ETV Bharat / entertainment

ಆಭರಣ ಜಾಹೀರಾತಿನಿಂದ ಸಿಕ್ಕ ಮೊದಲ ಸಂಭಾವನೆಯನ್ನು ಚಾರಿಟಿಗೆ ನೀಡಿದ ನಟ ಮಹೇಶ್ ಬಾಬು ಪುತ್ರಿ ಸಿತಾರಾ - ಸಿತಾರಾ ಘಟ್ಟಮನೇನಿ ಸಿನಿಮಾ

ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಮತ್ತು ನಮ್ರತಾ ದಂಪತಿಯ ಪುತ್ರಿ ಸಿತಾರಾ ಘಟ್ಟಮನೇನಿ, ಸಿನಿಮಾ ಮಾಡುವ ಮುಂಚೆಯೇ ಸ್ಟಾರ್ ಆಗಿಬಿಟ್ಟಿದ್ದಾರೆ. ಇತ್ತೀಚೆಗಷ್ಟೇ ಇವರ ಆಕರ್ಷಕ ಫೋಟೋಗಳು ನ್ಯೂಯಾರ್ಕ್ ಟೈಮ್ಸ್ ಸ್ಕೇರ್​ನಲ್ಲಿ ಪ್ರದರ್ಶಿತಗೊಂಡಿದ್ದವು.

Sitara
ಸಿತಾರಾ ಘಟ್ಟಮನೇನಿ
author img

By

Published : Jul 16, 2023, 10:18 AM IST

Updated : Jul 16, 2023, 10:52 AM IST

ಚೆನ್ನೈ: ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಮತ್ತು ನಟಿ ನಮ್ರತಾರ ಪುತ್ರಿ ಸಿತಾರಾ ಘಟ್ಟಮನೇನಿ ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಆಗಿರುವ ಸಿತಾರಾ, ಅಪ್ಪ-ಅಮ್ಮನಂತೆ ಬಣ್ಣದ ಲೋಕದಲ್ಲಿ ಮಿಂಚುವ ಕನಸು ಹೊಂದಿದ್ದಾರೆ. ಅಪ್ಪ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ರೆ, ಮಗಳು ಚಿಕ್ಕ ವಯಸ್ಸಿನಲ್ಲೇ ಜಾಹೀರಾತಿನ ಮೂಲಕ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮ ಮೊದಲ ಸಂಭಾವನೆಯನ್ನು ಒಂದೊಳ್ಳೆ ಕಾರ್ಯಕ್ಕೂ ಬಳಸಿಕೊಂಡಿದ್ದಾರೆ.

ಸಿತಾರಾ ಇದೀಗ ಪ್ರೀಮಿಯಂ ಆಭರಣ ಬ್ರ್ಯಾಂಡ್​ನ ರಾಯಭಾರಿಯಾಗಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅತಿ ದೊಡ್ಡ ಜಾಹೀರಾತಿನಲ್ಲಿ ಕಂಗೊಳಿಸುತ್ತಿದ್ದಾರೆ. ಜುಲೈ 4ರಂದು ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಈ ಜಾಹೀರಾತು ಪ್ರದರ್ಶನಗೊಂಡಿದೆ. ಜಾಹೀರಾತಿಗಾಗಿ ಸಿತಾರಾ ಅವರಿಗೆ 1 ಕೋಟಿ ರೂಪಾಯಿ ಸಂಭಾವನೆ ದೊರೆತಿದೆ ಎಂಬ ಸುದ್ದಿ ಕೇಳಿಬಂದಿತ್ತು. ಇದೀಗ ಹೊಸ ಸುದ್ದಿ ಏನಪ್ಪಾ ಅಂದ್ರೆ, ತಮ್ಮ ಮೊದಲ ಸಂಭಾವನೆಯನ್ನು ಸಿತಾರಾ ಚಾರಿಟಿಗೆ ನೀಡಿದ್ದಾರಂತೆ.

Sitara
ತಾಯಿ ನಮ್ರತಾ ಜೊತೆ ಸಿತಾರಾ ಘಟ್ಟಮನೇನಿ

ಇದನ್ನೂ ಓದಿ : ಸಿನಿಮಾಕ್ಕೆ ಬರ್ತಾರಂತೆ ನಟ ಮಹೇಶ್​ ಬಾಬು ಪುತ್ರಿ ಸಿತಾರಾ.. ಅಪ್ಪನೇ ಚಂದ ಮಗಳು ಇನ್ನೂ ಸುಂದರ

ನ್ಯೂಯಾರ್ಕ್​ನ ಟೈಮ್​ ಸ್ಕ್ವೇರ್​ನಲ್ಲಿ ಮಿಂಚಿದ ಮಹೇಶ್​ ಬಾಬು ಪುತ್ರಿ.. ಸಿತಾರಾಗೆ ಪ್ರಶಂಸೆಯ ಸುರಿಮಳೆ

ತಾಯಿ ನಮ್ರತಾ ಘಟ್ಟಮನೇನಿ ಅವರೊಂದಿಗೆ ಹೈದರಾಬಾದ್‌ನ ಪಂಚತಾರಾ ಹೋಟೆಲ್​ಗೆ ಆಗಮಿಸಿದ್ದ ಸಿತಾರಾ, ತಮ್ಮ ಹೆಸರಿನ ಲುಕ್ ಪುಸ್ತಕವನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, "ನನಗೆ ಚಲನಚಿತ್ರಗಳನ್ನು ನೋಡುವುದು ಇಷ್ಟ. ಸಿನಿಮಾಗಳಲ್ಲಿ ನಟಿಸಲು ತುಂಬಾ ಆಸಕ್ತಿ ಇದೆ. ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಸಿಗ್ನೇಚರ್ ಜ್ಯುವೆಲ್ಲರಿ ಕಲೆಕ್ಷನ್ ಲಾಂಚ್ ಆಗುತ್ತಿರುವುದನ್ನು ನೋಡಿ ತನ್ನ ತಂದೆ ತುಂಬಾ ಸಂತೋಷಪಟ್ಟರು. ಜಾಹೀರಾತು ವಿಡಿಯೋ ನೋಡಿ ಭಾವುಕರಾದರು" ಎಂದು ಹೇಳಿದರು.

ಇದನ್ನೂ ಓದಿ : ರಾಜಮೌಳಿ ಸಿನಿಮಾದಲ್ಲಿ ಒಡಹುಟ್ಟಿದವರಾಗಿ ಕಾಣಿಸಿಕೊಳ್ಳಲಿದ್ದಾರೆ ಜೂ. ಎನ್​​ಟಿಆರ್​ - ಮಹೇಶ್​ ಬಾಬು ಮಕ್ಕಳು

Last Updated : Jul 16, 2023, 10:52 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.