ನವದೆಹಲಿ: ಕೇಂದ್ರ ಕ್ಯಾಬಿನೆಟ್ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ 2019-20ರ ಬೋನಸ್ ನೀಡಲು ಒಪ್ಪಿಗೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ 30 ಲಕ್ಷಕ್ಕೂ ಹೆಚ್ಚು ನಾನ್- ಗೆಜೆಟೆಡ್ ಉದ್ಯೋಗಿಗಳು ಬೋನಸ್ ಪಡೆಯಲಿದ್ದಾರೆ. ಇದರಿಂದಾಗಿ ಸುಮಾರು 3,737 ಕೋಟಿ ರೂಪಾಯಿ ಕೇಂದ್ರ ಸರ್ಕಾರಕ್ಕೆ ಹೊರೆಯಾಗಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಸ್ಪಷ್ಟನೆ ನೀಡಿದ್ದಾರೆ.
ಉತ್ಪಾದಕತೆಗೆ ಸಂಬಂಧಿತ ಬೋನಸ್ ಹಾಗೂ ಅನುತ್ಪಾದಕತೆ ಬೋನಸ್ ನೀಡಲಾಗುತ್ತಿದ್ದು, ವಿಜಯದಶಮಿ ವೇಳೆ ಒಂದೇ ಕಂತಿನಲ್ಲಿ ಉದ್ಯೋಗಿಗಳಿಗೆ ಸಿಗಲಿದೆ ಎಂದು ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.