ETV Bharat / headlines

ರೆಮ್​ಡಿಸಿವರ್ ಬಾಟಲಿನಲ್ಲಿ ಆ್ಯಂಟಿಬಯೋಟಿಕ್ ದ್ರಾವಣ.. ಸೀಲ್ ಮಾಡಿ ಮಾರಾಟ ಮಾಡುತ್ತಿದ್ದ ವೈದ್ಯ ಅಂದರ್​ - Bengaluru News

ವೈದ್ಯನಾಗಿರುವ ಕಾರಣ ಸಹಜವಾಗಿಯೇ ಯಾರಿಗೆ ರೆಮ್ಡಿಸಿವರ್ ಅಗತ್ಯ ಎಂಬುದರ ಬಗ್ಗೆ ಗೊತ್ತಾಗುತ್ತಿತ್ತು. ಅಂತಹವರನ್ನು ಸಂಪರ್ಕಿಸಿ ಅವರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದ..

Bengaluru
Bengaluru
author img

By

Published : May 21, 2021, 4:15 PM IST

ಬೆಂಗಳೂರು : ಕಾಳಸಂತೆಯಲ್ಲಿ ರೆಮ್ಡಿಸಿವರ್ ಮಾರಾಟ ಮತ್ತು ಖಾಲಿ ರೆಮ್ಡಿಸಿವರ್ ಬಾಟಲ್​ಗಳಲ್ಲಿ ಆ್ಯಂಟಿಬಯೋಟಿಕ್ ಹಾಕಿ ಜನರಿಗೆ ವಂಚನೆ ಮಾಡುತ್ತಿದ್ದ ವೈದ್ಯನನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಅಜಯ್ ಕುಮಾರ್ ಯಾದವ್ ಬಂಧಿತ ವೈದ್ಯ. ಬಂಧಿತನಿಂದ ₹36 ಸಾವಿರ ಬೆಲೆಯ 8 ನಕಲಿ ರೆಮಿಡಿಸಿವರ್ ವಶಕ್ಕೆ ಪಡೆಯಲಾಗಿದೆ. ಆರೋಪಿಯು ಮೂಲತಃ ಉತ್ತರಪ್ರದೇಶವನಾಗಿದ್ದು, ಹಲವು ವರ್ಷಗಳಿಂದ ಬಾಗಲೂರಿನಲ್ಲಿ ನೆಲೆಸಿದ್ದ. ಇನ್ನು, ಸ್ವಂತ ಕ್ಲಿನಿಕ್​ ಹೊಂದಿದ್ದ ಈತ, ಕೆಲ ಆಸ್ಪತ್ರೆಗಳಿಗೆ ವಿಸಿಟರ್ ಡಾಕ್ಟರ್​ನಾಗಿ ಕೆಲಸ‌ ಮಾಡುತ್ತಿದ್ದ.‌

ನಗರದಲ್ಲಿ ಕೊರೊನಾ ಹೆಚ್ಚಾದಂತೆ ರೆಮ್ಡಿಸಿವರ್ ಇಂಜೆಕ್ಷನ್​ಗೆ​ ಹೆಚ್ಚಿನ ಬೇಡಿಕೆ ಬಂದಿತ್ತು. ಈ ವೇಳೆ ಆಸ್ಪತ್ರೆಯಿಂದ ಕದ್ದು ತಂದ ರೆಮ್ಡಿಸಿವರನ್ನು ತಮ್ಮ ಕ್ಲಿನಿಕ್​ನ ರೋಗಿಗಳಿಗೆ ಸುಮಾರು​ 11 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದ ಎಂದು ನಗರ ಪೂರ್ವ ವಿಭಾಗದ ಡಿಸಿಪಿ ಡಾ.ಶರಣಪ್ಪ ತಿಳಿಸಿದ್ದಾರೆ.

ರೆಮ್ಡಿಸಿವಿರ್ ಬಾಟಲಿಯಲ್ಲಿ ಆ್ಯಂಟಿಬಯೋಟಿಕ್ ದ್ರಾವಣ: ಇನ್ನು ಖಾಲಿ ರೆಮ್ಡಿಸಿವರ್ ಬಾಟಲ್​ಗಳನ್ನ ಕದ್ದು ಅದಕ್ಕೆ ಆ್ಯಂಟಿಬಯೋಟಿಕ್ ಹಾಕಿ ಲಿಕ್ವಿಡ್ ತಯಾರಿಸಿ ಅದನ್ನು ಫೆವಿಕ್ವಿಕ್​ನಲ್ಲಿ ಸೀಲ್ ಮಾಡಿ‌ ಹೊಸ ಬಾಟಲ್​ ಎಂಬಂತೆ ನಂಬಿಸಿ ಜನರಿಗೆ ಮಾರಾಟ ಮಾಡುತ್ತಿದ್ದ.

ವೈದ್ಯನಾಗಿರುವ ಕಾರಣ ಸಹಜವಾಗಿಯೇ ಯಾರಿಗೆ ರೆಮ್ಡಿಸಿವರ್ ಅಗತ್ಯ ಎಂಬುದರ ಬಗ್ಗೆ ಗೊತ್ತಾಗುತ್ತಿತ್ತು. ಅಂತಹವರನ್ನು ಸಂಪರ್ಕಿಸಿ ಅವರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದ.

ಈ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಕೆಜಿ ಹಳ್ಳಿ ಪೊಲೀಸರು ದಾಳಿ ನಡೆಸಿದಾಗ ಒಟ್ಟು 8 ರೆಮ್ಡಿಸಿವರ್ ಇಂಜೆಕ್ಷನ್ ಬಾಟಲ್​ಗಳು ಪತ್ತೆಯಾಗಿದೆ. ಸದ್ಯ ಅವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.