ನಿರ್ದೇಶಕ ಫರೂಕ್ ಕಬೀರ್ ಅವರ 'ಖುದಾ ಹಾಫಿಜ್: ಅಧ್ಯಾಯ 2- ಅಗ್ನಿ ಪರೀಕ್ಷೆ' ಸಿನಿಮಾ ಕುರಿತು ಶಿವಾಲಿಕಾ ಒಬೆರಾಯ್ ಮತ್ತು ವಿದ್ಯುತ್ ಜಮ್ವಾಲ್ ಮಾತನಾಡಿದ್ದಾರೆ. ಅಧ್ಯಾಯ II- ಅಗ್ನಿ ಪರೀಕ್ಷೆಯು ಮೊದಲ ಚಿತ್ರದ ಮುಂದುವರಿಕೆಯಾಗಿದೆ. ಚಿತ್ರವು ಜೂನ್‌ನಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಕೆಲವು ಕಾರಣಗಳಿಂದ ಅದು ವಿಳಂಬವಾಯಿತು. ಈಗ ಜುಲೈ 8 ರಂದು ಬಿಡುಗಡೆಯಾಗಲಿದೆ ಎಂದು ಹೇಳಿದರು.
ಚಿತ್ರ ಬಿಡುಗಡೆ ವಿಳಂಬದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಿರ್ದೇಶಕ ಫಾರೂಕ್, ನಮ್ಮ ಕೆಲವು ಹಾಡುಗಳು ಸಿದ್ಧವಾಗಿಲ್ಲ. ಹಾಗಾಗಿ ನಾವು ಚಲನಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದೇವೆ ಎಂದು ಹೇಳಿದರು. ಮೊದಲ ಭಾಗ ನವವಿವಾಹಿತ ದಂಪತಿಗಳ ನಿಜ ಜೀವನದ ಕಥೆಯ ಸುತ್ತ ಸುತ್ತುತ್ತದೆ. ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಅಧ್ಯಾಯ 1 ಬಿಡುಗಡೆಯಾದರೂ, ಖುದಾ ಹಾಫಿಜ್: ಅಧ್ಯಾಯ 2 ಅಗ್ನಿ ಪರೀಕ್ಷೆ ಚಿತ್ರವನ್ನು ದೊಡ್ಡ ಪರದೆಯ ಮೆಲೆ ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ.
ಇದನ್ನೂ ಓದಿ: ಆಲಿಯಾಗಿಂತ ಉತ್ತಮ ಸಂಗಾತಿ ಪಡೆಯಲು ಸಾಧ್ಯವಿಲ್ಲ: ರಣಬೀರ್ ಕಪೂರ್