ETV Bharat / headlines

ಕುಮಾರಸ್ವಾಮಿ ಎಂದರೇ ಲಾಟರಿ ಮುಖ್ಯಮಂತ್ರಿ, ಜೆಡಿಎಸ್​​ಗೆ ಇನ್ನು ಬಿಜೆಪಿ ಬೆಂಬಲವಿಲ್ಲ: ಆರ್​.ಅಶೋಕ್​ - ಸಚಿವ ಆರ್​ ಅಶೋಕ್​

ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸಲು ಐಎಸ್ಐಯ ಮೂಲ ರಾಜಸ್ಥಾನದಲ್ಲಿ ನಡೆದ ಕೊಲೆಯ ಹಿಂದೆ ಇರಬಹುದು. ಆರೋಪಿಗಳಿಗೆ ಟ್ರೈನಿಂಗ್ ಆಗಿದೆ. ಈ ತರಹ ಸಂಘಟನೆಗಳು ಕರ್ನಾಟಕದಲ್ಲೂ ಇರಬಹುದು ಎಂದು ಆರ್.ಅಶೋಕ್ ಸಂಶಯ ವ್ಯಕ್ತಪಡಿಸಿದರು.

minister-r-ashok-says-bjp-not-support-to-jds-in-future
ಕುಮಾರಸ್ವಾಮಿ ಎಂದರೇ ಲಾಟರಿ ಮುಖ್ಯಮಂತ್ರಿ, ಜೆಡಿಎಸ್​​ಗೆ ಇನ್ನು ಬಿಜೆಪಿ ಬೆಂಬಲವಿಲ್ಲ: ಆರ್​.ಅಶೋಕ್​
author img

By

Published : Jun 29, 2022, 7:55 PM IST

Updated : Jun 29, 2022, 8:39 PM IST

ಹಾಸನ: ರಾಜ್ಯಸಭೆಯ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ಕಾಲು ಹಿಡಿಯುವುದೊಂದೇ ಬಾಕಿ ಇತ್ತು. ಕುಮಾರಸ್ವಾಮಿ ಎಂದರೇ ಒಂದು ರೀತಿ ಲಾಟರಿ ಮುಖ್ಯಮಂತ್ರಿ. ಜೆಡಿಎಸ್ ಪಕ್ಷಕ್ಕೆ ಇನ್ನು ಬಿಜೆಪಿ ಬೆಂಬಲ ಕೊಡುವುದಿಲ್ಲ ಎಂದು ಸಚಿವ ಆರ್.ಅಶೋಕ್​ ಹೇಳಿದರು.

ವಿದ್ಯಾನಗರಲ್ಲಿರುವ ಶಾಸಕ ಪ್ರೀತಂ ಜೆ.ಗೌಡರ ಮನೆಗೆ ಆಗಮಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್ 'ಎ' ಟೀಂ, ಕಾಂಗ್ರೆಸ್ 'ಬಿ' ಟೀಂ ಯಾವುದೋ ಗೊತ್ತಿಲ್ಲ. ಮುಂದೆ ಜೆಡಿಎಸ್​ಗೆ ಬಿಜೆಪಿ ಬೆಂಬಲ ಕೊಡುವುದಿಲ್ಲ. ನಾವು ಸ್ವತಂತ್ರವಾಗಿ ಸರ್ಕಾರ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹಾರಾಷ್ಟ್ರದಲ್ಲಿ ಇನ್ನೂ 3-4 ದಿನಗಳಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಶಿವಸೇನೆ ಚುನಾವಣೆ ಮುಂಚೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿತ್ತು. ನಂತರ ಕಾಂಗ್ರೆಸ್ ಜೊತೆ ಸೇರಿದರು. ಕೋಮುವಾದಿ ಸರ್ಕಾರದ ಜೊತೆ ಸರ್ಕಾರ ರಚನೆ ಮಾಡಿರುವುದನ್ನು ಜನ ಮತ್ತು ಶಿವಸೇನೆಯ ಶಾಸಕರೇ ಒಪ್ಪುವುದಿಲ್ಲ. ಶಿವಸೇನೆ ಶಾಸಕರು ಬಾಳಾ ಠಾಕ್ರೆಯ ಹೆಸರಿನಲ್ಲಿ ಬಿಜೆಪಿಗೆ ಬೆಂಬಲ ನೀಡಲಿದ್ದಾರೆ ಎಂದು ಹೇಳಿದರು.

ಕುಮಾರಸ್ವಾಮಿ ಎಂದರೇ ಲಾಟರಿ ಮುಖ್ಯಮಂತ್ರಿ, ಜೆಡಿಎಸ್​​ಗೆ ಇನ್ನು ಬಿಜೆಪಿ ಬೆಂಬಲವಿಲ್ಲ: ಆರ್​.ಅಶೋಕ್​

ಪಠ್ಯಪುಸ್ತಕ ವಿಚಾರದಲ್ಲಿ ತಲೆ ಬಾಗಿಲ್ಲ: ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಟಿಪ್ಪು ವಿಚಾರದಲ್ಲಿ ಧಾರವಾಹಿ ರೀತಿಯಲ್ಲಿ ಪ್ರತಿಪಕ್ಷದವರು ಸರಣಿಯಾಗಿ ಮಾತನಾಡುತ್ತಾರೆ. ವಿರೋಧ ಕಾರಣಕ್ಕೆ ಮತ್ತೆ ಹೊಸದಾಗಿ ಪಠ್ಯ ಪುಸ್ತಕ ಮುದ್ರಣ ಮಾಡುವುದಿಲ್ಲ. ಸರ್ಕಾರ ಪಠ್ಯಪುಸ್ತಕ ವಿಚಾರದಲ್ಲಿ ತಲೆ ಬಾಗಿಲ್ಲ. ಕೆಲ ವಿಚಾರದಲ್ಲಿ ಸ್ವಲ್ಪ ಬದಲಾವಣೆ ಮಾಡುತ್ತೇವೆ ಎಂದರು.

ಕರ್ನಾಟಕದಲ್ಲೂ ಇರಬಹುದು: ರಾಜಸ್ಥಾನದ ಘಟನೆ ಖಂಡನೀಯವಾಗಿದೆ. ಇದು ಹೇಡಿಗಳ ಕೃತ್ಯವಾಗಿದ್ದು, ಕೋಮುವಾದದ ಪ್ರತಿಫಲ. ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸಲು ಐಎಸ್ಐಯ ಮೂಲ ಇದರ ಹಿಂದೆ ಇದೆ. ಆರೋಪಿಗಳಿಗೆ ಟ್ರೈನಿಂಗ್ ಆಗಿದೆ. ಈ ತರಹದ ಸಂಘಟನೆಗಳು ಕರ್ನಾಟಕದಲ್ಲೂ ಇರಬಹುದು ಎಂದು ಆರ್.ಅಶೋಕ್ ಸಂಶಯ ವ್ಯಕ್ತಪಡಿಸಿದರು.

ಆರ್.ಎಸ್.ಎಸ್. ಇರಬಾರದು ಎಂಬುದು ಕೆಲವರ ಅಜೆಂಡಾ. ಇದಕ್ಕಾಗಿ ಕೆಲವು ಸಂಘಟನೆಗಳು ಬಿಜೆಪಿ ವಿರುದ್ಧ ನಿರಂತರವಾಗಿ ಟೀಕೆ ಮಾಡಿದರು. ಕೊಡಗಿನಲ್ಲಿ ನಡೆದ ಏರ್ ಗನ್ ತರಬೇತಿ ಪಡೆದಿದ್ದಕ್ಕೆ ಪ್ರತಿಪಕ್ಷದವರು ಬಾಯಿ ಪಡೆದುಕೊಂಡರು. ಆದರೆ, ಇಂತಹ ಘಟನೆಗಳು ನಡೆದಾಗ ಬಾಯಿಮುಚ್ಚಿಕುಳಿತುಕೊಂಡಿವೆ. ಸಿದ್ದರಾಮಯ್ಯ ಮಾತ್ರ ಕೇವಲ ಟ್ವೀಟ್​ ಮಾಡಿದ್ದಾರೆ. ಕೇವಲ ವೋಟ್ ಬ್ಯಾಂಕ್​​ ರಾಜಕಾರಣ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಶಾಸಕ ಪ್ರೀತಂಗೌಡ, ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ದಾಸರಹಳ್ಳಿ ಮಾಜಿ ಶಾಸಕ ಮುನಿರಾಜು ಇತರರು ಇದ್ದರು.

ಇದನ್ನೂ ಓದಿ: ಡಿಕೆಶಿ, ಸಿದ್ದರಾಮಯ್ಯ ಕಾಂಗ್ರೆಸ್​​ ಸರ್ವನಾಶ ಮಾಡ್ತಾರೆ, ಪರಮೇಶ್ವರ್​ರನ್ನ ಸಿಎಂ ಮಾಡಿದ್ರೆ ಸೂಕ್ತ : ಲಕ್ಷ್ಮಿನಾರಾಯಣ್​​

Last Updated : Jun 29, 2022, 8:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.