ಲಾಭದಾಯಕವಾಯ್ತು. ಈ ವಿನ್ಯಾಸವನ್ನು ಆಫ್ರಿಕಾದ ಬಹುತೇಕ ಪ್ರದೇಶಗಳಲ್ಲಿ ಜನರು ಇಷ್ಟಪಟ್ಟು ಮಾಡಿಸಿಕೊಳ್ಳುತ್ತಿದ್ದಾರೆ.
ಸದ್ಯ ಕೀನ್ಯಾದ ರಾಜಧಾನಿ ನೈರೋಬಿಯ ಹೃದಯ ಭಾಗದ ಕೊಳೆಗೇರಿಯಲ್ಲಿರುವ ಕಿಬೆರಾದ ಬ್ಯುಸಿ ರಸ್ತೆಯ ಪಕ್ಕದಲ್ಲಿ ಒಂದು ಹೇರ್ ಸಲೂನ್ ಇದೆ. ಅಲ್ಲಿ 24 ವರ್ಷದ ಕೇಶ ವಿನ್ಯಾಸಕಿ ಶರೋನ್ ರೆಫಾ ಯುವತಿಯರ ಕೂದಲನ್ನು ಆಂಟೆನಾ ತರಹದ ಸ್ಪೈಕ್‌ಗಳಿಗೆ ಹೆಣೆಯುತ್ತಾರೆ. ಅದಕ್ಕೆ 'ಕೊರೊನಾ ವೈರಸ್ ಕೇಶವಿನ್ಯಾಸ' ಎಂದು ಹೆಸರಿಡಲಾಗಿದೆಯಂತೆ.
ಇಲ್ಲಿ ಹೆಚ್ಚಿನ ಮಂದಿ ಕೊರೊನಾದಂತಹ ವೈರಸ್ ಇದೆ ಎಂದರೆ ನಂಬುವುದಿಲ್ಲ. ಆದರೆ, ಕೆಲ ಚಿಕ್ಕ ಮಕ್ಕಳು ಕೈಗೆ ಸ್ಯಾನಿಟೈಸರ್, ಮಾಸ್ಕ್ ಧರಿಸುತ್ತಾರೆ. ಹಾಗಾಗಿ ನಾವು ಕೇಶ ವಿನ್ಯಾಸದೊಂದಿಗೆ ಕೊರೊನಾ ಜಾಗೃತಿ ಮೂಡಿಸುತ್ತಿದ್ದೇವೆ ಎಂದಿದ್ದಾರೆ ಶರೋನ್.
ಕೊರೊನಾ ಕೇಶವಿನ್ಯಾಸವು ಕಡಿಮೆ ಖರ್ಚಿನದ್ದಾಗಿದ್ದು ಸಾಮಾನ್ಯ ಜನರಿಗೂ ಕೈಗೆಟುಕುವ ದರದಲ್ಲಿ ಮಾಡಬಹುದು. ದುಬಾರಿ ಕೇಶ ವಿನ್ಯಾಸಕ್ಕೆ ಪಾವತಿಸುವಲ್ಲಿ ನಾವು ಶಕ್ತರಿಲ್ಲ. ಅಲ್ಲದೆ ತಮ್ಮ ಮಕ್ಕಳು ಚೆನ್ನಾಗಿ ಕಾಣಬೇಕೆಂಬುದು ಪ್ರತಿ ತಾಯಿಗೂ ಇರತ್ತೆ. ಹಾಗಾಗಿ ನಾವು ಈ ಕೇಶ ವಿನ್ಯಾಸವನ್ನು ಆಯ್ದುಕೊಳ್ಳುತ್ತೇವೆ ಎನ್ನುತ್ತಾರೆ ಆಂಡ್ರಿಯಾ.