ETV Bharat / headlines

ಆರೋಗ್ಯಕರ-ಆಹ್ಲಾದಕರ ಲೈಂಗಿಕ ಸಂಬಂಧಕ್ಕೆ ಇಲ್ಲಿದೆ ಸರಳ ಸೂತ್ರ: ವಿಶೇಷ ವರದಿ

author img

By

Published : Feb 1, 2021, 6:16 PM IST

Updated : Jun 23, 2021, 9:01 PM IST

ಆರೋಗ್ಯಕರ ಮತ್ತು ಆಹ್ಲಾದಕರ ಲೈಂಗಿಕ ಸಂಬಂಧವನ್ನು ಹೊಂದಬೇಕಾದರೆ, ದಂಪತಿಗಳು ತಮ್ಮ ನಡುವಿನ ಆಸೆ, ಕಲ್ಪನೆ, ಸಂತೋಷ ಮೊದಲಾದವುಗಳ ಕುರಿತು ಮುಕ್ತವಾಗಿ ಮಾತನಾಡಬೇಕು ಎಂದು ಮನೋವೈದ್ಯರು ತಿಳಿಸುತ್ತಾರೆ.

having-a-happier-and-satisfying-sexual-intercourse
ಆರೋಗ್ಯಕರ-ಆಹ್ಲಾದಕರ ಲೈಂಗಿಕ ಸಂಬಂಧಕ್ಕೆ ಇಲ್ಲಿದೆ ಸರಳ ಸೂತ್ರ

ಹೈದರಾಬಾದ್​: ಇತ್ತೀಚಿನ ದಿನಗಳಲ್ಲಿ ಲೈಂಗಿಕ ಸಂಬಂಧ ಅನ್ನೋದರ ಅರ್ಥ ಬದಲಾಗುತ್ತಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ, ಪ್ರಸ್ತುತ ದಿನಗಳಲ್ಲಿ ಲೈಂಗಿಕ ಆರೋಗ್ಯ ಸುಧಾರಿಸುವುದಕ್ಕೆ ಹಲವಾರು ವಿಧಾನಗಳಿವೆ. ದಾಂಪತ್ಯ ಜೀವನದಲ್ಲಿ ಲೈಂಗಿಕತೆಯ ದೀರ್ಘಕಾಲಿಕ ಸಂತೋಷದ ಹೆಚ್ಚಳಕ್ಕೆ ವಿವಿಧ ಸಂಶೋಧಕರು, ವೈದ್ಯರು ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.

ಪ್ರಸ್ತುತ ಕಾಲದಲ್ಲಿ ಲೈಂಗಿಕ ಸಂಬಂಧಗಳನ್ನು ಮೂರು ವರ್ಗಗಳಾಗಿ ವಿಂಗಡಿಸಬಹುದು. ಅವುಗಳೆಂದರೆ:

1. ಶಾಶ್ವತ ಅಥವಾ ದೀರ್ಘಕಾಲದ ಸಂಬಂಧಗಳು (ಸಾಮಾನ್ಯವಾಗಿ ವಿವಾಹ ಸಂಬಂಧಗಳು)

2. ಅಲ್ಪಾವಧಿಯ ಅಥವಾ ತಾತ್ಕಾಲಿಕ ಸಂಬಂಧಗಳು (ಜನರು ತಮ್ಮ ದೈಹಿಕ ಆಸೆಗಳ ಈಡೇರಿಕೆಗೆ ಮಾತ್ರ)

3. ವೇಶ್ಯಾವಾಟಿಕೆ ( ಹಣ ನೀಡಿ ದೈಹಿಕ ಆಸೆಗಳನ್ನು ಈಡೇರಿಸಿಕೊಳ್ಳುವುದು)

ಈ ವಿಷಯದ ಕುರಿತು ಈಟಿವಿ ಭಾರತ್ ಸುಖಿಭವ ತಂಡವು ಹಿರಿಯ ಮನೋವೈದ್ಯ ಡಾ. ವೀಣಾ ಕೃಷ್ಣನ್ ಅವರೊಂದಿಗೆ ಮಾತನಾಡಿ ಚರ್ಚಿಸಿದಾಗ ತಿಳಿದುಬಂದಿರುವ ಮಹತ್ತರ ಅಂಶವೆಂದರೆ, ಪ್ರಸ್ತುತ ಲೈಂಗಿಕತೆಯಲ್ಲಿ ತೊಡಗುವ ಜನರು ಶಾಶ್ವತ ಅಥವಾ ದೀರ್ಘಕಾಲೀನ ಸಂಬಂಧವನ್ನು ಹೊರತುಪಡಿಸಿ ತಮ್ಮ- ತಮ್ಮ ನಡುವೆ ಯಾವುದೇ ಭಾವನಾತ್ಮಕ ಸಂಪರ್ಕವನ್ನು ಹೊಂದಿಲ್ಲ ಎಂಬುದಾಗಿದೆ.

ಅಮೆರಿಕನ್​ ಸೋಶಿಯಲಾಜಿಕಲ್ ರಿವ್ಯೂನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಶಾಶ್ವತ ಅಥವಾ ದೀರ್ಘಕಾಲೀನ ಸಂಬಂಧದಲ್ಲಿರುವ ಜನರು, ವಿಶೇಷವಾಗಿ ಮಹಿಳೆಯರು ಲೈಂಗಿಕ ಸಂಭೋಗದ ಸಮಯದಲ್ಲಿ ಹೆಚ್ಚು ಸಂತೋಷ, ತೃಪ್ತಿ ಮತ್ತು ಉತ್ಸಾಹವನ್ನು ಅನುಭವಿಸುತ್ತಾರೆ, ಕಾರಣ ಅವರು, ತಮ್ಮ ಸಂಭೋಗದ ಸಮಯದಲ್ಲಿ ಹೆಚ್ಚು ಭಾವನಾತ್ಮಕವಾಗಿರುತ್ತಾರೆ ಎಂಬುದು ತಿಳಿದುಬಂದಿದೆ.

ಅದೇ ನಿಟ್ಟಿನಲ್ಲಿ, ಸಾಮಾಜಿಕ ಮತ್ತು ವೈಯಕ್ತಿಕ ಸಂಬಂಧಗಳ ಕುರಿತು 2015 ರಲ್ಲಿ ಪ್ರಕಟವಾದ ಸಂಶೋಧನಾ ಪ್ರಬಂಧವೊಂದರಲ್ಲಿ ಮಹಿಳೆಯರು ಅಲ್ಪಾವಧಿಯ ಸಂಬಂಧಗಳು ಅಥವಾ ಸಾಮಾನ್ಯ ಲೈಂಗಿಕತೆಗಿಂತ ಹೆಚ್ಚಾಗಿ ಶಾಶ್ವತ ಸಂಬಂಧಗಳಲ್ಲಿ ಹೆಚ್ಚಿನ ಸಮಯದ ಲೈಂಗಿಕ ಪರಾಕಾಷ್ಠೆಯನ್ನು ಸಾಧಿಸುತ್ತಾರೆ ಎಂದು ಉಲ್ಲೇಖಿಸಿದ್ದಾರೆ. ಅದೇ ಸಮಯದಲ್ಲಿ, ಮಹಿಳೆಯರಿಗೆ ಹೋಲಿಸಿದರೆ, ಪುರುಷರು ಭಾವನೆಗಳಿಗಿಂತ ಹೆಚ್ಚು ಅನ್ಯೋನ್ಯತೆ ಮತ್ತು ಕ್ಷಣಿಕ ಸಂತೋಷಗಳನ್ನು ಆರಿಸಿಕೊಳ್ಳುತ್ತಾರೆ, ಅದಕ್ಕಾಗಿಯೇ ಅವರು ಡೇಟಿಂಗ್​ ಸಂಸ್ಕೃತಿಯನ್ನು ಆರಿಸಿಕೊಳ್ಳುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

ಉತ್ತಮ ಲೈಂಗಿಕ ಸಂಬಂಧಗಳಿಗೆ ಭಾವನಾತ್ಮಕ ಅನ್ಯೋನ್ಯತೆಯ ಅಗತ್ಯ

ಸಹ-ಲೇಖಕ ಡಾ. ಬಾರ್ಟ್ಲಿಕ್ ಅವರು ತಮ್ಮ "ಇಂಟಿಗ್ರೇಟಿವ್ ಸೆಕ್ಸುವಲ್​​ ಹೆಲ್ತ್​​" ಎಂಬ ಪುಸ್ತಕದಲ್ಲಿ ಟಿವಿ ಮತ್ತು ಚಲನಚಿತ್ರಗಳಲ್ಲಿ ತೋರಿಸಿರುವ ಲೈಂಗಿಕ ಸಂಬಂಧಗಳು ನಿಜ ಜೀವನದ ಸಂಬಂಧಗಳಿಗಿಂತ ಬಹಳ ಭಿನ್ನವಾಗಿವೆ ಎಂದಿದ್ದಾರೆ. ರೀಲ್ ಜೀವನಕ್ಕೆ ವ್ಯತಿರಿಕ್ತವಾಗಿ, ನಿಜ ಜೀವನದಲ್ಲಿ ಉತ್ತಮ ಮತ್ತು ಆಹ್ಲಾದಕರವಾದ ದೈಹಿಕ ಸಂಬಂಧವನ್ನು ಹೊಂದಲು, ದಂಪತಿಗಳ ನಡುವೆ ಅನ್ಯೋನ್ಯತೆ ಮತ್ತು ನಂಬಿಕೆ ಇರುವುದು ಮುಖ್ಯ. ಆಗ ಮಾತ್ರ ಅವರು ಪರಸ್ಪರರ ಇಷ್ಟ, ಆಸೆ, ಕಲ್ಪನೆ ಬಗ್ಗೆ ಪರಸ್ಪರ ಬಹಿರಂಗವಾಗಿ ಮಾತನಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಬಾರ್ಟ್ಲಿಕ್ ಪ್ರಕಾರ, ಲೈಂಗಿಕ ಸಂಬಂಧಗಳಿಗೆ ಸಂಬಂಧಿಸಿದಂತೆ ಪುರುಷರು ಮತ್ತು ಮಹಿಳೆಯರ ಆಲೋಚನೆ ಮತ್ತು ಅಗತ್ಯಗಳ ನಡುವೆ ಬಹಳ ವ್ಯತ್ಯಾಸವಿದೆ. ಒಂದು ಕಡೆ, ಮಹಿಳೆಯರು ಭಾವನೆಗಳು ಮತ್ತು ಪ್ರೀತಿಯಿಂದ ಪ್ರಚೋದಿಸಲ್ಪಡುತ್ತಾರೆ. ಮತ್ತೊಂದೆಡೆ, ಪುರುಷರಲ್ಲಿ ಲೈಂಗಿಕತೆಯು ಭಾವನಾತ್ಮಕ ಅನ್ಯೋನ್ಯತೆಗೆ ಕಾರಣವಾಗಿದೆ. ಆದರೆ, ಈ ವೈವಿಧ್ಯಮಯ ಆಲೋಚನೆಗಳು ತಮ್ಮ ಸಂಬಂಧಗಳ ಮೇಲೆ ಪರಿಣಾಮ ಬೀರದಂತೆ ಮಾಡಲು, ಪಾಲುದಾರರು ಇಬ್ಬರೂ ಪರಸ್ಪರರ ಆಸೆಗಳನ್ನು ಗೌರವಿಸುವುದು ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಮತ್ತು ಅವರ ಸಂಬಂಧವನ್ನು ಹೆಚ್ಚು ಆಹ್ಲಾದಕರವಾಗಿಸಲು ಪರಸ್ಪರರು ಸಹಕರಿಸಬೇಕು ಎಂದಿದ್ದಾರೆ.

ಇದರ ಹೊರತಾಗಿ, 2014 ರಲ್ಲಿ ಪ್ರಕಟವಾದ "ಇಂಟರ್ನ್ಯಾಷನಲ್ ಜರ್ನಲ್ ಆಫ್ ಕ್ಲಿನಿಕಲ್ ಅಂಡ್ ಹೆಲ್ತ್ ಸೈಕಾಲಜಿ" ಎಂಬ ವಿಷಯದ ಮೇಲೆ ಮಾಡಿದ ವಿಶ್ಲೇಷಣೆಯಲ್ಲಿ, ದಂಪತಿಗಳಲ್ಲಿ ವಿಶ್ವಾಸ ಮತ್ತು ಭಾವನಾತ್ಮಕ ಬಾಂಧವ್ಯ ಇದ್ದರೆ, ಪುರುಷರು ಮತ್ತು ಮಹಿಳೆಯರು ಇಬ್ಬರೂ ಪರಸ್ಪರರ ಲೈಂಗಿಕ ಆಸೆಗಳನ್ನು ಪೂರೈಸಲು ಪ್ರಯತ್ನಿಸುತ್ತಾರೆ. ಇದರಿಂದ ತಮ್ಮ ಸಂಬಂಧಗಳಲ್ಲಿ ಯಾವುದೇ ಅವಮಾನ ಅಥವಾ ಹಿಂಜರಿಕೆಯಿಲ್ಲದೆ ಲೈಂಗಿಕ ಸಂಬಂಧವನ್ನು ಇನ್ನಷ್ಟು ದೀರ್ಘಕಾಲದವರೆಗೆ ಸಂತೋಷಕರವಾಗಿಡಲು ಸಹಾಯಕವಾಗುತ್ತದೆ ಎಂದು ತಿಳಿಸಿದ್ದಾರೆ.

ಲೈಂಗಿಕ ಸಂಬಂಧದಲ್ಲಿ ಸಂತೋಷವನ್ನು ಹೆಚ್ಚಿಸುವುದು ಹೇಗೆ?

ಮಾನಸಿಕ ಒತ್ತಡ ಮುಕ್ತ ತರಬೇತಿಯ ಸಹಾಯದಿಂದ ಮಹಿಳೆಯರು ತಮ್ಮ ಮನಸ್ಥಿತಿಯನ್ನು ನಿಯಂತ್ರಿಸಲು ಕಲಿತಿದ್ದಾರೆ. ಲೈಂಗಿಕ ಸಂಭೋಗದ ಸಮಯದಲ್ಲಿ, ಅವರು ಒತ್ತಡ ಮತ್ತು ಖಿನ್ನತೆಯಿಂದ ಉಂಟಾಗುವ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಾಗಿದೆ ಮತ್ತು ಅವರ ಲೈಂಗಿಕ ಸಂಬಂಧವೂ ಸುಧಾರಿಸಿದೆ ಎಂದು ವ್ಯಾಂಕೋವರ್‌ನ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ ಮಹಿಳಾ ಆರೋಗ್ಯ ಸಂಶೋಧನಾ ಸಂಸ್ಥೆಯ ಮಹಿಳಾ ಲೈಂಗಿಕ ಆರೋಗ್ಯ ಕೆನಡಾ ಸಂಶೋಧನಾ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಲಾರಿ ಎ. ಬ್ರೊಟ್ಟೊ ಅವರು ತಮ್ಮ ಸಂಶೋಧನೆಯಲ್ಲಿ ವಿವರಿಸಿದ್ದಾರೆ.

ದಂಪತಿಗಳ ಸಂಬಂಧಗಳ ಸುಧಾರಣೆಗೆ ವ್ಯಕ್ತಿಗಳು ತಮ್ಮ ಭಾವನೆಗಳು, ಆಸೆಗಳು ಮತ್ತು ದೈಹಿಕ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಪ್ರಾಮಾಣಿಕವಾಗಿರುವುದು ಮುಖ್ಯವಾಗಿದೆ ಎಂದು ನ್ಯೂಪೋರ್ಟ್ ಬೀಚ್‌ನ ಸದರ್ನ್ ಕ್ಯಾಲಿಫೋರ್ನಿಯಾ ಸೆಂಟರ್ ಫಾರ್ ಲೈಂಗಿಕ ಆರೋಗ್ಯದ ಎಂಡಿ ಡಾ. ಮೈಕೆಲ್ ಕ್ರೈಚ್‌ಮನ್ ತಿಳಿಸಿದ್ದಾರೆ.

ಕೆಲವೊಮ್ಮೆ ದೈಹಿಕ ಸಂಬಂಧಗಳ ಸಮಯದಲ್ಲಿ, ದಂಪತಿಗಳು ತಮ್ಮ ದೇಹದ ತೂಕ, ದೈಹಿಕ ಆಕರ್ಷಣೆ ಮತ್ತು ಶಿಶ್ನದ ಗಾತ್ರದ ಬಗ್ಗೆ ಹೆಚ್ಚು ಕಾಳಜಿ, ಪ್ರಜ್ಞೆ ಮತ್ತು ಕೀಳರಿಮೆಯನ್ನು ಅನುಭವಿಸುತ್ತಾರೆ, ಇದು ಪರಸ್ಪರ ಇಬ್ಬರ ನಡುವಿನ ಸಂಬಂಧದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಮಹಿಳೆಯರು ಅಥವಾ ಪುರುಷರು ತಮ್ಮ ಮನಸ್ಸಿನಲ್ಲಿ ಇಂತಹ ನಕಾರಾತ್ಮಕ ಆಲೋಚನೆಗಳನ್ನು ಹೊಂದಲು ಪ್ರಾರಂಭಿಸಿದರೆ, ಅವರ ಲೈಂಗಿಕ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಡಾ. ಮೈಕೆಲ್ ಕ್ರಿಚ್ಮನ್ ವಿವರಿಸುತ್ತಾರೆ. ಹಾಗಾಗಿ, ಈ ಸಂದರ್ಭದಲ್ಲಿ, ನಕಾರಾತ್ಮಕ ಆಲೋಚನೆಗಳ ಬದಲು, ದಂಪತಿಗಳು ತಮ್ಮ ದೇಹದ ಮೇಲಿನ ಸಂವೇದನೆಗಳನ್ನು ಮತ್ತು ಅವರ ಸಂಗಾತಿಯ ಸ್ಪರ್ಶವನ್ನು ಅನುಭವಿಸಲು ಪ್ರಯತ್ನಿಸಬೇಕು ಎಂದು ಸಲಹೆಯನ್ನು ನೀಡಿದ್ದಾರೆ.

ಮಿಸ್ಸಿಸೌಗಾದ ಟೊರೊಂಟೊ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಡಾ. ಅನ್ನಾ ಎಂ. ಲೋಮನೋವ್ಸ್ಕಾ ಅವರ ಪ್ರಕಾರ, ನಿಮ್ಮ ಸಂಗಾತಿ ನಿಮ್ಮಿಂದ ದೂರವಾಗದಿರುವಂತೆ ಅವರೊಂದಿಗೆ ಸಂಪರ್ಕದಲ್ಲಿರುವುದು ಬಹಳ ಮುಖ್ಯ, ಇದರಿಂದ ದಾಂಪತ್ಯದ ಸಂಬಂಧಗಳಲ್ಲಿ ಹೆಚ್ಚಿನ ಅನ್ಯೋನ್ಯತೆಯನ್ನು ಹೆಚ್ಚಿಸುವುದಲ್ಲದೇ ಇಬ್ಬರ ನಡುವೆ ಪರಸ್ಪರ ತಿಳುವಳಿಕೆ ಮತ್ತು ಪ್ರೀತಿಯನ್ನು ಹೆಚ್ಚಿಸುತ್ತದೆ. ದಂಪತಿಗಳು ತಮ್ಮ ಮೊಬೈಲ್​ ಮೂಲಕ ಮೆಸೇಜ್​, ವಿಡಿಯೋ ಕರೆಗಳು ಇತ್ಯಾದಿಗಳ ಸಹಾಯದಿಂದ ಸಂಪರ್ಕದಲ್ಲಿರಬಹುದು ಎಂದು ಸಲಹೆಯನ್ನು ನೀಡಿದ್ದಾರೆ.

ಆರೋಗ್ಯಕರ ಮತ್ತು ಆಹ್ಲಾದಕರ ಲೈಂಗಿಕ ಸಂಬಂಧವನ್ನು ಹೊಂದಬೇಕಾದರೆ, ದಂಪತಿಗಳು ತಮ್ಮ ನಡುವಿನ ಆಸೆ, ಕಲ್ಪನೆ, ಸಂತೋಷ ಮೊದಲಾದವುಗಳ ಕುರಿತು ಮುಕ್ತವಾಗಿ ಮಾತನಾಡಬೇಕು ಎಂದು ವೈದ್ಯರು ತಿಳಿಸುತ್ತಾರೆ.

Last Updated : Jun 23, 2021, 9:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.