ಅಡಿಸ್ ಅಬಾಬಾ (ಇಥಿಯೋಪಿಯಾ): ಇಥಿಯೋಪಿಯಾದಲ್ಲಿ ಶನಿವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 34 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಮಾನವ ಹಕ್ಕುಗಳ ಆಯೋಗ (ಇಹೆಚ್‌ಆರ್‌ಸಿ) ತಿಳಿಸಿದೆ.
ಇಥಿಯೋಪಿಯಾದ ಪಶ್ಚಿಮ ಬೆನಿಶಾಂಗುಲ್-ಗುಮುಜ್ ರಾಜ್ಯದಲ್ಲಿ ನಡೆದ ಸಶಸ್ತ್ರ ದಾಳಿಯಲ್ಲಿ 34 ಜನರು ಸಾವನ್ನಪ್ಪಿದ್ದಾರೆ ಎಂದು ಇಹೆಚ್‌ಆರ್‌ಸಿ ಕ್ಸಿನ್ಹುವಾಕ್ಕೆ ನೀಡಲಾದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಶನಿವಾರ ಸಂಜೆ ಬೆನಿಶಾಂಗುಲ್-ಗುಮುಜ್ ಪ್ರದೇಶದಲ್ಲಿ ಪ್ರಯಾಣಿಕರ ಬಸ್ ಅನ್ನು ಗುರಿಯಾಗಿಸಿಟ್ಟುಕೊಂಡು ಸಶಸ್ತ್ರ ಹೊಂದಿದ್ದ ದಾಳಿಕೋರರು ದಾಳಿ ನಡೆಸಿ 34 ಜನರನ್ನು ಹತ್ಯೆ ಮಾಡಿದ್ದಾರೆ. ಅಲ್ಲದೆ ಈ ಪ್ರಕಟಣೆಯಲ್ಲಿ ದಾಳಿಕೋರರ ಗುರುತು ಹಾಗೂ ಸಂಭವನೀಯ ಉದ್ದೇಶವನ್ನು ಬಹಿರಂಗಪಡಿಸಿಲ್ಲ.
ಇತ್ತೀಚಿನ ತಿಂಗಳಲ್ಲಿ ಬೆನಿಶಾಂಗುಲ್-ಗುಮುಜ್ ಪ್ರಾದೇಶಿಕ ರಾಜ್ಯದಲ್ಲಿ ವಿವಿಧ ಜನಾಂಗದ ಸದಸ್ಯರಲ್ಲಿ ಜನಾಂಗೀಯ ಹಿಂಸಾಚಾರವು ನೂರಾರು ಜನರನ್ನು ಬಲಿ ಪಡೆದಿದೆ. ಈ ಕಾರಣದಿಂದಾಗಿ ಸಾವಿರಾರು ಜನರು ಅಲ್ಲಿಂದ ಸ್ಥಳಾಂತರಗೊಂಡಿದ್ದಾರೆ.