ETV Bharat / headlines

ಕೋವಿಡ್ ಬಂದು ನಾನ್ ಸತ್ತೋದ್ರು ಪರವಾಗಿಲ್ಲ.. ನಾಳೆ ಸಿಎಂ ಮನೆ ಮುಂದೆ ಧರಣಿ ಕೂರೋದೆ.. ಮಾಜಿ ಸಚಿವ ಹೆಚ್‌ ಡಿ ರೇವಣ್ಣ - ಹಾಸನ ಸುದ್ದಿ

ಮಾಜಿ ಪ್ರಧಾನಿ ಪತ್ರಕ್ಕೂ ರಾಜ್ಯ ಸರ್ಕಾರ ಬೆಲೆ ಕೊಡಲ್ಲ ಅಂದ್ರೆ ಇನ್ಯಾರ ಕೈಯಲ್ಲಿ ಸರ್ಕಾರಕ್ಕೆ ಪತ್ರ ಬರಬೇಕು ಹೇಳಿ? ಬೆಂಗಳೂರಲ್ಲಿ ಹೆಲ್ತ್ ಮಿನಿಸ್ಟರ್ ಫೋನ್ ರಿಸೀವ್ ಮಾಡ್ತಾ ಇಲ್ಲ. ರಾಜ್ಯದ ಮಂತ್ರಿ ಬಿಜೆಪಿ ಶಾಸಕರು ಮಕ್ಕಳು ಸಂಬಂಧಿಕರಿಗೆ ಮಾತ್ರ ಬೆಡ್‌ಗಳು ಸಿಗುತ್ತೆ..

HD Revanna
HD Revanna
author img

By

Published : May 2, 2021, 6:04 PM IST

Updated : May 2, 2021, 10:47 PM IST

ಹಾಸನ : ನಮ್ಮಪ್ಪ ಹೇಳಿದ್ರೂ ಕೇಳಲ್ಲ, ಯಾರು ಹೇಳಿದ್ರೂ ಕೇಳಲ್ಲ. ನಾಳೆ ಸಿಎಂ ಮನೆ ಮುಂದೆ ಹೋಗಿ ಅಲ್ಲಿಯೇ ಧರಣಿ ಕೂರೋದೆ.

ಕೋವಿಡ್ ಬಂದು ಬೇಕಾದ್ರೆ ನಾನ್ ಸತ್ತೋದ್ರು ಪರವಾಗಿಲ್ಲ. ಹೀಗೆ ಮುಖ್ಯಮಂತ್ರಿಗಳ ವಿರುದ್ಧ ಮತ್ತೊಮ್ಮೆ ಗುಡುಗಿದ್ದು ಮಾಜಿ ಸಚಿವ ಹೆಚ್ ಡಿ ರೇವಣ್ಣ.

ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲೆಗೆ ಮಲತಾಯಿ ಧೋರಣೆ ತೋರುತ್ತಿದ್ದಾರೆ. ನಮ್ಮ ಜಿಲ್ಲಾಸ್ಪತ್ರೆಯಲ್ಲಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ರೆಮ್ಡಿಸಿವಿಯರ್ ಚುಚ್ಚುಮದ್ದು ಸಿಕ್ತಿಲ್ಲ.

ಜನ ಸಾಯುತ್ತಿದ್ದಾರೆ, ಇವನ್ನೆಲ್ಲಾ ನೋಡಿಕೊಂಡು ನಾನು ಬದುಕಿರಬೇಕಾ? ಹಾಗಾಗಿ ನಾಳೆ ಬೆಳಗ್ಗೆ ಎದ್ದು ಶಿವಪ್ಪನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಕೊಂಡು ಒಂಬತ್ತು ಗಂಟೆ ಒಳಗೆ ಮುಖ್ಯಮಂತ್ರಿ ಮನೆ ಮುಂದೆ ಅಲ್ಲೇ ಮಲ್ಕೊಂಡು ಧರಣಿ ಮಾಡ್ತೀನಿ.

ಪೊಲೀಸರು ಅರೆಸ್ಟ್ ಮಾಡಿದ್ರೆ ಮಾಡ್ಲಿ. ನಮ್ಮ ಜನಕ್ಕೆ ಏನು ಬೇಕಾದ್ರೂ ಮಾಡ್ತೀನಿ ಎಂದು ಸಿಎಂ ಹಾಗೂ ಆರೋಗ್ಯ ಸಚಿವ ಸುಧಾಕರ್ ವಿರುದ್ಧ ವಾಕ್ಪ್ರಹಾರ ಮಾಡಿದರು.

ಮಾಜಿ ಸಚಿವ ಹೆಚ್‌ ಡಿ ರೇವಣ್ಣ

ಈಗಾಗಲೇ ಹಾಸನ ಡೇಂಜರ್ ಜಿಲ್ಲೆ ಅಂತ ಘೋಷಣೆ ಮಾಡುವುದೊಂದು ಬಾಕಿ ಇದೆ. ಪ್ರತಿದಿನ ಎಷ್ಟು ಸೋಂಕಿತರು ಪತ್ತೆಯಾಗಿದ್ದಾರೆ ಎಂಬ ಮಾಹಿತಿಯನ್ನು ಸರಿಯಾಗಿ ಜಿಲ್ಲಾಡಳಿತ ಕೊಡುತ್ತಿಲ್ಲ. ಏನೋ ರೆಮ್ಡಿಸಿವಿಯರ್, ಸರ್ಕಾರಿ ಆಸ್ಪತ್ರೆಯಲ್ಲಿ ಇಲ್ಲ, ಖಾಸಗಿ ಆಸ್ಪತ್ರೆಯಲ್ಲಿ ಸಿಕ್ತಾ ಇಲ್ಲ.

ಆದ್ರೆ, ಕಾಳಸಂತೆಯಲ್ಲಿ 15 ರಿಂದ ₹20 ಸಾವಿರಕ್ಕೆ ಮಾರಾಟವಾಗುತ್ತಿದೆ. ಇದರ ಬಗ್ಗೆ ಹೇಳೋರಿಲ್ಲ, ಕೇಳೋರಿಲ್ಲ. ನಮ್ಮ ಜಿಲ್ಲೆ ಅನಾಥವಾಗಿದೆ. ಸಾವಿನ ಸಂಖ್ಯೆಯನ್ನ ಮರೆಮಾಚುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಜಿಲ್ಲೆಯಲ್ಲಿ ಕೂಲಿ ಕಾರ್ಮಿಕರ ಪರಿಸ್ಥಿತಿ ಶೋಚನೀಯವಾಗಿದೆ. ಸಂಕಷ್ಟ ಪರಿಸ್ಥಿತಿಯಲ್ಲಿ ಬಡವರಿಗೆ ರಾಗಿ, ಅಕ್ಕಿ, ಗೋಧಿ, ಸೇರಿದಂತೆ ಒಂದೊಂದು ಕುಟುಂಬಕ್ಕೆ ₹5 ಸಾವಿರ ಕೊಡಿ. ಬಡವರ ಶಾಪ ಒಳ್ಳೆದಲ್ಲ. ರಾಜ್ಯದ ತೆರಿಗೆ ಹಣದಲ್ಲಿ ಬಡವರಿಗೆ ಇಂಥ ಸಂದರ್ಭದಲ್ಲಿ ಕೊಡಿ ಎಂದು ಆಗ್ರಹ ಮಾಡಿದ್ರು.

ಮಾಜಿ ಪ್ರಧಾನಿ ಪತ್ರಕ್ಕೂ ರಾಜ್ಯ ಸರ್ಕಾರ ಬೆಲೆ ಕೊಡಲ್ಲ ಅಂದ್ರೆ ಇನ್ಯಾರ ಕೈಯಲ್ಲಿ ಸರ್ಕಾರಕ್ಕೆ ಪತ್ರ ಬರಬೇಕು ಹೇಳಿ? ಬೆಂಗಳೂರಲ್ಲಿ ಹೆಲ್ತ್ ಮಿನಿಸ್ಟರ್ ಫೋನ್ ರಿಸೀವ್ ಮಾಡ್ತಾ ಇಲ್ಲ. ರಾಜ್ಯದ ಮಂತ್ರಿ ಬಿಜೆಪಿ ಶಾಸಕರು ಮಕ್ಕಳು ಸಂಬಂಧಿಕರಿಗೆ ಮಾತ್ರ ಬೆಡ್‌ಗಳು ಸಿಗುತ್ತೆ.

ಬಾಕಿ ಉಳಿದ ಎಲ್ಲಾ ಬಡವರು ಬೀದಿಲಿ ಮಲಗುತ್ತಿದ್ದಾರೆ. ಅವರ ಗೋಳು ನೋಡಕ್ ಆಗ್ತಾ ಇಲ್ಲ. ಸರ್ಕಾರ ದಿವಾಳಿ ಆಗಿದೆ ಅಂತನಾದ್ರೂ ಹೇಳಿದ್ರೆ, ನಮ್ಮ ಪಕ್ಷದ ಶಾಸಕರೆಲ್ಲ ಸೇರಿ ಬಡವರಿಗೆ ಏನಾದ್ರೂ ಮಾಡುತ್ತೇವೆ. ನಾಳೆ ಏನಾರಾ ಆಗಲಿ ಸಿಎಂ ಮನೆ ಮುಂದೆ ಧರಣಿ ಕೂರೋದಂತೂ ಶತಃಸಿದ್ಧ ಎಂದರು.

ಚುನಾವಣಾ ಆಯೋಗವು ಬಿಜೆಪಿ ಕೈಗೊಂಬೆ: ಆರೋಪ

ಚುನಾವಣೆ ಬಂದ್ರೆ ಸಾಕು ಚುನಾವಣಾ ಆಯೋಗವನ್ನು ಕೈಗೊಂಬೆಯಾಗಿ ಮಾಡಿಕೊಂಡು, ಆ ಚುನಾವಣಾ ಆಯೋಗಕ್ಕೂ ಬೆಲೆ ಇಲ್ಲದಂತೆ ಮಾಡಿದ್ದಾರೆ ಈ ಬಿಜೆಪಿಯವರು ಎಂದು ಇಂದು ಹೊರಬಿದ್ದ ಪಂಚರಾಜ್ಯ ಹಾಗೂ ಉಪ ಚುನಾವಣೆ ಫಲಿತಾಂಶ ಬಗ್ಗೆ ರೇವಣ್ಣ ಪ್ರತಿಕ್ರಿಯೆ ನೀಡಿದ್ರು.

ಇವತ್ತು ಚುನಾವಣೆ ಫಲಿತಾಂಶಕ್ಕಿಂತ ಕ್ಷೇತ್ರದ ಜನ್ರನ್ನು ಉಳಿಸಿಕೊಳ್ಳುವ ಜವಾಬ್ದಾರಿ ನನಗಿದೆ. ನಾನು ಫಲಿತಾಂಶದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಪಶ್ಚಿಮ ಬಂಗಾಳಕ್ಕೆ ಕೇಂದ್ರ ಸರ್ಕಾರವೇ ಹೋಗಿ ಕೂತಿದ್ರೂ ಅಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಜನ ಪಾಠ ಕಲಿಸಿದ್ದಾರೆ ಇಲ್ಲವೋ ನಾನು ಹೇಳುವುದಿಲ್ಲ. ಮೂರು ಲಕ್ಷದ ಅಂತರದಲ್ಲಿ ಗೆಲ್ಲುವ ಮಂದಿಯೇ ಇವತ್ತು ಸೋಲನ್ನ ಅನುಭವಿಸುತ್ತಿದ್ದಾರೆ. ಮೊದಲು ನಮ್ಮ ದೇಶದ ಜನರ ಪ್ರಾಣ ಮುಖ್ಯ. ಅದರಲ್ಲೂ ನನ್ನ ಕ್ಷೇತ್ರದ ಜನ ಸಂಕಷ್ಟದಲ್ಲಿರುವಾಗ ನಾನು ರಾಜಕೀಯವಾಗಿ ಚುನಾವಣೆ ಬಗ್ಗೆಯಾಗಲಿ ಮಾತನಾಡುವುದಿಲ್ಲ ಎಂದು ಹೇಳಿದರು.

ಇನ್ನು ಚುನಾವಣೆಯನ್ನು ಆತುರಾತುರದಲ್ಲಿ ನಡೆಸಿದ್ದರಿಂದ ಅವರು ಗೆಲ್ಲಲು ಸಾಧ್ಯವಾಗಿದೆ. ಇಲ್ಲವಾಗಿದ್ದರೆ ಬಿಜೆಪಿಯವರ ಬೋರ್ಡ್ ಕೂಡ ಕರ್ನಾಟಕದಲ್ಲಿ ಇರುತ್ತಿರಲಿಲ್ಲ

ಇದನ್ನೂ ಓದಿ: ವೆನ್ಲಾಕ್ ಆಸ್ಪತ್ರೆ ಸೇರಿ ರಾಜ್ಯದ 5 ಕಡೆ ಆಕ್ಸಿಜನ್ ಪ್ಲ್ಯಾಂಟ್ ನಿರ್ಮಾಣ : ಎಂಆರ್​ಪಿಎಲ್ ಅಸ್ತು

Last Updated : May 2, 2021, 10:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.