ETV Bharat / international

ಬಸ್​-ಟ್ರಕ್​ ಮಧ್ಯೆ ಮುಖಾಮುಖಿ ಡಿಕ್ಕಿ.. 50ಕ್ಕೂ ಹೆಚ್ಚು ಪ್ರಯಾಣಿಕರು ಸುಟ್ಟು ಭಸ್ಮ!

author img

By

Published : Jan 28, 2021, 11:16 AM IST

ಬಸ್​ ಮತ್ತು ಟ್ರಕ್​ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿ 50ಕ್ಕೂ ಹೆಚ್ಚು ಜನ ಸುಟ್ಟು ಭಸ್ಮವಾಗಿರುವ ಘಟನೆ ಕ್ಯಾಮರೂನ್​ನಲ್ಲಿ ಸಂಭವಿಸಿದೆ.

Bus crash in western Cameroon, Bus crash in western Cameroon kills more than 50 passengers, western Cameroon Bus crash, western Cameroon Bus crash news, western Cameroon Bus crash latest news, ವೆಸ್ಟರನ್​ ಕ್ಯಾಮರೂನ್​ನಲ್ಲಿ ಬಸ್​ ಅಪಘಾತ, ವೆಸ್ಟರನ್​ ಕ್ಯಾಮರೂನ್​ನಲ್ಲಿ ಬಸ್​ ಅಪಘಾತದಲ್ಲಿ 50 ಜನ ಸಾವು, ವೆಸ್ಟರ್ನ್​ ಕ್ಯಾಮರೂನ್​ನಲ್ಲಿ ಬಸ್​ ಅಪಘಾತದಲ್ಲಿ ಸುಟ್ಟು ಬಸ್ಮವಾದ 50 ಪ್ರಯಾಣಿಕರು, ವೆಸ್ಟರ್ನ್ ಕ್ಯಾಮರೂನ್​ ಬಸ್​ ಅಪಘಾತ, ವೆಸ್ಟರ್ನ್ ಕ್ಯಾಮರೂನ್​ ಬಸ್​ ಅಪಘಾತ ಸುದ್ದಿ,
ಸಂಗ್ರಹ ಚಿತ್ರ

ಯೌಂಡೆ(ಕ್ಯಾಮರೂನ್​): ಬಸ್ ಮತ್ತು ಲಿಕ್ವಿಡ್​ ಸಾಗಿಸುತ್ತಿದ್ದ ಟ್ರಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ 53ಕ್ಕೂ ಹೆಚ್ಚು ಜನ ಸುಟ್ಟು ಭಸ್ಮ ಸಾವನ್ನಪ್ಪಿರುವ ಘಟನೆ ಕ್ಲಿಫ್​ ಆಫ್​ ಡಿಸ್ಚಾಂಗ್​ನಲ್ಲಿ ನಡೆದಿದೆ.

ಬುಧವಾರ ಮುಂಜಾನೆ 3 ಗಂಟೆ ಸುಮಾರಿಗೆ ಡಿಸ್ಚಾಂಗ್‌ನಲ್ಲಿ ಈ ಅಪಘಾತ ಸಂಭವಿಸಿದೆ. ರಾತ್ರಿಯ ಸಮಯದಲ್ಲಿ ಸಂಭವಿಸಿದ ಈ ದುರದೃಷ್ಟಕರ ಅಪಘಾತದಲ್ಲಿ 53 ಜನ ಸಾವನ್ನಪ್ಪಿದ್ದು, 29 ಜನ ಗಾಯಗೊಂಡಿದ್ದಾರೆ.

ಬಸ್​ ಮತ್ತು ಲಿಕ್ವಿಡ್​ ಸಾಗಿಸುತ್ತಿದ್ದ ಟ್ರಕ್​ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಟ್ರಕ್​ನಲ್ಲಿ ಲಿಕ್ವಿಡ್ ಇರುವುದರಿಂದ ಡಿಕ್ಕಿಯಾದ ಬಳಿಕ ಬೆಂಕಿ ಹೊತ್ತಿಕೊಂಡಿದೆ. ಅಪಘಾತ ಸಂಭವಿಸಿದ ಬಳಿಕ ಬಸ್​ನಲ್ಲಿದ್ದ ಕೆಲವರು ಬಸ್​ನಿಂದ ಹೊರ ಬಂದಿದ್ದಾರೆ. ಇನ್ನು ಕೆಲವರು ಬಸ್​ನಲ್ಲೇ ಸಿಲುಕಿಕೊಂಡಿದ್ದರು. ಪರಿಣಾಮ 53 ಪ್ರಯಾಣಿಕರು ಸ್ಥಳದಲ್ಲೇ ಬೆಂಕಿಗಾಹುತಿಯಾಗಿದ್ದು, 29 ಜನ ಗಾಯಗೊಂಡಿದ್ದಾರೆ. ಮಕ್ಕಳು ಸೇರಿದಂತೆ ಗಾಯಾಳುಗಳನ್ನು ಪೊಲೀಸರು ಡಿಸ್ಚಾಂಗ್​ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಉನ್ನತಮಟ್ಟದ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಎಂದು ಕ್ಯಾಮರೂನ್​ ಸಾರಿಗೆ ಸಚಿವ ಜೀನ್​ ಅರ್ನೆಸ್ಟ್​ ಮಸ್ಸೆನಾ ನ್ಗಲ್ಲೆ ಹೇಳಿದ್ದಾರೆ.

ಮೃತಪಟ್ಟ ಕುಟುಂಬಗಳಿಗೆ ಸಂತಾಪ ಸೂಚಿಸಿದ ಸಚಿವರು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು.

ಕಳೆದ ತಿಂಗಳು ಸೆಂಟ್ರಲ್ ಕ್ಯಾಮರೂನ್‌ನ ಯೌಂಡೆ-ಬಫೌಸಮ್ ರಸ್ತೆಯಲ್ಲಿ ಬಸ್​-ಲಾರಿ ಡಿಕ್ಕಿ ಸಂಭವಿಸಿ ನಾಲ್ಕು ಮಕ್ಕಳು ಸೇರಿದಂತೆ 37 ಜನರು ಸಾವನ್ನಪ್ಪಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.