ಕೈರೋ(ಸುಡಾನ್): ಸುಡಾನ್ ಸೇನಾ ವಿಮಾನವು ರಾಜಧಾನಿ ಖಾರ್ಟೌಮ್‌ನ ದಕ್ಷಿಣದ ವೈಟ್ ನೈಲ್‌ನಲ್ಲಿ ಪತನಗೊಂಡಿದ್ದು, ಮೂವರು ಅಧಿಕಾರಿಗಳು ಮೃತಪಟ್ಟಿದ್ದಾರೆಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.
ಹೇಳಿಕೆಯ ಪ್ರಕಾರ, ಬುಧವಾರ ಅಲ್-ಶೆಗಿಲಾಬ್ ಬಳಿ ವಿಮಾನ ಪತನಗೊಂಡಿದ್ದು, ಅದರಲ್ಲಿದ್ದವರಿಗಾಗಿ ಶೋಧ ಕಾರ್ಯ ನಡೆಯುತ್ತಲೇ ಇದ್ದವು. ವಿಮಾನದಲ್ಲಿ ಎಷ್ಟು ಜನರಿದ್ದರು ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಸುಡಾನ್ನಲ್ಲಿ ವಿಮಾನ ಅಪಘಾತಗಳು ಇದೇ ಮೊದಲೇನಲ್ಲ. ಆಗಾಗ ಇಂಥ ದುರಂತಗಳು ಸಂಭವಿಸುತ್ತಲೇ ಇರುತ್ತವೆ. ಆದರೆ, ರಕ್ಷಣಾ ಇಲಾಖೆ ಯಾವುದೇ ಅಗತ್ಯ ಕ್ರಮ ಕೈಗೊಂಡಿಲ್ಲ ಎನ್ನಲಾಗ್ತಿದೆ.
ಕಳೆದ ಜನವರಿಯಲ್ಲಿ ಇಥಿಯೋಪಿಯಾದ ಪೂರ್ವಗಡಿಯಲ್ಲಿ ಮದ್ದುಗುಂಡುಗಳನ್ನು ತುಂಬಿದ್ದ ಹೆಲಿಕಾಪ್ಟರ್ ಪತನವಾಗಿತ್ತು. ಆ ಘಟನೆಯಲ್ಲಿ ಮೂವರು ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದರು.
2020 ರ ಜನವರಿಯಲ್ಲಿ ರಷ್ಯಾದ ಆಂಟೊನೊವ್ ಆನ್ -12 ಎಂಬ ಹೆಸರಿನ ಮಿಲಿಟರಿ ವಿಮಾನವು ಪಶ್ಚಿಮ ಡಾರ್ಫೂರ್ ಪ್ರದೇಶದಲ್ಲಿ ಅಪಘಾತಕ್ಕೀಡಾಗಿ ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ 16 ಜನರು ಸಾವನ್ನಪ್ಪಿದ್ದರು.
ಇದನ್ನೂ ಓದಿ: 9/11 ದಾಳಿಗೆ 20 ವರ್ಷ: ಇಲ್ಲಿವೆ ರಣ ಭೀಕರತೆಯ ಚಿತ್ರಗಳು..
2003 ರಲ್ಲಿ, ನಾಗರಿಕ ಸುಡಾನ್ ಏರ್ವೇಸ್ ವಿಮಾನವು ತುರ್ತು ಭೂಸ್ಪರ್ಶ ಮಾಡಲು ಯತ್ನಿಸಿ, ಗುಡ್ಡದ ಮೇಲೆ ಅಪ್ಪಳಿಸಿತ್ತು. ಎಂಟು ವಿದೇಶಿಯರು ಸೇರಿದಂತೆ 116 ಜನರು ಮೃತಪಟ್ಟಿದ್ದರು. ಈ ಅಪಘಾತದಲ್ಲಿ ಕೇವಲ ಒಬ್ಬ ಹುಡುಗ ಬದುಕುಳಿದಿದ್ದ.