ಮುಂಬೈ (ಮಹಾರಾಷ್ಟ್ರ): ವಿಶ್ವದ ಅತ್ಯಂತ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ ಮಿಸ್ ಯೂನಿವರ್ಸ್ನಲ್ಲಿ ತಾಯಂದಿರು ಮತ್ತು ವಿವಾಹಿತ ಮಹಿಳೆಯರಿಗೆ ಪ್ರವೇಶಿಸಲು ಅವಕಾಶ ನೀಡುವ ಮೂಲಕ ತನ್ನ ಸ್ಪರ್ಧೆಯ ಅರ್ಹತೆಯನ್ನು ವಿಸ್ತರಿಸುತ್ತಿದೆ. ಇದು ಐತಿಹಾಸಿಕ ನಿರ್ಧಾರವಾಗಿದ್ದು, ಹಲವರು ಸ್ವಾಗತಿಸಿದ್ದಾರೆ. ಹಲವು ಕಠಿಣ ಮಾನದಂಡಗಳನ್ನು ಹೊಂದಿದ್ದ ಈ ಸ್ಪರ್ಧೆಯಲ್ಲಿ, ಬರುವ ಅಂದರೆ 2023 ರಿಂದ ಪ್ರಾರಂಭವಾಗುವ ಸ್ಪರ್ಧೆಯ ಸ್ಪರ್ಧಾಳುಗಳಿಗೆ ಈ ಮೇಲಿನ ಅವಕಾಶಗಳ ಜೊತೆಗೆ ಕೆಲವು ಸಡಿಲಿಕೆ, ವಿಶೇಷ ಅನುಮತಿಗಳನ್ನು ಮಾರ್ಪಾಡು ಮಾಡಲಾಗಿದೆ.
![Miss Universe to allow married women from 2023](https://etvbharatimages.akamaized.net/etvbharat/prod-images/_2208newsroom_1661168923_231.jpg)
ಇಲ್ಲಿಯವರೆಗೆ ಕೇವಲ ಅವಿವಾಹಿತ ಯುವತಿಯರಿಗೆ ಮಾತ್ರ ಸೀಮಿತವಾಗಿದ್ದ ಮಿಸ್ ಯೂನಿವರ್ಸ್ನಲ್ಲಿ ಇನ್ನು ಮುಂದೆ ವಿವಾಹಿತ ಮಹಿಳೆಯರು ಮತ್ತು ತಾಯಂದಿರು ಕೂಡ ಸ್ಪರ್ಧಿಸಬಹುದು ಎಂದು ಹೇಳಿದೆ. ಪ್ರತಿ ವರ್ಷ 80 ದೇಶಗಳ ರೂಪದರ್ಶಿಯರು ಈ ಸ್ಪರ್ಧೆಯಲ್ಲಿ ಭಾಗವಹಿದರೆ ಅದರಲ್ಲಿ ಕೇವಲ ಒಬ್ಬರು ಮಾತ್ರ ಈ ಕಿರೀಟ ಧರಿಸಲು ಸಾಧ್ಯ. ಆದರೆ, ಹಲವರಿಗೆ ಗೆಲ್ಲುವ ಆಸೆ ಇರಲಿ, ಈ ಸ್ಪರ್ಧೆಯಲ್ಲಿ ಭಾಗವಹಿಸುವುದೇ ಒಂದು ಸವಾಲಾಗಿತ್ತು. ಅದಕ್ಕೆ ಕಾರಣ ಅಲ್ಲಿಯ ಕಠಿಣ ಮಾನದಂಡಗಳು. ಆದರೆ, ಈಗ ಲೆಕ್ಕಾಚಾರ ಬದಲಾಗಿದೆ. ಒಂದು ಕಾಲದಲ್ಲಿ ಅವಿವಾಹಿತರಿಗೆ ಮಾತ್ರ ಸೀಮಿತವಾಗಿದ್ದ ಈ ಸ್ಪರ್ಧೆಗಳಲ್ಲಿ ಈಗ ವಿವಾಹಿತ ಮಹಿಳೆಯರು ಮತ್ತು ಮಕ್ಕಳ ತಾಯಂದಿರು ಭಾಗವಹಿಸಬಹುದು ಎಂದು ಹೇಳಿದೆ. ಈ ಬದಲಾವಣೆಯನ್ನು ಮಾಜಿ ವಿಶ್ವ ಸುಂದರಿಯರು ಸೇರಿದಂತೆ ಹಲವುರು ಸ್ವಾಗತಿಸಿದ್ದಾರೆ.
![Miss Universe to allow married women from 2023](https://etvbharatimages.akamaized.net/etvbharat/prod-images/16164159_123_2208newsroom_1661168923_64.jpg)
ಈ ಹಿಂದಿನ ವಿಶ್ವ ಸುಂದರಿ ಸ್ಪರ್ಧೆಯ ನಿಯಮಗಳ ಪ್ರಕಾರ ಭಾಗವಹಿಸುವ ಸ್ಪರ್ಧಾಳುಗಳು ಅವಿವಾಹಿತರಾಗಿಯೇ ಇರಬೇಕಿತ್ತು. ಮಕ್ಕಳಾದ ತಾಯಂದಿರುಗಳಿಗೆ ಸ್ಪರ್ಧಿಸಲು ಅವಕಾಶ ಸಹ ಇರಲಿಲ್ಲ. ಜೊತೆಗೆ ವಿಜೇತರು ಮಿಸ್ ಯೂನಿವರ್ಸ್ ಆಗಿ ಆಳ್ವಿಕೆ ಮಾಡುವಾಗ ಗರ್ಭಿಣಿಯಾಗಿರಬಾರದು ಎಂಬ ನಿಯಮವನ್ನೂ ಸಹ ಹೇರಲಾಗಿತ್ತು. ಆದರೆ, ಇದೀಗ ಈ ನಿಯಮ ಬದಲಾಗಿದೆ.
![Miss Universe to allow married women from 2023](https://etvbharatimages.akamaized.net/etvbharat/prod-images/16164159_12_2208newsroom_1661168923_466.jpg)
ಮೆಕ್ಸಿಕೋದ ಮಿಸ್ ಯೂನಿವರ್ಸ್ 2020 ವಿಜೇತೆ ಆಂಡ್ರಿಯಾ ಮೆಜಾ ರೂಲ್ ಈ ಮಹತ್ತರವಾದ ಬದಲಾವಣೆಯನ್ನು ಸ್ವಾಗತಿಸಿದ್ದಾರೆ. ಪುರುಷರು ಸಾಧಿಸಿದ್ದನ್ನು ಮಹಿಳೆಯರು ಈಗ ಸಾಧಿಸುತ್ತಿದ್ದಾರೆ. ಸೌಂದರ್ಯ ಸ್ಪರ್ಧೆಯಲ್ಲಿ ಯುವತಿಯರು ಮಾತ್ರವಲ್ಲದೇ ತಾಯಂದಿರೂ ಸೇರುವ ಸಮಯ ಬಂದಿದೆ ಎಂದು ಅವರು ಖುಷಿ ಹಂಚಿಕೊಂಡಿದ್ದಾರೆ.
![Miss Universe to allow married women from 2023](https://etvbharatimages.akamaized.net/etvbharat/prod-images/16164159_1-6_2208newsroom_1661168923_723.jpg)
ವಿಶ್ವ ಸುಂದರಿ ಸ್ಪರ್ಧೆಯ ಕಾರ್ಯಕ್ರಮವನ್ನು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ 160ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಸಾರ ಮಾಡಿಕೊಂಡು ಬರಲಾಗುತ್ತಿರುವುದು ದೊಡ್ಡ ಸಾಧನೆ. ಇನ್ನು ಭಾರತದ ಹರ್ನಾಜ್ ಸಂಧು 2021ರ ವಿಶ್ವ ಸುಂದರಿ ಕಿರೀಟವನ್ನು ಅಲಂಕರಿಸುವ ಮೂಲಕ ದೇಶಕ್ಕೆ ಕೀರ್ತಿ ತಂದರು.
![Miss Universe to allow married women from 2023](https://etvbharatimages.akamaized.net/etvbharat/prod-images/16164159_1-5_2208newsroom_1661168923_626.jpg)
ಇಸ್ರೇಲ್‌ನ ಐಲಾಟ್‌ನಲ್ಲಿ ನಡೆದ 70ನೇ ವಿಶ್ವ ಸುಂದರಿ 2021 ಸ್ಪರ್ಧೆಯಲ್ಲಿ ಪಂಜಾಬ್‌ನ ಈ ಸುಂದರಿ ಭಾರತವನ್ನು ಪ್ರತಿನಿಧಿಸಿದ್ದರು. ಹರ್ನಾಜ್ ಸಂಧು ಅವರಿಗೂ ಮುನ್ನ ಇಬ್ಬರು ಭಾರತೀಯರು ಮಾತ್ರ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದಿದ್ದರು. ಬಾಲಿವುಡ್ ನಟಿ ಸುಶ್ಮಿತಾ ಸೇನ್ 1994 ರಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದರೆ, ಲಾರಾ ದತ್ತಾ 2000ನೇ ಇಸವಿಯಲ್ಲಿ ವಿಶ್ವ ಸುಂದರಿ ಪಟ್ಟ ಅಲಂಕರಿಸಿದ್ದರು.
![Miss Universe to allow married women from 2023](https://etvbharatimages.akamaized.net/etvbharat/prod-images/16164159_1-4_2208newsroom_1661168923_441.jpg)
ಇದನ್ನೂ ಓದಿ: ರಜನಿಕಾಂತ್- ಶಿವರಾಜಕುಮಾರ್ ಅಭಿನಯದ ಜೈಲರ್ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ