ನವದೆಹಲಿ: ಸ್ವೀಡನ್ ಮೂಲದ ಮ್ಯೂಸಿಕ್ ಸ್ಟ್ರೀಮಿಂಗ್ ಕಂಪನಿ ಭಾರತ ಸೇರಿದಂತೆ ವಿಶ್ವಾದ್ಯಂತದ ನವ ಪಾಡ್ಕಾಸ್ಟರ್ಗಳ ಉನ್ನತಿಗಾಗಿ ಹಾಗೂ ಅವರ ಕೇಳುಗರ ಸಂಖ್ಯೆಯನ್ನು ಹೆಚ್ಚಿಸಲು ನೂತನ ಯೋಜನೆಗಳನ್ನು ಪರಿಚಯಿಸುತ್ತಿದೆ.
ಭಾರತ ಸೇರಿದಂತೆ ವಿಶ್ವದ 15 ಮಾರುಕಟ್ಟೆಗಳಲ್ಲಿ ರಾಡಾರ್ ಪಾಡ್ಕಾಸ್ಟರ್ಸ್ (RADAR Podcasters) ಎಂಬ ಯೋಜನೆಯನ್ನು ಸ್ಪಾಟಿಫೈ ಜಾರಿಗೊಳಿಸಿದೆ. ಹೊಸ ಕಲಾವಿದರನ್ನು ಬೆಂಬಲಿಸಲು ಈ ಯೋಜನೆ ಆರಂಭಿಸಲಾಗಿದೆ.
ರಾಡಾರ್ ಪಾಡ್ಕಾಸ್ಟರ್ಸ್ನಡಿ ಭಾರತದಿಂದ ಮೊದಲಿಗೆ ಆಯ್ಕೆಯಾಗಲಿರುವ ಮೂರು ಪಾಡ್ಕಾಸ್ಟ್ಗಳು ಹೀಗಿವೆ: ಅನುರಾಗ್ ಮೈನಸ್ ವರ್ಮಾ, ಚುಮ್ಮಾ ಕನ್ವರ್ಸೇಶನ್ಸ್ ವಿತ್ ಸಾಸ್ತ್ಯಾ ಮತ್ತು ಗೆಟಿಂಗ್ ಲಾಸ್ಟ್ ವಿತ್ ಅರ್ಚಿತ್ ಅಂಡ್ ಶಿರೀನ್.
ಪ್ರತಿ ಮೂರು ತಿಂಗಳಿಗೊಮ್ಮೆ ಬೇರೆ ಬೇರೆ ಸ್ಥಳೀಯ ಭಾಷೆಗಳ ಮೇಲೆ ಸ್ಪಾಟಿಫೈ ಗಮನ ಕೇಂದ್ರೀಕರಿಸಲಿದೆ.