ETV Bharat / entertainment

'ಲಿಟಲ್‌ ಚಾಂಪ್​'ಗೆ ಲಿವರ್​ ಸಮಸ್ಯೆ: ಚಿಕಿತ್ಸಾ ವೆಚ್ಚಕ್ಕೆ ರೇಶಮಿಯಾ ಕೊಟ್ಟ ವಾಚ್​ ಹರಾಜಿಗೆ! - ಬಾಲಿವುಡ್​​ ಗಾಯಕ ಹಿಮೇಶ್ ರೇಶಮಿಯಾ

ಲಿಟಲ್‌ ಚಾಂಪ್‌ ವೇದಿಕೆ ಮೇಲೆ ಬಾಲಕಿ ನವಪ್ರೀತ್‌ ಕೌರ್‌ ಗಾಯನಕ್ಕೆ ಹಿಮೇಶ್​ ರೇಶಮಿಯಾ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಂತೆಯೇ ಅದೇ ವೇದಿಕೆಗೆ ಬಂದು ಬಾಲಕಿಗೆ ಭವಿಷ್ಯದಲ್ಲಿ ಅವಕಾಶ ನೀಡುತ್ತೇನೆ ಎಂದು ಹೇಳಿ, ಮುಂಗಡ ರೂಪದಲ್ಲಿ ಆಕೆಯ ತಂದೆಗೆ ವಾಚ್​ ಕೊಟ್ಟಿದ್ದರು.

'ಲಿಟಲ್‌ ಚಾಂಪ್​' ಗಾಯಕಿಗೆ ಲಿವರ್​ ಸಮಸ್ಯೆ: ಚಿಕಿತ್ಸಾ ವೆಚ್ಚಕ್ಕಾಗಿ ಹಿಮೇಶ್​ ರೇಶಮಿಯಾ 'ವಾಚ್'​ ಹರಾಜಿಗೆ

author img

By

Published : Apr 12, 2022, 3:35 PM IST

ಫರೀದ್‌ಕೋಟ್‌ (ಪಂಜಾಬ್​): ಹಿಂದಿ ಖಾಸಗಿ ಟಿವಿ ಚಾನೆಲ್​​ನ ಜನಪ್ರಿಯ 'ಸರಿಗಮಪ ಲಿಟಲ್‌ ಚಾಂಪ್‌' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಂಜಾಬ್​ನ ಫರೀದ್‌ಕೋಟ್‌ ಜಿಲ್ಲೆಯ ಬಾಲಕಿಯ ಯಕೃತ್ತು(ಲಿವರ್) ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಈಕೆಯ ಚಿಕಿತ್ಸೆಗಾಗಿ ಕುಟುಂಬದವರು ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೇ, ಸಂಕಷ್ಟದಲ್ಲಿ ಸಂದರ್ಭದಲ್ಲಿ ಬಾಲಕಿಯ ಗಾಯನ ಮೆಚ್ಚಿ ಬಾಲಿವುಡ್​​ ಗಾಯಕ ಹಿಮೇಶ್ ರೇಶಮಿಯಾ ನೀಡಿದ್ದ ಕೈ ಗಡಿಯಾರವನ್ನೇ ಹರಾಜು ಮಾಡಲು ಮುಂದಾಗಿದ್ದಾರೆ.

2017ರಲ್ಲಿ ಜನಪ್ರಿಯ ಸರಿಗಮಪ ಲಿಟಲ್‌ ಚಾಂಪ್‌ನಲ್ಲಿ ಬಾಷನಂದಿ ಗ್ರಾಮದ ನವಪ್ರೀತ್‌ ಕೌರ್‌ ಪಾಲ್ಗೊಂಡಿದ್ದಳು. ಈಗ ಈಕೆ ಲಿವರ್ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಬಟಿಂಡಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮಗಳ ಪ್ರಾಣ ಉಳಿಸಿಕೊಳ್ಳಲು ತಂದೆ ಗುರುದೀಪ್ ಸಿಂಗ್ ಮತ್ತು ಕುಟುಂಬ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಿದ್ದರೂ, ಚಿಕಿತ್ಸೆಗೆ ಹಣ ಸಾಲುತ್ತಿಲ್ಲ. ಆದ್ದರಿಂದ ಹಿಮೇಶ್ ರೇಶಮಿಯಾ ಕೊಟ್ಟ ಕೈ ಗಡಿಯಾರವನ್ನೇ ಹರಾಜಿಗಿಡಲು ತೀರ್ಮಾನಿಸಿದ್ದೇವೆ ಎಂದು ತಂದೆ ಹೇಳಿದ್ದಾರೆ.

ಲಿಟಲ್‌ ಚಾಂಪ್‌ ವೇದಿಕೆ ಮೇಲೆ ನವಪ್ರೀತ್‌ ಕೌರ್‌ ಗಾಯನಕ್ಕೆ ಹಿಮೇಶ್​ ರೇಶಮಿಯಾ ಮೆಚ್ಚುಗೆ ವ್ಯಕ್ತಪಡಿಸಿ, ಬಾಲಕಿ ತಂದೆಗೆ ವಾಚ್​ ನೀಡಿದ್ದರು. ಇದೇ ವೇಳೆ ಭವಿಷ್ಯದಲ್ಲಿ ಹಾಡಲು ಅವಕಾಶ ನೀಡುವುದಾಗಿಯೂ ಭರವಸೆ ಕೊಟ್ಟಿದ್ದರು. ಆದರೆ, ಹಲವು ದಿನಗಳಿಂದ ನವಪ್ರೀತ್​ ಕೌರ್​ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಸದ್ಯ ಚಿಕಿತ್ಸಾ ವೆಚ್ಚ ಭರಿಸಲು ನಮಗೆ ಬೇರೆ ದಾರಿ ತೋರುತ್ತಿಲ್ಲ. ಹೀಗಾಗಿ ಈ ವಾಚ್​ ಅನ್ನು​ ಹರಾಜು ಮಾಡಿ, ಅದರಿಂದ ಬರುವ ಹಣದಿಂದ ಚಿಕಿತ್ಸೆ ಕೊಡಿಸಬೇಕು ಅಂದುಕೊಂಡಿದ್ದೇವೆ ಎಂದು ಗುರುದೀಪ್ ಸಿಂಗ್ ತಿಳಿಸಿದ್ದಾರೆ. ವಾಚ್ ಅನ್ನು ಗರಿಷ್ಠ ಮೊತ್ತದಲ್ಲಿ ಖರೀದಿಸುವ ಮೂಲಕ ಮಗಳ ಚಿಕಿತ್ಸೆಗೆ ನೆರವಾಗುವಂತೆಯೂ ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕಾಶ್ಮೀರದಲ್ಲೋರ್ವ ಯುವ ಗಾಯಕಿ.. ರ್‍ಯಾಪ್​ ಮೂಲಕ ಜನರ ಮನ ಕದಿಯುತ್ತಿದ್ದಾಳೆ ‘ಆ್ಯಪಲ್’​ ಬೆಡಗಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.