ETV Bharat / entertainment

ಸೌರವ್​ ಗಂಗೂಲಿ ಜೀವನಾಧಾರಿತ ಸಿನಿಮಾದಲ್ಲಿ ನಟಿಸುತ್ತಿಲ್ಲ: ರಣಬೀರ್ ಸ್ಪಷ್ಟನೆ - ರಣಬೀರ್ ಸ್ಪಷ್ಟನೆ

ಸೌರವ್ ಗಂಗೂಲಿ ಜೀವನಾಧಾರಿತ ಚಿತ್ರದಲ್ಲಿ ನಟಿಸುತ್ತಿಲ್ಲ. ಬದಲಿಗೆ ಕಿಶೋರ್ ಕುಮಾರ್ ಅವರ ಜೀವನದ ಮೇಲೆ ಸಿನಿಮಾ ಮಾಡುತ್ತಿದ್ದೇನೆ ಎಂದು ರಣಬೀರ್​ ಕಪೂರ್​ ಹೇಳಿದ್ದಾರೆ.

Ranbir Kapoor
ನಟ ರಣಬೀರ್ ಕಪೂರ್
author img

By

Published : Feb 27, 2023, 7:34 AM IST

ನವದೆಹಲಿ: ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಜೀವನಾಧಾರಿತ ಚಿತ್ರದಲ್ಲಿ ಬಾಲಿವುಡ್​​ ನಟ ರಣಬೀರ್ ಕಪೂರ್ ನಟಿಸುತ್ತಾರೆ ವದಂತಿಗೆ ಸ್ವತಃ ರಣಬೀರ್ ತೆರೆ ಎಳೆದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸೌರವ್​ ಗಂಗೂಲಿ ಜತೆ ರಣಬೀರ್ ಕಪೂರ್ ಕ್ರಿಕೆಟ್​ ಆಡಿದ ಫೋಟೋಗಳು ವೈರಲ್​ ಆಗಿವೆ. ಹಾಗಾಗಿ ಸೌರವ್​ ಗಂಗೂಲಿ ಬಯೋಪಿಕ್​ನಲ್ಲಿ ರಣಬೀರ್​ ಕಪೂರ್​ ನಟಿಸಬಹುದೇ ಎಂಬ ಅನುಮಾನ ಮೂಡಿತ್ತು. ಆ ಬಗ್ಗೆ ಅವರು ನೇರವಾಗಿ ಉತ್ತರ ನೀಡಿದ್ದಾರೆ. ಆ ರೀತಿಯ ಯಾವುದೇ ಆಫರ್​ ಬಂದಿಲ್ಲ ಎಂದು ರಣಬೀರ್​ ಕಪೂರ್ ಸ್ಪಷ್ಟಪಡಿಸಿದ್ಧಾರೆ.

Sourav Ganguly, Ranbir Kapoor
ಸೌರವ್ ಗಂಗೂಲಿ, ರಣಬೀರ್ ಕಪೂರ್

ರಣಬೀರ್​ ಕಪೂರ್ ಅಭಿನಯದ 'ತು ಜೂಟಿ ಮೈ ಮಕ್ಕಾರ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಪ್ರಮೋಷನ್​​ಗಾಗಿ ಅವರು ಕೋಲ್ಕತ್ತಾಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರು ಸೌರವ್​ ಗಂಗೂಲಿ ಜತೆ ಸಮಯ ಕಳೆದಿದ್ದಾರೆ. ನಗರದ ಈಡನ್ ಗಾರ್ಡನ್ಸ್‌ನಲ್ಲಿ ಅವರಿಬ್ಬರು ಜೊತೆಯಾಗಿ ಕ್ರಿಕೆಟ್​ ಆಡಿದ್ದಾರೆ. ಅವರ ಫೋಟೋ ಮತ್ತು ವಿಡಿಯೋ ವೈರಲ್​ ಆಗಿವೆ. ಆದರೆ, ಸೌರವ್​ ಗಂಗೂಲಿ ಜೀವನಾಧಾರಿತ ಸಿನಿಮಾದಲ್ಲಿ ತಾವು ನಟಿಸುತ್ತಿಲ್ಲ ಎಂಬುದನ್ನು ರಣಬೀರ್​ ಕಪೂರ್ ಹೇಳಿದ್ದಾರೆ.

"ನನ್ನ ಪ್ರಕಾರ ದಾದಾ (ಸೌರವ್​ ಗಂಗೂಲಿ) ಅವರು ಭಾರತದಲ್ಲಿ ಮಾತ್ರವಲ್ಲ, ಇಡೀ ಪ್ರಪಂಚದಲ್ಲಿ ಜೀವಂತ ದಂತಕಥೆ. ಅವರ ಬಯೋಪಿಕ್​ ತುಂಬ ವಿಶೇಷವಾಗಿ ಇರಲಿದೆ. ದುರಾದೃಷ್ಟ ಎಂದರೆ ನನಗೆ ಯಾವುದೇ ಆಫರ್​ ಬಂದಿಲ್ಲ. ನಿರ್ದೇಶಕರು ಇನ್ನೂ ಸ್ಕ್ರಿಪ್ಟ್​ ಬರೆಯುತ್ತಿ​ದ್ದಾರೆ ಎನಿಸುತ್ತದೆ" ಎಂದು ರಣಬೀರ್​ ಕಪೂರ್​ ಹೇಳಿದ್ದಾರೆ.

ಲೆಜೆಂಡರಿ ಗಾಯಕ ಕಿಶೋರ್​ ಕುಮಾರ್​ ಅವರ ಜೀವನಾಧಾರಿತ ಸಿನಿಮಾದಲ್ಲಿ ರಣಬೀರ್​ ಕಪೂರ್​ ನಟಿಸುತ್ತಾರೆ ಎಂಬ ಮಾತು ಬಹಳ ದಿನಗಳಿಂದ ಕೇಳಿ ಬರುತ್ತಿದೆ. ಆ ಬಗ್ಗೆಯೂ ರಣಬೀರ್​ ಮೌನ ಮುರಿದಿದ್ದಾರೆ. "ನಾನು ಕಳೆದ 11 ವರ್ಷಗಳಿಂದ ಕಿಶೋರ್​ ಕುಮಾರ್​ ಅವರ ಬಯೋಪಿಕ್​ ಮೇಲೆ ಕೆಲಸ ಮಾಡುತ್ತಿದ್ದೇನೆ. ಅನುರಾಗ್​ ಬಸು ಜತೆ ಸೇರಿಕೊಂಡು ನಾವು ಸ್ಕ್ರಿಪ್ಟ್​ ಬರೆಯುತ್ತಿದ್ದೇವೆ. ನಾನು ಮಾಡುವ ಮುಂದಿನ ಬಯೋಪಿಕ್​ ಅದೇ ಆಗಿರಲಿದೆ ಎಂಬ ಭರವಸೆ ಇದೆ. ಆದರೆ, ದಾದಾ ಬಗ್ಗೆ ಬಯೋಪಿಕ್​ ಆಗಲಿದೆ ಎಂಬುದು ನನಗೆ ಈವರೆಗೆ ತಿಳಿದಿರಲಿಲ್ಲ" ಎಂದು ರಣಬೀರ್​ ಕಪೂರ್ ಹೇಳಿದ್ಧಾರೆ​.

'ತು ಜೂಟಿ ಮೈ ಮಕ್ಕಾರ್' ಸಿನಿಮಾ ಮಾ. 8ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ರಣಬೀರ್​ ಕಪೂರ್​ ಅವರಿಗೆ ಜೋಡಿಯಾಗಿ ಶ್ರದ್ಧಾ ಕಪೂರ್​ ನಟಿಸಿದ್ದಾರೆ. ಚಿತ್ರವನ್ನು ಲವ್​ ರಂಜನ್​ ನಿರ್ದೇಶನ ಮಾಡಿದ್ದಾರೆ. ಇದು 2023ರಲ್ಲಿ ತೆರೆ ಕಾಣುತ್ತಿರುವ ರಣಬೀರ್​ ಕಪೂರ್​ ಅವರ ಮೊದಲ ಚಿತ್ರ.

ಅತ್ಯುತ್ತಮ ನಟಿ ಮತ್ತು ನಟ ಪ್ರಶಸ್ತಿ: ಬಾಲಿವುಡ್​ನ ಸ್ಟಾರ್​ ದಂಪತಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್​ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ 2023ರ ಅತ್ಯುತ್ತಮ ನಟಿ ಮತ್ತು ನಟ ಗೌರವಕ್ಕೆ ಪಾತ್ರರಾಗಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಅವರ ಗಂಗೂಬಾಯಿ ಕಥಿವಾಡಿ ಚಿತ್ರದ ಗಂಗೂಬಾಯಿ ಪಾತ್ರಕ್ಕಾಗಿ ಆಲಿಯಾ ಭಟ್ ಮತ್ತು ಬ್ರಹ್ಮಾಸ್ತ್ರದ ನಟನೆಗಾಗಿ ರಣಬೀರ್ ಕಪೂರ್ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ.

ಇದನ್ನೂ ಓದಿ: ದಾದಾಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ ಪ್ರಶಸ್ತಿ: ರಣಬೀರ್, ಆಲಿಯಾ ದಂಪತಿಗೆ ಅತ್ಯುತ್ತಮ ನಟ, ನಟಿ ಪ್ರಶಸ್ತಿ ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.