ETV Bharat / entertainment

ಯಶೋದಾ ಚಿತ್ರದ ಯಶಸ್ಸು.. ಸಂತಸ ವ್ಯಕ್ತಪಡಿಸಿದ ಸಮಂತಾ - ಯಶೋದಾ

'ಯಶೋದಾ' ನವೆಂಬರ್ 11 ರಂದು ಬಿಡುಗಡೆಯಾಗಿದೆ. ಇದರಲ್ಲಿ, ಸಮಂತಾ ಅವರನ್ನು ಬಾಡಿಗೆ ತಾಯಿಯಾಗಿ ತೋರಿಸಲಾಗಿದೆ. ಬಹುದೊಡ್ಡ ವೈದ್ಯಕೀಯ ಹಗರಣವೊಂದರ ಬಗ್ಗೆ ಚಿತ್ರದ ಮೂಲಕ ಬಯಲು ಮಾಡಲಾಗಿದೆ.

ಯಶೋದಾ ಚಿತ್ರದ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿದ ಸಮಂತಾ
samantha-ruth-prabhu-is-proud-of-the-success-of-film-yashoda
author img

By

Published : Nov 20, 2022, 6:34 PM IST

Updated : Nov 20, 2022, 7:17 PM IST

ಮುಂಬೈ: ನಟಿ ಸಮಂತಾ ರುತ್ ಪ್ರಭು ಅವರು ಇತ್ತೀಚೆಗೆ ಬಿಡುಗಡೆಯಾದ 'ಯಶೋದಾ' ಚಿತ್ರದ ಯಶಸ್ಸಿನಿಂದ ತುಂಬಾ ಖುಷಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ರದ ಯಶಸ್ಸಿಗಾಗಿ ಧನ್ಯವಾದದ ಸಂದೇಶ ಬರೆದು ತಮ್ಮ ಚಿತ್ರಕ್ಕೆ ಸಿಗುತ್ತಿರುವ ಪ್ರೀತಿಯಿಂದ ತಾವು ಆಕಾಶದಲ್ಲಿ ತೇಲುತ್ತಿರುವುದಾಗಿ ಹೇಳಿದ್ದಾರೆ. ಚಿತ್ರವನ್ನು ಬೆಂಬಲಿಸಿದ್ದಕ್ಕಾಗಿ ಅವರು ಟ್ವಿಟರ್​​ನಲ್ಲಿ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ.

'ಆತ್ಮೀಯ ವೀಕ್ಷಕರೇ, ಯಶೋದಾ ಚಿತ್ರಕ್ಕೆ ನೀವು ತೋರಿದ ಮೆಚ್ಚುಗೆ ಮತ್ತು ಪ್ರೀತಿಯು ನಾನು ನಿಮ್ಮಿಂದ ನಿರೀಕ್ಷಿಸಿದ್ದ ಬಹುದೊಡ್ಡ ಕೊಡುಗೆಯಾಗಿದೆ. ನಾನು ಸಂತೋಷ ಮತ್ತು ಕೃತಜ್ಞತೆಯಿಂದ ತುಂಬಿ ಹೋಗಿದ್ದೇನೆ. ಥಿಯೇಟರ್‌ಗಳಲ್ಲಿ ನಿಮ್ಮ ಸಿಳ್ಳೆ ಮತ್ತು ಸಂಭ್ರಮಾಚರಣೆ ನೋಡಿದರೆ ಯಶೋದಾ ಚಿತ್ರತಂಡವು ಪಟ್ಟ ಶ್ರಮವು ಸಾರ್ಥಕವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ನಾನು ಸ್ವರ್ಗದಲ್ಲಿದ್ದೇನೆ ಮತ್ತು ಯಶೋದಾ ಚಿತ್ರ ತಯಾರಿಕೆಯಲ್ಲಿ ತೊಡಗಿಸಿಕೊಂಡ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಈ ಯೋಜನೆಯಲ್ಲಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಿರ್ಮಾಪಕ ಕೃಷ್ಣ ಪ್ರಸಾದ್ ಅವರಿಗೆ ನಾನು ವಿಶೇಷವಾಗಿ ಧನ್ಯವಾದ ಹೇಳಲು ಬಯಸುತ್ತೇನೆ' ಎಂದು ಸಮಂತಾ ಬರೆದಿದ್ದಾರೆ.

ಜೊತೆಗೆ ಚಿತ್ರದ ನಿರ್ದೇಶಕರು ಮತ್ತು ಸಹನಟರಿಗೆ ನಟಿ ಕೃತಜ್ಞತೆ ಸಲ್ಲಿಸಿದ್ದಾರೆ. ನಿರ್ದೇಶಕರಾದ ಹರಿ ಮತ್ತು ಹರೀಶ್ ಅವರಿಗೆ ಕೃತಜ್ಞಳಾಗಿದ್ದೇನೆ, ಅವರೊಂದಿಗೆ ಕೆಲಸ ಮಾಡಿದ್ದು ಸಂತೋಷವಾಗಿದೆ. ನನ್ನ ಪ್ರೀತಿಯ ಸಹನಟರಾದ ವರಲಕ್ಷ್ಮಿ ಶರತ್‌ಕುಮಾರ್ ಗಾರು, ಉನ್ನಿ ಮುಕುಂದನ್ ಗಾರು ಮತ್ತು ಉಳಿದ ಅದ್ಭುತ ಪಾತ್ರವರ್ಗದೊಂದಿಗೆ ಕೆಲಸ ಮಾಡಿದ್ದು ಅದ್ಭುತವಾಗಿತ್ತು ಎಂದು ಟಾಲಿವುಡ್​ ನಟಿ ಹೇಳಿಕೊಂಡಿದ್ದಾರೆ.

'ಯಶೋದಾ' ನವೆಂಬರ್ 11 ರಂದು ಬಿಡುಗಡೆಯಾಗಿದೆ. ಇದರಲ್ಲಿ, ಸಮಂತಾ ಅವರನ್ನು ಬಾಡಿಗೆ ತಾಯಿಯಾಗಿ ತೋರಿಸಲಾಗಿದೆ. ಬಹುದೊಡ್ಡ ವೈದ್ಯಕೀಯ ಹಗರಣವೊಂದರ ಬಗ್ಗೆ ಚಿತ್ರದ ಮೂಲಕ ಬಯಲು ಮಾಡಲಾಗಿದೆ.

ಇದನ್ನೂ ಓದಿ: ವಿಚ್ಛೇದನದ ಬಳಿಕ ಕ್ರೇಜ್ ಹೆಚ್ಚಿಸಿಕೊಂಡ ಟಾಲಿವುಡ್ ಕ್ವೀನ್ ಸಮಂತಾ: ಸೌತ್​ ಸುಂದರಿಯ ಅಪ್​ಡೇಟ್​ ತಿಳಿಯದೆ ಫ್ಯಾನ್ಸ್​ಗೆ ಬೇಸರ

Last Updated : Nov 20, 2022, 7:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.