ಬುಟೆಂಬೊ: ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಮಾಯ್ - ನೊಂಬೆ ಪ್ರಾಂತ್ಯದಲ್ಲಿರುವ ಕಾಂಗೋ ನದಿಯಲ್ಲಿ ಬೋಟ್ ಮುಳುಗಿ 60 ಜನರು ಸಾವನ್ನಪ್ಪಿದ್ದಾರೆ.
ಸುಮಾರು 700 ಮಂದಿ ಇದ್ದ ಬೃಹತ್ ಗಾತ್ರದ ಬೋಟ್ ಇದಾಗಿದ್ದು, 300 ಜನರನ್ನು ರಕ್ಷಿಸಲಾಗಿದೆ. 60 ಮಂದಿಯ ಮೃತದೇಹಗಳು ಸಿಕ್ಕಿದ್ದು, ಉಳಿದವರಿಗಾಗಿ ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಕಿನ್ಶಾಸಾದಿಂದ ಈಕ್ವೇಟರ್ ಪ್ರಾಂತ್ಯಕ್ಕೆ ಈ ಬೋಟ್ ತೆರಳುತ್ತಿತ್ತು. ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕಾಲುವೆಗೆ ಉರುಳಿಬಿತ್ತು 54 ಪ್ರಯಾಣಿಕರಿದ್ದ ಬಸ್.. ಸಾವಿನ ಸಂಖ್ಯೆ 42ಕ್ಕೆ ಏರಿಕೆ - ಪರಿಹಾರ ಘೋಷಿಸಿದ ಪಿಎಂ
ಮಿತಿಮೀರಿದ ಸರಕುಗಳು ಹಾಗೂ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಬೋಟ್ ಏರಿದ್ದರಿಂದ ಈ ಬೋಟ್ ಮುಳುಗಲು ಕಾರಣ ಎಂದು ಅಲ್ಲಿನ ಸಚಿವರೊಬ್ಬರು ಹೇಳಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದ್ದು, ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.