ಒವಾಗಾಡೊಗೌ(ಆಫ್ರಿಕಾ): ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೊದಲ್ಲಿ ಬಂಡುಕೋರರ ಅಟ್ಟಹಾಸಕ್ಕೆ ಮೂವರು ಮೂವರು ಅರೆಸೈನಿಕ ದಳದ ಪೊಲೀಸರು ಬಲಿಯಾಗಿದ್ದಾರೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೌಕಲ್ ಡು ಮೌಹೌನ್ ಪ್ರದೇಶದ ಗೊಂಬೊರೊದಲ್ಲಿ ಇವರು ಗಸ್ತು ತಿರುಗುವಾಗ ಈ ದುರ್ಘಟನೆ ನಡೆದಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದ್ದು, ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಪ್ರದೇಶದ ಬಂಡುಕೋರರು 2018 ರಿಂದ 150 ಜನರನ್ನು ಕೊಂದಿದ್ದಾರೆ ಎಂದು ಎಎಫ್‌ಪಿ ವರದಿ ಮಾಡಿದೆ.
ಮಾರ್ಚ್ ಆರಂಭದಲ್ಲಿ ಉತ್ತರ ಭಾಗದಲ್ಲಿ ಇಬ್ಬರು ಐಇಡಿಗಳಿಂದ ನಾಲ್ಕು ಬುರ್ಕಿನಾಬೆ ಸೈನಿಕರು ಸಾವನ್ನಪ್ಪಿದ್ದರು ಹಾಗೂ ಎಂಟು ಮಂದಿ ಗಾಯಗೊಂಡಿದ್ದರು. ಸೈನಿಕರ ವಾಹನ ಹಾದುಹೋಗುವಾಗ ಬಾಂಬ್ ಸ್ಫೋಟಗೊಳಿಸಿ ಈ ಕೃತ್ಯ ಎಸಗಿದ್ದರು.