ಕನ್ನಡದ ಜನಪ್ರಿಯ ಕಿರುತೆರೆ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ 10ಕ್ಕೆ ಈ ವಾರ ಸದಸ್ಯರ ಕಟುಂಬಸ್ಥರು ಆಗಮಿಸಿದ್ದರು. ಬಿಗ್ ಬಾಸ್ ವಾರವಿಡೀ ಭಾವುಕ ಕ್ಷಣಗಳಿಂದ ತುಂಬಿತ್ತು. ಇದೀಗ ಕನ್ನಡ ಚಿತ್ರರಂಗದ ಪ್ರಸಿದ್ಧಿ ಹೆಚ್ಚಿಸಿರುವ 'ಕಾಂತಾರ' ಸಿನಿಮಾ ಖ್ಯಾತಿಯ ಸಪ್ತಮಿ ಗೌಡ ಆಗಮಿಸಿದ್ದಾರೆ. 'ಹೆಣ್ಣಿನ ಆರೋಗ್ಯ ರಕ್ಷಣೆ ನಮ್ಮೆಲ್ಲರ ಹೊಣೆ' ಎಂಬ ಶೀರ್ಷಿಕೆಯಡಿ ಪ್ರೋಮೋ ಅನಾವರಣಗೊಂಡಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.
-
ಹೆಣ್ಣಿನ ಆರೋಗ್ಯ ರಕ್ಷಣೆ ನಮ್ಮೆಲ್ಲರ ಹೊಣೆ
— Colors Kannada (@ColorsKannada) December 30, 2023 " class="align-text-top noRightClick twitterSection" data="
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/yuOvGTrk2T
">ಹೆಣ್ಣಿನ ಆರೋಗ್ಯ ರಕ್ಷಣೆ ನಮ್ಮೆಲ್ಲರ ಹೊಣೆ
— Colors Kannada (@ColorsKannada) December 30, 2023
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/yuOvGTrk2Tಹೆಣ್ಣಿನ ಆರೋಗ್ಯ ರಕ್ಷಣೆ ನಮ್ಮೆಲ್ಲರ ಹೊಣೆ
— Colors Kannada (@ColorsKannada) December 30, 2023
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/yuOvGTrk2T
ಬಿಗ್ ಬಾಸ್ ಮನೆಯ ಮುಖ್ಯದ್ವಾರದ ಮೂಲಕ ಬಂದ 'ಕಾಂತಾರ' ಚೆಲುವೆ ಸಪ್ತಮಿ ಗೌಡ ಅವರನ್ನು ಸ್ಪರ್ಧಿಗಳು ಸ್ವಾಗತಿಸಿದ್ದಾರೆ. ಮೆಚ್ಚಿನ ನಟಿಯನ್ನು ಕಂಡ ಮನೆ ಮಂದಿ ಖುಷಿ ಆಗಿದ್ದಾರೆ. ಕೆಲ ಹೊತ್ತು ಸ್ಪರ್ಧಿಗಳೊಡನೆ ಉತ್ತಮ ಕ್ಷಣಗಳನ್ನು ಕಳೆದಿದ್ದಾರೆ. ಬಳಿಕ ತಾವು ಬಿಗ್ ಬಾಸ್ ಮನೆಗೆ ಬಂದಿರುವುದರ ಹಿಂದಿನ ಕಾರಣ ಬಹಿರಂಗಪಡಿಸಿದ್ದಾರೆ.
ನಾನು ಬಿಗ್ ಬಾಸ್ ಮನೆಗೆ ಬಂದಿರುವುದರ ಕಾರಣವೇನೆಂದರೆ, ನಮ್ಮ ಕರ್ನಾಟಕ ಸರ್ಕಾರದ ಕಡೆಯಿಂದ 'ಶುಚಿ: ನನ್ನ ಮೈತ್ರಿ ಮುಟ್ಟಿನ ಕಪ್' ಎಂಬ ಯೋಜನೆ ಆರಂಭಿಸಿದ್ದಾರೆ. ಶೇ. 80ರಷ್ಟು ಹೆಣ್ಮಕ್ಕಳು ಆ ಕಪ್ ಅನ್ನು ಬಳಸುತ್ತಿದ್ದಾರೆ. ಪ್ಯಾಡ್ಸ್ ಇಂದ ಋತುಸ್ರಾವದ ಕಪ್ ಕಡೆಗೆ ಮಹಿಳೆಯರಿಗೆ ಅರಿವು ಮೂಡಿಸಿ, ಅದರ ಬಳಕೆ ಹೆಚ್ಚು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ನಾನದಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಇಂದು ಈ ಮನೆಗೆ ಬಂದಿದ್ದೇನೆ. ಇಲ್ಲಿ ಕೂಡ ಹೆಣ್ಮಕ್ಕಳಿದ್ದೀರ ಎಂದು ಹೇಳಿ, ಮುಟ್ಟಾದ ಸಂದರ್ಭ ಬಳಸುವ ಕಪ್ ಅನ್ನು ಅವರಿಗೆ ನೀಡಿದರು. ಇದು ಸರ್ಕಾರದ ವತಿಯಿಂದ ಎಂದು ತಿಳಿಸಿದರು. ನಮ್ಮ ಕಡೆಯಿಂದ ಈ ಕಪ್ ಬಳಸಲು ಪ್ರಯತ್ನ ಮಾಡೋಣ ಎಂದು ತಿಳಿಸಿ, 'ಋತುಸ್ರಾವ ಕಪ್'ನ ಮಹತ್ವವನ್ನು ಬಿಗ್ ಬಾಸ್ ಮನೆಯಲ್ಲಿ ಸಾರಿದ್ದಾರೆ.
-
ಕಾಫಿ ಮೂಲಕ ಕಿಚ್ಚ ಯಾವುದರ ಮುನ್ಸೂಚನೆ ಕೊಡ್ತಿದ್ದಾರೆ?
— Colors Kannada (@ColorsKannada) December 30, 2023 " class="align-text-top noRightClick twitterSection" data="
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/9OfMawL2j7
">ಕಾಫಿ ಮೂಲಕ ಕಿಚ್ಚ ಯಾವುದರ ಮುನ್ಸೂಚನೆ ಕೊಡ್ತಿದ್ದಾರೆ?
— Colors Kannada (@ColorsKannada) December 30, 2023
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/9OfMawL2j7ಕಾಫಿ ಮೂಲಕ ಕಿಚ್ಚ ಯಾವುದರ ಮುನ್ಸೂಚನೆ ಕೊಡ್ತಿದ್ದಾರೆ?
— Colors Kannada (@ColorsKannada) December 30, 2023
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/9OfMawL2j7
ಇದನ್ನೂ ಓದಿ: ಸಲಾರ್ ಕಲೆಕ್ಷನ್ 550 ಕೋಟಿ ರೂ. ; ಹೆಚ್ಚಿತು ಪ್ರಶಾಂತ್ ನೀಲ್, ಪ್ರಭಾಸ್ ಜನಪ್ರಿಯತೆ
ಮುಟ್ಟಿನ ಕಪ್: ಸದ್ಯ ಬಳಕೆಯಲ್ಲಿರುವ ಸ್ಯಾನಿಟರಿ ನ್ಯಾಪ್ಕಿನ್ಗೆ ಪರ್ಯಾಯವಾಗಿ ಈ ಮೆನ್ಸ್ಟ್ರುವಲ್ ಕಪ್ (ಮುಟ್ಟಿನ ಕಪ್) ತಯಾರು ಮಾಡಲಾಗಿದೆ. ಇದು ಪರಿಸರ ಸ್ನೇಹಿ ಆಗಿದ್ದು, ಹೆಣ್ಣುಮಕ್ಕಳ ಆರೋಗ್ಯ ರಕ್ಷಣೆ ಸಲುವಾಗಿ ಕಂಡು ಹಿಡಿಯಲಾಗಿದೆ. ಸ್ಯಾನಿಟರಿ ಪ್ಯಾಡ್ಸ್ ಯೂಸ್ ಆ್ಯಂಡ್ ಥ್ರೋ ಆಗಿದ್ದು, ಮೆನ್ಸ್ಟ್ರುವಲ್ ಕಪ್ ಅನ್ನು ಸ್ವಚ್ಛಗೊಳಿಸಿ ಸಾಕಷ್ಟು ಬಾರಿ ಬಳಸಬಹುದಾಗಿದೆ. ಇದನ್ನು ಒಮ್ಮೆಗೆ 8 ಗಂಟೆಗಳ ಕಾಲ ಬಳಸಬಹುದು. ಅಲ್ಲದೇ ಸುಮಾರು 10 ವರ್ಷಗಳವರೆಗೆ ಮರುಬಳಸಬಹುದು. ಮೆನ್ಸ್ಟ್ರುವಲ್ ಕಪ್ ಬಗ್ಗೆ ಮಾಹಿತಿ ನೀಡಿ, ಇದರ ಬಳಕೆಯನ್ನು ಪ್ರೋತ್ಸಾಹಿಸಲು ಉದ್ದೇಶಿಸಲಾಗಿದೆ. ಇದರ ಭಾಗವಾಗಿ ಕಾಂತಾರ ನಟಿ ಸಪ್ತಮಿ ಗೌಡ ಬಿಗ್ ಬಾಸ್ ಮನೆಗೆ ಆಗಮಿಸಿದ್ದಾರೆ.
ಇದನ್ನೂ ಓದಿ: 2023ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಸಿನಿಮಾಗಳಿವು