ETV Bharat / headlines

2.4 ಕೆಜಿಗಿಂತ ಹೆಚ್ಚು ಸಮೃದ್ಧ ಯುರೇನಿಯಂ ಉತ್ಪಾದಿಸಿದ ಇರಾನ್ : ಐಎಇಎ

2015ರ ಒಪ್ಪಂದದ ಪ್ರಕಾರ, ಯುರೇನಿಯಂ ಶೇಕಡಾ 4ರಷ್ಟಕ್ಕೆ ಉತ್ಕೃಷ್ಟಗೊಳಿಸಲು ಮಾತ್ರ ಅವಕಾಶವಿದೆ. ಇದು ಇಂಧನ ಪರಮಾಣು ರಿಯಾಕ್ಟರ್‌ಗಳಿಗೆ ಅಗತ್ಯವಾಗಿರುತ್ತದೆ. ಪರಮಾಣು ಶಸ್ತ್ರಾಸ್ತ್ರಗಳಿಗೆ ಯುರೇನಿಯಂ ಶೇಕಡಾ 90ರಷ್ಟು ಸಮೃದ್ಧಗೊಳಿಸಬೇಕಾಗುತ್ತದೆ..

Iran produced over 2.4 kg of highly enriched uranium: IAEA

author img

By

Published : Jun 1, 2021, 7:22 PM IST

ಟೆಹ್ರಾನ್ : ಇರಾನ್ ಸುಮಾರು 2.4 ಕೆಜಿಗಿಂತ ಹೆಚ್ಚು ಶಸ್ತ್ರಾಸ್ತ್ರ-ದರ್ಜೆಯ ಯುರೇನಿಯಂ ಉತ್ಪಾದಿಸಿದೆ ಎಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ) ತಿಳಿಸಿದೆ. ಇದು ಅಂತಾರಾಷ್ಟ್ರೀಯ ಪರಮಾಣು ಒಪ್ಪಂದದ ಗಡಿಯನ್ನು ಮೀರಿ, ಅದನ್ನು ಇಷ್ಟು ಪ್ರಮಾಣದಲ್ಲಿ ತಯಾರಿಕೆ ಮಾಡಿದೆ ಎಂದು ಆರೋಪಿಸಲಾಗಿದೆ.

ಯುರೇನಿಯಂ ಶೇಕಡಾ 60ರಷ್ಟು ಶುದ್ಧತೆಯ ಮಟ್ಟಕ್ಕೆ ಸಮೃದ್ಧಗೊಳಿಸುವ ಕ್ರಮ ಏಪ್ರಿಲ್​ನಲ್ಲಿ ನಡೆದಿದೆ ಎಂದು ಐಎಇಎ ಮುಖ್ಯಸ್ಥ ರಾಫೆಲ್ ಗ್ರೊಸಿ ಮಾಹಿತಿ ನೀಡಿದ್ದಾರೆ. 2018ರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಒಪ್ಪಂದದಿಂದ ಹೊರ ಬಂದ ನಂತರ, ಇರಾನ್ ಒಪ್ಪಂದದ ವಿವಿಧ ಅಂಶಗಳನ್ನು ನಿರ್ಲಕ್ಷಿಸಲು ಮುಂದಾಗಿದೆ.

ಯುಎಸ್ ಆಡಳಿತದೊಂದಿಗಿನ ಒಪ್ಪಂದದ ಆವೃತ್ತಿಯನ್ನು ಪುನಃ ಸ್ಥಾಪಿಸಲು ಮಾತುಕತೆಗಳು ನಡೆಯುತ್ತಿರುವ ಬೆನ್ನಲ್ಲೇ, ಇರಾನ್ ಪರಮಾಣು ವಿಷಯದಲ್ಲಿ ತನ್ನ ಕೆಲಸವನ್ನು ಮಾಡುತ್ತಿದೆ.

2015ರ ಒಪ್ಪಂದದ ಪ್ರಕಾರ, ಯುರೇನಿಯಂ ಶೇಕಡಾ 4ರಷ್ಟಕ್ಕೆ ಉತ್ಕೃಷ್ಟಗೊಳಿಸಲು ಮಾತ್ರ ಅವಕಾಶವಿದೆ. ಇದು ಇಂಧನ ಪರಮಾಣು ರಿಯಾಕ್ಟರ್‌ಗಳಿಗೆ ಅಗತ್ಯವಾಗಿರುತ್ತದೆ. ಪರಮಾಣು ಶಸ್ತ್ರಾಸ್ತ್ರಗಳಿಗೆ ಯುರೇನಿಯಂ ಶೇಕಡಾ 90ರಷ್ಟು ಸಮೃದ್ಧಗೊಳಿಸಬೇಕಾಗುತ್ತದೆ.

ಆದಾಗ್ಯೂ, ಒಮ್ಮೆ ಯುರೇನಿಯಂ ಶೇಕಡಾ 60ಕ್ಕೆ ತೆಗೆದುಕೊಂಡರೆ, ಅದನ್ನು ಶೀಘ್ರವಾಗಿ ಉನ್ನತ ಮಟ್ಟಕ್ಕೆ ಉತ್ಕೃಷ್ಟಗೊಳಿಸಲು ಸಾಧ್ಯವಿದೆ. ಹಾಗೆ ವೈದ್ಯಕೀಯ ಉದ್ದೇಶಗಳಿಗಾಗಿ ಹೆಚ್ಚು ಸಮೃದ್ಧ ಯುರೇನಿಯಂ ಅಗತ್ಯವಿದೆ ಎಂದು ಟೆಹ್ರಾನ್ ವಾದಿಸುತ್ತಿದೆ.

ಐಎಇಎ ಪ್ರಕಾರ, ಇರಾನ್ ಸುಮಾರು 3,200 ಕೆಜಿ ಯುರೇನಿಯಂ ಅನ್ನು ವಿವಿಧ ಹಂತಗಳಿಗೆ ಸಮೃದ್ಧಗೊಳಿಸಿದೆ, ಇದು 2015 ರ ಒಪ್ಪಂದದಿಂದ ಅನುಮತಿಸಲ್ಪಟ್ಟಿದ್ದಕ್ಕಿಂತ 16 ಪಟ್ಟು ಹೆಚ್ಚು ಸಮೃದ್ಧಗೊಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.