ತೆಲುಗು ನಟ ಅಡವಿ ಶೇಷ್ ಸದ್ಯ ಹುತಾತ್ಮ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜೀವನ ಆಧಾರಿತ, 'ಮೇಜರ್' ಸಿನಿಮಾದಲ್ಲಿ ಸಂದೀಪ್ ಉನ್ನಿಕೃಷ್ಣನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 120ಕ್ಕೂ ಹೆಚ್ಚು ದಿನ ಹಾಗೂ 125ಕ್ಕೂ ಹೆಚ್ಚು ಸ್ಥಳಗಳಲ್ಲಿ ಚಿತ್ರೀಕರಣ ಮಾಡಿರುವ ಈ ಸಿನಿಮಾ ಜೂನ್ 3ರಂದು ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.
ಈ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿರುವ ಅಡಿವಿ ಶೇಷ್, ಮೇಜರ್ ಸಿನಿಮಾ ನನ್ನ ಡ್ರೀಮ್ ಪ್ರಾಜೆಕ್ಟ್. ಕಥೆ ಬರೆದು ಅಭಿನಯಿಸಿರುವ ಸಿನಿಮಾದ ಇಂಟ್ರಸ್ಟಿಂಗ್ ವಿಚಾರಗಳನ್ನ ಹಂಚಿಕೊಂಡರು. ಭಾರತೀಯ ಚಿತ್ರರಂಗ ಇದೇ ಮೊದಲ ಬಾರಿಗೆ, ಸಿನಿಮಾ ಬಿಡುಗಡೆ ಮಾಡುವ ಮೊದಲು ಮುಂಬೈ, ಪುಣೆ ಮತ್ತು ಜೈಪುರದಲ್ಲಿ ಪ್ರಿಮಿಯರ್ ಶೋ ಮಾಡಲಾಯಿತು. ಅರ್ಧ ಗಂಟೆಯಲ್ಲಿ ಸಿನಿಮಾದ ಟಿಕೆಟ್, ಹೌಸ್ ಫುಲ್ ಬುಕ್ಕಿಂಗ್ ಆಗಿತ್ತು ಎಂದರು.
ಇನ್ನು ಮುಂಬೈಯಲ್ಲಿ ಸೈನ್ಯಾಧಿಕಾರಿ, ಈ ಸಿನಿಮಾ ನೋಡಿ ಭಾವುಕರಾದರು. ಜತೆಗೆ ನನಗೆ ಸೇನೆಯವರಿಗೆ ಕೊಡುವ ಈ ಪದಕವನ್ನ ಕೊಟ್ಟರು. ಇದು ನನಗೆ ಆಸ್ಕರ್ ಅವಾರ್ಡ್ಗಿಂತ ಹೆಚ್ಚು ಎಂದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅಡಿವಿ ಶೇಷ್, ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ಇಷ್ಟ. ಅವರ '777 ಚಾರ್ಲಿ' ಸಿನಿಮಾದ ಟ್ರೈಲರ್ ಅದ್ಭುತ. ಇವರ ಜೊತೆಗೆ ನಾನು ಪುನೀತ್ ರಾಜ್ಕುಮಾರ್ ಹಾಗೂ ಸುದೀಪ್ ಅವರ ಅಭಿಮಾನಿ ಎಂದರು.
ಇದನ್ನೂ ಓದಿ: ಸಂದೀಪ್ ಉನ್ನಿಕೃಷ್ಣನ್ ಪಾತ್ರ ಮಾಡೋದು ಚಾಲೆಂಜಿಂಗ್ ಆಗಿತ್ತು: ನಾಯಕ ಅಡಿವಿ ಶೇಷ್