ETV Bharat / entertainment

ಬಿಗ್​ ಬಾಸ್ ಮಿಡ್‌ ವೀಕ್‌ ಎಲಿಮಿನೇಶನ್​​​​​​: ಕಣ್ಣೀರು ಸುರಿಸಿ ಮನೆಯಿಂದ ಹೊರನಡೆದ ತನಿಷಾ - Bigg Boss

'ತನಿಷಾ ಮನೆಯಿಂದ ಔಟ್!' ಎಂಬ ಶೀರ್ಷಿಕೆಯಡಿ ಬಿಗ್​ ಬಾಸ್ ಹೊಸ​​ ಪ್ರೋಮೋ ಬಿಡುಗಡೆ ಮಾಡಿದೆ.

Tanisha Kuppanda eliminated
ತನಿಷಾ ಕುಪ್ಪಂಡ ಎಲಿಮಿನೇಟ್​
author img

By ETV Bharat Karnataka Team

Published : Jan 18, 2024, 9:00 AM IST

Updated : Jan 18, 2024, 9:10 AM IST

ಕನ್ನಡ ಬಿಗ್​ ಬಾಸ್​ ಸೀಸನ್​ 10ರ ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಅಂತಿಮ ಘಟ್ಟ ತಲುಪಿರುವ ಕಾರ್ಯಕ್ರಮ ಕ್ಷಣಕ್ಷಣಕ್ಕೂ ಕುತೂಹಲಕಾರಿಯಾಗುತ್ತಿದೆ. ಸಪ್ರೈಸ್‌ ಜೊತೆ ಸಾಕಷ್ಟು ಟ್ವಿಸ್ಟ್​​ಗಳೂ ಎದುರಾಗುತ್ತಿವೆ. ಸದ್ಯ ಉಳಿದುಕೊಂಡಿರುವ ಎಲ್ಲರೂ ಪ್ರಬಲ ಸ್ಪರ್ಧಿಗಳೇ. ಇಂಥ ಸಂದರ್ಭದಲ್ಲಿ ಮನೆಯಿಂದ ಯಾರೇ ಹೊರನಡೆದರೂ ಅನೇಕರ ಆಶ್ಚರ್ಯಕ್ಕೆ ಕಾರಣವಾಗುತ್ತದೆ. ಅದರಂತೆ ಇದೀಗ ತನಿಷಾ ಕುಪ್ಪಂಡ ಮನೆಯಿಂದ ಹೊರನಡೆಯುವ ಸಂದರ್ಭ ಎದುರಾಗಿದ್ದು, ಪ್ರೇಕ್ಷಕರಿಗೆ ಶಾಕ್​​ ಆಗಿದೆ. ಎಲಿಮಿನೇಶನ್​ ಸುಳಿವು ಜಿಯೋಸಿನಿಮಾ ಅನಾವರಣಗೊಳಿಸಿರುವ ಪ್ರೋಮೋದಲ್ಲಿ ದೊರೆತಿದೆ.

ಬಿಗ್​ ಬಾಸ್​ ಪ್ರೋಮೋ: 'ತನಿಷಾ ಮನೆಯಿಂದ ಔಟ್!' ಎಂಬ ಶೀರ್ಷಿಕೆಯಡಿ ಕಲರ್ಸ್ ಕನ್ನಡ ಪ್ರೋಮೋ ಅನಾವರಣಗೊಳಿಸಿದೆ. ಇದರಲ್ಲಿ ಇದ್ದಕ್ಕಿದ್ದಂತೆ ಮನೆಯವರನ್ನು ಒಂದೆಡೆ ಸೇರಿಸಿದ ಬಿಗ್​ ಬಾಸ್​​, ತನಿಷಾ ಎಲಿಮಿನೇಟ್​ ಆಗಿರುವ ವಿಚಾರ ತಿಳಿಸಿದ್ದಾರೆ. ಇದನ್ನು ಕೇಳಿ ಶಾಕ್​ ಆದ ತನಿಷಾ ಗಳಗಳ ಕಣ್ಣೀರು ಸುರಿಸಿ, ತಮ್ಮ ಬೇಸರ ಹೊರಹಾಕಿದರು.

ವಾರದ ಮಧ್ಯದಲ್ಲೇ ಕಾದಿದೆ ಬಿಗ್​ ಶಾಕ್​ ಎಂದು ಪ್ರೋಮೋ ಆರಂಭಗೊಳ್ಳುತ್ತದೆ. ಬಿಗ್​ ಬಾಸ್​ ಸೂಚಿಸುವ ಸದಸ್ಯರು ಮುಖ್ಯದ್ವಾರದ ಮೂಲಕ ಕೂಡಲೇ ಹೊರಬರಬೇಕು ಎಂದು ಆದೇಶ ಬರುತ್ತಿದ್ದಂತೆ ಮನೆ ಮಂದಿಯ ಮೊಗದಲ್ಲಿ ಭಯ, ಆಶ್ಚರ್ಯ ಕಾಣಿಸಿತು. ತನಿಷಾ ಈ ಮನೆಯಲ್ಲಿ ನಿಮ್ಮ ಪ್ರಯಾಣ ಇಲ್ಲಿಗೆ ಮುಕ್ತಾಯಗೊಂಡಿದೆ ಎಂದು ಬಿಗ್​ ಬಾಸ್​ ತಿಳಿಸಿದ್ದಾರೆ. ಮುಖ್ಯದ್ವಾರ ತೆರೆದುಕೊಳ್ಳುತ್ತದೆ. ಮಾತು ಆರಂಭಿಸಿದ ತನಿಷಾ, ಬಹಳ ಆಸೆ ಪಟ್ಟಿದ್ರಲ್ಲ ಈ ಮನೆಯಿಂದ ನಾನು ಹೋಗಬೇಕಂತ ಎಂದು ಹೇಳಿದರು. ಇದೇ ವೇಳೆ, ಬಿಗ್​ ಬಾಸ್​, ಏಕೆ ಬಿಗ್​ ಬಾಸ್​? ಎಂದು ಒಂದೇ ಸಮನೆ ಕಣ್ಣೀರು ಸುರಿಸಿದರು. ನನ್ನ ದನಿ ನಿಮಗೆಲ್ಲರಿಗೂ ಇರಿಟೇಟ್​ ಆಗ್ತಿತ್ತಲ್ವಾ?. ಇನ್ಮೇಲೆ ನನ್ ವಾಯ್ಸ್ ನಿಮಗ್ಯಾರಿಗೂ ಇರಿಟೇಟ್​ ಮಾಡಲ್ಲ ಎಂದು ನೊಂದು ನುಡಿದಿರುವುದನ್ನು ಪ್ರೋಮೋದಲ್ಲಿ ನೋಡಬಹುದು. ವರ್ತೂರ್​ ಸಂತೋಷ್​ ಕಣ್ಣಲ್ಲೂ ನೀರು ತುಂಬಿತ್ತು.

ಇದನ್ನೂ ಓದಿ: ಕೂಡ್ಲೂರಿನ ಮುನಿಯಪ್ಪನ ಜಾತ್ರೆಯಲ್ಲಿ ಪ್ರಾಣಿ ಬಲಿ ಬದಲು ಸಾತ್ವಿಕ ಪೂಜೆ: ಫೋಟೋಗಳು

ಈ ಪ್ರೋಮೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ತನಿಷಾ ಕುಪ್ಪಂಡ ಪ್ರಬಲ ಸ್ಪರ್ಧಿಯಾಗಿರುವ ಹಿನ್ನೆಲೆಯಲ್ಲಿ ಈ ಎಲಿಮಿನೇಷನ್​​​ ಹಲವರಿಗೆ ಆಘಾತ​ ನೀಡಿದೆ. ಈ ಬಗ್ಗೆ ಪ್ರೇಕ್ಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: 'ಕಾಟೇರ' ಮೂಲಕ 2024 ಶುಭಾರಂಭ: ಮುಂದಿನ ಕನ್ನಡ ಸಿನಿಮಾಗಳ ಮೇಲೆ ಭಾರಿ ನಿರೀಕ್ಷೆ

ಸುದೀಪ್​​ ನಿರೂಪಣೆಯಲ್ಲಿ ಮೂಡಿಬರುವ ಬಿಗ್‌ ಬಾಸ್ ತನ್ನದೇ ಆದ ಜನಪ್ರಿಯತೆ ಹೊಂದಿದೆ. ಪ್ರತಿ ಹೊಸ ಸೀಸನ್​ ಆರಂಭಗೊಂಡಾಗಲೂ ಹೊಸತನ ಅಳವಡಿಕೊಳ್ಳುವ ರಿಯಾಲಿಟಿ ಶೋ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗೆ ಅಚ್ಚುಮೆಚ್ಚಾಗಿದೆ. ಇದೀಗ ಸೀಸನ್​ 10 ಅಂತಿಮ ಘಟ್ಟದಲ್ಲಿದೆ. ಸ್ಪರ್ಧಿಗಳು ಸೇರಿದಂತೆ ವೀಕ್ಷಕರು ಫಿನಾಲೆಗೆ ಎದುರು ನೋಡುತ್ತಿದ್ದಾರೆ. ಅಂತಿಮ ಕ್ಷಣದಲ್ಲಿ ವೇದಿಕೆ ಮೇಲೆ ಸುದೀಪ್​ ಎಡಬಲದಲ್ಲಿ ನಿಲ್ಲುವವರಾರು?, ಈ ಬಾರಿಯ ಟ್ರೋಫಿ ಯಾರ ಕೈ ಸೇರಲಿದೆ? ಎಂಬ ಕುತೂಹಲ ಹಲವು ಮಂದಿಯದ್ದು. ಸದ್ಯ ತಮ್ಮ ಮೆಚ್ಚಿನ ಸ್ಪರ್ಧಿ ಮನೆಯಿಂದ ಹೊರನಡೆದ ಪ್ರೋಮೋ ಕಂಡ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Last Updated : Jan 18, 2024, 9:10 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.