ಹೈದರಾಬಾದ್: ಈ ವರ್ಷದ ಜೂನಿಯರ್ ಎನ್‌ಟಿಆರ್ ಅವರ ಹುಟ್ಟುಹಬ್ಬವು ಅವರ ಅಭಿಮಾನಿಗಳಿಗೆ ಹೆಚ್ಚು ವಿಶೇಷವಾಗಲಿದೆ. ಏಕೆಂದರೆ ಅದೇ ದಿನ ಅವರ ಹೊಸ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡುವುದಾಗಿ ಸಿನಿಮಾ ನಿರ್ಮಾಪಕರು ತಿಳಿಸಿದ್ದಾರೆ. ಮ್ಯಾನ್ ಆಫ್ ಮಾಸ್ ಜೂನಿಯರ್ ಎನ್‌ಟಿಆರ್ ಅವರ ಮುಂಬರುವ ಸಿಮಾನಿ ಎನ್‌ಟಿಆರ್ 30ರ ಫಸ್ಟ್ ಲುಕ್ ಅನ್ನು ಅವರ ಜನ್ಮದಿನದಂದು, ಮೇ.19 ಅಂದರೆ ಇಂದು ಚಿತ್ರದ ನಿರ್ಮಾಪಕರು ಬಿಡುಗಡೆ ಮಾಡಲಿದ್ದಾರೆ. NTR 30 ರ ನಿರ್ಮಾಪಕರು ಚಿತ್ರದ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡುವುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಪೋಸ್ಟರ್ ಜೊತೆಗೆ, ಇತ್ತೀಚಿನ ಅಪ್‌ಡೇಟ್‌ನಲ್ಲಿ ನಿರ್ಮಾಪಕರು , "ರಾತ್ರಿ ಆ ವ್ಯಕ್ತಿಯಿಂದ ಮಾಸ್ #NTR30 ಫಸ್ಟ್ ಲುಕ್ ವೀಕ್ಷಿಸಲು ಸಿದ್ಧರಾಗಿ... @jrntr#NTR30 ಮೇಲೆ ಕಣ್ಣಿಡಿ ಎಂದು ಬರೆದುಕೊಂಡಿದ್ದಾರೆ. ಇದಕ್ಕೂ ಮೊದಲು ನಿರ್ಮಾಪಕರು ಬಿಡುಗಡೆ ಮಾಡಿದ್ದ ಪೋಸ್ಟರ್ನಲ್ಲಿ ಅವನಿಗಿಂತ ಹೆಚ್ಚು ಭಯ ಹುಟ್ಟಿಸುವ ಏಕೈಕ ವಿಷಯವೆಂದರೆ ಅವನ ಕಥೆ #NTR30FirstLook ಇಂದು ರಾತ್ರಿ 7.02 PMಗೆ @jrntr ಸಂಪರ್ಕದಲ್ಲಿರಿ! ಪೂರ್ಣ ಅವರ ಕಥೆಗಳು ರಕ್ತದಲ್ಲಿ ಬರೆಯಲಾಗಿದೆ #NTR30 ಫಸ್ಟ್ ಲುಕ್ ಮೇ 19 ರಂದು @jrntr ಅವರ ಜನ್ಮದಿನಯಾಗಲಿದೆ ಎಂದು ತಿಳಿಸಿದ್ದರು.
ಇದರ ನಡುವೆ ಅಭಿಮಾನಿಗಳು ಕಾಮೆಂಟ್ ವಿಭಾಗದಲ್ಲಿ ಹೃದಯ ಮತ್ತು ಫೈರ್ ಎಮೋಟಿಕಾನ್‌ಗಳಿಂದ ತುಂಬಿಸಿದ್ದಾರೆ, ಈ ಹಿಂದೆ ಫಸ್ಟ್ ಲುಕ್ ಪೋಸ್ಟರ್, ಟೀಸರ್ ಬಿಡುಗಡೆ ಮಾಡುವಂತೆ ಹಲವರು ಅಭಿಮಾನಿಗಳು ಒತ್ತಾಯಿಸಿದ್ದರು. ಈ ರೀತಿ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬ ಹೀಗೆ ಕಾಮೆಂಟ್ ಮಾಡಿದ್ದಾರೆ, "ಇದು ಪ್ಯಾನ್ ಇಂಡಿಯಾ ಅಲ್ಲ, ಇದು ಪ್ಯಾನ್ ವರ್ಲ್ಡ್ ಚಲನಚಿತ್ರ ಕೊರ್ಟಾಲ ಶಿವ ಮತ್ತು ಎನ್‌ಟಿಆರ್ ಅಣ್ಣಾ." ಎಂದಿದ್ದರೆ. ಇನ್ನೂ ಅನೇಕರು ಚಿತ್ರದ ಫಸ್ಟ್ ಲುಕ್ ಪೋಸ್ಟರ್ಗಾಗಿ "ಕಾಯುತ್ತಿದ್ದೇವೆ" ಎಂದು ಕಾಮೆಂಟ್ ಮಾಡಿದ್ದಾರೆ.
ಚಿತ್ರದ ಪೋಸ್ಟರ್‌ಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಆರ್‌ಆರ್‌ಆರ್ ಚಿತ್ರದ ಜಾಗತಿಕ ಯಶಸ್ಸಿನ ನಂತರ ಜೂನಿಯರ್ ಎನ್‌ಟಿಆರ್ ಅವರ ಮುಂದಿನ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯ ಈ ಚಿತ್ರದ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಎನ್‌ಟಿಆರ್ 30 ಚಿತ್ರಕ್ಕೆ ಜೂನಿಯರ್ ಎನ್‌ಟಿಆರ್ ಜನತಾ ಗ್ಯಾರೇಜ್ ಸಿನಿಮಾದ ನಿರ್ದೇಶಕ ಕೊರ್ಟಾಲ ಶಿವ ಅವರ ಜೊತೆ ಮತ್ತೆ ಹೊಂದಾಗಿದ್ದಾರೆ. ಇನ್ನು ಎನ್‌ಟಿಆರ್ 30 ಚಿತ್ರ ಏಪ್ರಿಲ್ 5, 2024 ರಂದು ತೆರೆ ಕಾಣಲಿದೆ.
ನಂದಮೂರಿ ಕಲ್ಯಾಣ್ ರಾಮ್ರ ಯುವಸುಧಾ ಆರ್ಟ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ಗಳ ಅಡಿ ಚಿತ್ರ ನಿರ್ಮಾಣವಾಗುತ್ತಿದೆ. ಜಾನ್ವಿ ಕಪೂರ್ ಮತ್ತು ಸೈಫ್ ಅಲಿ ಖಾನ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರದ ನಾಯಕಿಯಾಗಿರುವ ಜಾನ್ವಿ ಕಪೂರ್, "ಜೂನಿಯರ್ ಎನ್‌ಟಿಆರ್ ಜೊತೆ ಕೆಲಸ ಮಾಡುವುದು ತನ್ನ ಬಹುಕಾಲದ ಆಸೆಯಾಗಿದೆ. ನಾನು ಅಕ್ಷರಶಃ ದಿನಗಳನ್ನು ಎಣಿಸುತ್ತಿದ್ದೇನೆ. ಪ್ರತಿದಿನ, ನಾನು ನಿರ್ದೇಶಕರಿಗೆ ಸಂದೇಶ ಕಳುಹಿಸುತ್ತೇನೆ. ಜೂನಿಯರ್ ಎನ್‌ಟಿಆರ್ ಜೊತೆ ಕೆಲಸ ಮಾಡುವ ನನ್ನ ಕನಸು ನನಸಾಗಿದೆ. ನಾನು ಇತ್ತೀಚೆಗೆ RRR ಅನ್ನು ಮರು ವೀಕ್ಷಿಸಿದ್ದೇನೆ" ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಕಾನ್ ಚಿತ್ರೋತ್ಸವ 2023 : ರೆಡ್ ಕಾರ್ಪೆಟ್ ಮೇಲೆ ಮಿಂಚಿದ ಸಾರಾ ಅಲಿ ಖಾನ್..ಫ್ಯಾನ್ಸ್ಗಳಿಂದ ಮೆಚ್ಚುಗೆ