ETV Bharat / headlines

ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸವಿದು ಸರಳತೆ ತೋರಿದ ಐಪಿಎಸ್​​ ಅಧಿಕಾರಿ

ಐಪಿಎಸ್ ಅಧಿಕಾರಿ ಸರ್ಕಾರಿ ಶಾಲೆಯಲ್ಲಿ ಮಕ್ಕಳೊಂದಿಗೆ ಬಿಸಿಯೂಟ ಸವಿದು ಸರಳತೆ ಮೆರೆದಿದ್ದಾರೆ. ಇವರ ಸರಳತೆಗೆ ಶಿಕ್ಷಕರು ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

author img

By

Published : Mar 19, 2019, 11:34 AM IST

ಐಪಿಎಸ್ ಅಧಿಕಾರಿ

ರಾಯಚೂರು: ಪ್ರೊಬೇಷನರಿ ಐಪಿಎಸ್ ಅಧಿಕಾರಿಯೊಬ್ಬರು ಸರ್ಕಾರಿ ಶಾಲೆಯಲ್ಲಿ ಮಕ್ಕಳೊಂದಿಗೆ ಬಿಸಿಯೂಟ ಸವಿದು ಸರಳತೆ ಮೆರೆದಿದ್ದಾರೆ. ಸದ್ಯ ಈ ಅಧಿಕಾರಿಯ ಸರಳತೆ ಮೆಚ್ಚುಗೆಗೆ ಪಾತ್ರವಾಗಿದೆ.

IPS officer
ಐಪಿಎಸ್ ಅಧಿಕಾರಿ ಜೊತೆ ಮಕ್ಕಳು

ಜಿಲ್ಲೆಯ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರೊಬೇಷನರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಿಖಿಲ್ ಬಳ್ಳಾವರ್, ದೇವದುರ್ಗ ತಾಲೂಕಿನ ಕೊಪ್ಪರ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸವಿದ ಅಧಿಕಾರಿ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೂಕ್ಷ್ಮ ಮತಗಟ್ಟೆಗಳ ಮುಂಜಾಗ್ರತಾ ಕ್ರಮವಾಗಿ ಪರಿಶೀಲನೆ ನಡೆಸಲು ಇತ್ತೀಚೆಗೆ ಕೊಪ್ಪರ ಗ್ರಾಮದ ಸರ್ಕಾರಿ ಶಾಲೆಗೆ ತೆರಳಿದ್ರು. ಈ ವೇಳೆ ಮಧ್ಯಾಹ್ನದ ಊಟದ ಸಮಯವಾಗಿದ್ದರಿಂದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಸಹ ಬಿಸಿಯೂಟವನ್ನು ಊಟ ಮಾಡಿದ್ರು. ಈ ಮೂಲಕ ಕೆಲ ಉನ್ನತ ಅಧಿಕಾರಿಗಳು ಸಹ ಸಿಂಪಲ್ ಆಗಿರುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾದ್ರು.

IPS officer
ಐಪಿಎಸ್ ಅಧಿಕಾರಿ ಜೊತೆ ಮಕ್ಕಳ ಸೆಲ್ಫಿ

ಉನ್ನತ ಅಧಿಕಾರಿಯೊಬ್ಬರು ತಮ್ಮೊಡನೆ ಊಟ ಮಾಡಿರುವುದಕ್ಕೆ ಶಾಲೆಯವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು. ಬಳಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಡನೆ ಅಧಿಕಾರಿ ಪೋಟೋ ಕ್ಲಿಕ್ಕಿಸಿಕೊಂಡರು. ಐಪಿಎಸ್ ಅಧಿಕಾರಿಯ ಸರಳತೆಗೆ ಶಿಕ್ಷಕರು ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ದೇವದುರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಿಖಿಲ್ ಬಳ್ಳಾವರ್ ಈ ಮೊದಲು ಸದರ್ ಬಜಾರ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ರು.

Intro:Body:

ಸ್ಲಗ್: ಬಿಸಿಯೂಟ ಸವಿದ ಪ್ರೋ ಐಪಿಎಸ್

ಫಾರ್ಮೇಟ್: ಎವಿ

ರಿಪೋರ್ಟ್‌ರ್: ಮಲ್ಲಿಕಾರ್ಜುನ

ದಿನಾಂಕ: ೧೯-೦೩-೨೦೧೯

ಸ್ಥಳ: ರಾಯಚೂರು

ಆಂಕರ್: ಪ್ರೊಬೇಷನರಿ ಐಪಿಎಸ್ ಅಧಿಕಾರಯೊಬ್ಬರು ಸರಕಾರ ಶಾಲೆಯಲ್ಲಿ ಮಕ್ಕಳೊಂದಿಗೆ ಬಿಸಿಯೂಟ ಸವಿದ್ದಾರೆ. ರಾಯಚೂರು ಜಿಲ್ಲೆಯ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರೊಬೇಷನ್‌ರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಿಖಲ್ ಬಳ್ಳಾವರ್ ದೇವದುರ್ಗ ತಾಲೂಕಿನ ಕೊಪ್ಪರ ಸರಕಾರಿ ಶಾಲೆಯಲ್ಲಿ ಬಿಸಿಯೂಟ ಸವಿದ ಅಧಿಕಾರಿಯಾಗಿದ್ದಾರೆ. ಲೋಜಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೂಕ್ಷ್ಮ ಮತಗಟ್ಟೆಗಳ ಮುಂಜಾಗ್ರತಾ ಕ್ರಮವಾಗಿ ಪರಿಶೀಲನೆ ನಡೆಸಲು ಇತ್ತೀಚೆಗೆ ಕೊಪ್ಪರ ಗ್ರಾಮದ ಸರಕಾರ ಶಾಲೆಗೆ ತೆರಳಿದ್ರು. ಈ ವೇಳೆ ಮಧ್ಯಾಹ್ನ ಊಟದ ಸಮಯವಾಗಿದ್ದರಿಂದ, ಸರಕಾರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡುವ ತಾವು ಸಹ ಬಿಸಿಯೂಟದ ಅನ್ನ, ಸಾಂಬರ್‌ನ್ನು ಊಟ ಮಾಡಿದ್ರು. ಈ ಮೂಲಕ ಕೆಲ ಹಿರಿಯ ಅಧಿಕಾರಿಗಳು ಸಹ ಸೀಪಲ್ ಆಗಿರುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾಯಿತು. ಅಲ್ಲದೇ ವಿದ್ಯಾರ್ಥಿಗಳು ಹಿರಿಯ ಅಧಿಕಾರಿಯೊಬ್ಬರು ನಮ್ಮೊಡನೆ ಊಟ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಡನೆ ಪೋಟೋ ಕ್ಲಿಕ್‌ಸಿಕೊಂಡರು. ಐಪಿಎಸ್ ಅಧಿಕಾರ ಸರಳತೆಗೆ ಶಿಕ್ಷಕರ ವಲಯ, ಸಾರ್ವಜನಿಕರಿಂಸ ಮೆಚ್ಚುಗೆ ವ್ಯಕ್ತವಾಯಿತು. ಸದ್ಯ ದೇವದುರ್ಗ ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಿಖಿಲ್ ಬಳ್ಳಾವರ್ ಈ ಮೊದಲು ಸದರ್ ಬಜಾರ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.