ETV Bharat / headlines

ಯಾದಗಿರಿ: ಶರ್ಟ್ ಬಿಚ್ಚಿ ಸೋಂಕಿತರಿಗೆ ಚಿಕಿತ್ಸೆಯ ಆರೋಪ - ಡಾಕ್ಟರ್​ ಹೇಳೋದೇನು? - corona latest news

ಪಿಪಿಇ ಕಿಟ್​ ಧರಿಸದೆಯೇ ಚಿಕಿತ್ಸೆ ನೀಡಿದ್ದೇನೆ ಎಂಬ ಆರೋಪ ಸುಳ್ಳು. ನನ್ನ ಕೆಲಸ ಅವಧಿ ಮುಗಿದ ಕೂಡಲೇ ವಿಶ್ರಾಂತಿ ಕೊಠಡಿಯಲ್ಲಿ ಪಿಪಿಇ ​ಕಿಟ್​​ ತೆಗೆಯುತ್ತೇನೆ. ಆ ಸಂದರ್ಭದಲ್ಲೇ ಸೋಂಕಿತನನ್ನು ಕರೆದುಕೊಂಡು ಆಸ್ಪತ್ರೆಗೆ ಬಂದಿದ್ದವರು ಈ ವಿಡಿಯೋ ಮಾಡಿದ್ದಾರೆ. ವೈದ್ಯರು ತಮ್ಮ ಜೀವವನ್ನೇ ಪಣಕ್ಕಿಟ್ಟು ಕಾರ್ಯನಿರ್ವಹಿಸುವ ಈ ಸಂದರ್ಭದಲ್ಲಿ ಇಂಥಾ ಆರೋಪ ಮಾಡಬಾರದು ಎಂದು ಡಾ. ಭೀಮನಗೌಡ ಹೇಳಿದ್ದಾರೆ.

 A doctor not wearing ppe kit when giving treatment to corona patients

author img

By

Published : Apr 22, 2021, 6:20 PM IST

Updated : Apr 22, 2021, 9:30 PM IST

ಯಾದಗಿರಿ: ಹೆಮ್ಮಾರಿ ಕೊರೊನಾ ವೈರಸ್ ತಡೆಗಟ್ಟಲು ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಆದರೆ, ಇಲ್ಲೊಂದು ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಸರ್ಕಾರದ ನಿಯಮಗಳನ್ನೆಲ್ಲ ಗಾಳಿಗೆ ತೂರಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪಾಸಿಟಿವ್ ಪ್ರಕರಣಗಳಿಂದ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಯಾದಗಿರಿ ನೂತನ ಜಿಲ್ಲಾಸ್ಪತ್ರೆಯನ್ನು ಜಿಲ್ಲಾಡಳಿತ ಕೋವಿಡ್ ಕೇರ್ ಸೆಂಟರ್ ಆಗಿ ಮಾಡಿದೆ. ಈ ಆಸ್ಪತ್ರೆಯ ವೈದ್ಯ ಡಾ. ಭೀಮನಗೌಡ ಕೋವಿಡ್ ಕೇರ್ ಸೆಂಟರ್​ನಲ್ಲಿ ಮಾಸ್ಕ್ ಹಾಗೂ ಪಿಪಿಕಿಟ್ ಇಲ್ಲದೆ ಶರ್ಟ್ ಕೂಡ ಹಾಕಿಕೊಳ್ಳದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಳೆದ ರಾತ್ರಿ ಕೋವಿಡ್ ಸೋಂಕಿತ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಲು ತೆರಳಿದ್ದ ವೇಳೆ ವೈದ್ಯ ಭೀಮನಗೌಡ ಶರ್ಟ್​ ಕೂಡ ಹಾಕಿಕೊಂಡಿರಲಿಲ್ಲ ಎಂದು ಕೋವಿಡ್​ ಸೋಂಕಿತನ ಜೊತೆಗಿದ್ದವರು ಆರೋಪ ಮಾಡಿದ್ದಾರೆ.

ವೈದ್ಯರ ಸ್ಪಷ್ಟನೆ ಏನು?

ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ವೈದ್ಯ ಡಾ. ಭೀಮನಗೌಡ, ನಾವು ನಿರಂತರವಾಗಿ 12 ಗಂಟೆ ಕಾರ್ಯ ನಿರ್ವಹಿಸುತ್ತಿದ್ದೇವೆ. ನನ್ನ ಕೆಲಸದ ಅವಧಿ ಮುಗಿದ ಕೂಡಲೇ ವಿಶ್ರಾಂತಿ ಕೊಠಡಿಯಲ್ಲಿ ಪಿಪಿಇ ​ಕಿಟ್​​ ತೆಗೆಯುತ್ತೇನೆ. ಆ ಸಂದರ್ಭದಲ್ಲೇ ಸೋಂಕಿತನನ್ನು ಕರೆದುಕೊಂಡು ಆಸ್ಪತ್ರೆಗೆ ಬಂದಿದ್ದವರು ಈ ವಿಡಿಯೋ ಮಾಡಿದ್ದಾರೆ. ಅವರ ಆರೋಪ ಸುಳ್ಳು ಎಂದಿದ್ದಾರೆ. ವೈದ್ಯರು ತಮ್ಮ ಜೀವವನ್ನೇ ಪಣಕ್ಕಿಟ್ಟು ಕಾರ್ಯನಿರ್ವಹಿಸುವ ಈ ಸಂದರ್ಭದಲ್ಲಿ ಇಂಥಾ ಆರೋಪ ಮಾಡಬಾರದು ಎಂದು ಡಾ. ಭೀಮನಗೌಡ ಹೇಳಿದ್ದಾರೆ.

Last Updated : Apr 22, 2021, 9:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.