ಕೆಫೆ ಕಾಫೀ ಡೇ ಮಾಲೀಕ ಸಿದ್ದಾರ್ಥ್ ಅಸ್ಥಿ ಭದ್ರಾ ನದಿಯಲ್ಲಿ ವಿಸರ್ಜಿಸಿದ ಪುತ್ರರು - ಶಾಸಕ ಟಿ ಡಿ ರಾಜೇಗೌಡ ನೆರವು
ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಕೆಫೆ ಕಾಫೀ ಡೇ ಮಾಲೀಕ, ಮಲೆನಾಡಿನ ಹಿರಿಯ ಉದ್ಯಮಿ ಸಿದ್ದಾರ್ಥ್ ಹೆಗಡೆ ಅವರ ಅಸ್ಥಿಯನ್ನು ಭದ್ರಾ ನದಿಯಲ್ಲಿ ಅವರ ಮಕ್ಕಳು ವಿಸರ್ಜನೆ ಮಾಡಿದ್ರು. ಚಿಕ್ಕಮಗಳೂರಿನ ಬಾಳೆಹೊನ್ನೂರು ಬಳಿ ಇರುವ ಖಾಂಡ್ಯದ ಮಾರ್ಕಂಡೇಶ್ವರ ದೇವಾಲಯದ ಸಮೀಪದ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಲಾಯಿತು. ಸಿದ್ದಾರ್ಥ್ ಅವರ ಪುತ್ರರಾದ ಅಮರ್ಥ್ಯ ಹಾಗೂ ಇಶಾನ್ ಇಬ್ಬರೂ ಸೇರಿ ಅಸ್ಥಿಯನ್ನು ನದಿಯಲ್ಲಿ ಬಿಟ್ಟರು. ಒಕ್ಕಲಿಗ ಸಂಪ್ರದಾಯದಂತೆ ಪೂಜೆಯನ್ನು ಸಲ್ಲಿಸಿ ಅಸ್ಥಿ ವಿಸರ್ಜನೆ ಮಾಡಿದ್ದು, ಈ ವೇಳೆ ಶೃಂಗೇರಿ ಶಾಸಕ ಟಿ ಡಿ ರಾಜೇಗೌಡ ಅವರು ಅಮರ್ಥ್ಯ ಮತ್ತು ಇಶಾನ್ಗೆ ಸಾಥ್ ನೀಡಿದ್ರು.
ಉದ್ಯಮಿ ಸಿದ್ದಾರ್ಥ ಹೆಗ್ಡೆ ಅಸ್ಥಿ ಭದ್ರಾ ನದಿಯಲ್ಲಿ ವಿಸರ್ಜಿಸಿದ ಪುತ್ರರು; ಶಾಸಕ ಟಿ ಡಿ ರಾಜೇಗೌಡ ಸಾಥ್
ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಕೆಫೆ ಕಾಫೀ ಡೇ ಮಾಲೀಕ, ಮಲೆನಾಡಿನ ಹಿರಿಯ ಉದ್ಯಮಿ ಸಿದ್ದಾರ್ಥ್ ಹೆಗಡೆ ಅವರ ಅಸ್ಥಿಯನ್ನು ಭದ್ರಾ ನದಿಯಲ್ಲಿ ಅವರ ಮಕ್ಕಳು ವಿಸರ್ಜನೆ ಮಾಡಿದ್ರು. ಚಿಕ್ಕಮಗಳೂರಿನ ಬಾಳೆಹೊನ್ನೂರು ಬಳಿ ಇರುವ ಖಾಂಡ್ಯದ ಮಾರ್ಕಂಡೇಶ್ವರ ದೇವಾಲಯದ ಸಮೀಪದ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಲಾಯಿತು. ಸಿದ್ದಾರ್ಥ್ ಅವರ ಪುತ್ರರಾದ ಅಮರ್ಥ್ಯ ಹಾಗೂ ಇಶಾನ್ ಇಬ್ಬರೂ ಸೇರಿ ಅಸ್ಥಿಯನ್ನು ನದಿಯಲ್ಲಿ ಬಿಟ್ಟರು. ಒಕ್ಕಲಿಗ ಸಂಪ್ರದಾಯದಂತೆ ಪೂಜೆಯನ್ನು ಸಲ್ಲಿಸಿ ಅಸ್ಥಿ ವಿಸರ್ಜನೆ ಮಾಡಿದ್ದು, ಈ ವೇಳೆ ಶೃಂಗೇರಿ ಶಾಸಕ ಟಿ ಡಿ ರಾಜೇಗೌಡ ಅವರು ಅಮರ್ಥ್ಯ ಮತ್ತು ಇಶಾನ್ಗೆ ಸಾಥ್ ನೀಡಿದ್ರು.
Last Updated : Aug 9, 2019, 6:44 PM IST