ETV Bharat / entertainment

ಬಿಗ್​ ಬಾಸ್​ ಸೀಸನ್​ 10: ಕುಸ್ತಿ ಅಖಾಡದಲ್ಲಿ ವಿನಯ್ - ತನಿಷಾ ಮಾತಿನ ಚಕಮಕಿ!

author img

By ETV Bharat Karnataka Team

Published : Nov 2, 2023, 3:08 PM IST

Kannada Bigg Boss: ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್​​ ಕನ್ನಡದ ಇಂದಿನ ಪ್ರೋಮೋ ಅನಾವರಣಗೊಂಡಿದೆ.

Kannada bigg boss season 10 promo
ಬಿಗ್​ ಬಾಸ್​ ಸೀಸನ್​ 10: ಕುಸ್ತಿ ಅಖಾಡದಲ್ಲಿ ವಿನಯ್- ತನಿಷಾ ಮಾತಿನ ಚಕಮಕಿ!

ಬಿಗ್​ ಬಾಸ್​ ಸೀಸನ್​ 10ರ ನಾಲ್ಕನೇ ವಾರ ಪ್ರೇಕ್ಷಕರಿಗೆ ಮತ್ತಷ್ಟು ಮನರಂಜನೆ ಸಿಗುತ್ತಿದೆ. ನಿನ್ನೆ ಮೊನ್ನೆಯೆಲ್ಲಾ ಹಳ್ಳಿಮನೆಯಾಗಿ ಬದಲಾಗಿದ್ದ ದೊಡ್ಮನೆಯಲ್ಲೀಗ ಕೆಂಪು ಮಣ್ಣಿನ ಕುಸ್ತಿ ಅಖಾಡ ರಾರಾಜಿಸುತ್ತಿದೆ. ಕುಸ್ತಿ ಅಖಾಡದ ಒಳಗೆ ದೈಹಿಕ ಶಕ್ತಿ ಪ್ರದರ್ಶನ ನಡೆಯುತ್ತಿದ್ದರೆ, ಅಖಾಡದ ಹೊರಗೆ ಮಾತಿನ ಶಕ್ತಿ ಪ್ರದರ್ಶನವೂ ಜೋರಾಗಿಯೇ ನಡೆಯುತ್ತಿದೆ. ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಬಿಗ್​ ಬಾಸ್​ ಮನೆಯೊಳಗೆ ನಡೆಯುತ್ತಿರುವ ಕುಸ್ತಿ ಪಂದ್ಯದ ಝಲಕ್​ ನೋಡಬಹುದು.

ಕಳೆದ ಎರಡು ದಿನದಿಂದ ಹಳ್ಳಿ ವಾತಾವರಣದಲ್ಲಿ ಬಿಗ್​ ಬಾಸ್​ ಸ್ಪರ್ಧಿಗಳು ಎರಡು ಕುಟುಂಬಗಳಾಗಿ ಬದುಕುತ್ತಿದ್ದಾರೆ. ಅವರ ನಡುವೆ ಜೋರು ಸ್ಪರ್ಧೆಯೂ ನಡೆಯುತ್ತಿದ್ದು, ಮಾತುಗಳ ಜಟಾಪಟಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗುತ್ತಿದೆ. ಈಗ ಬಿಗ್​ ಬಾಸ್​ ಸ್ಪರ್ಧಿಗಳಿಗೆ ಕೈ ಕೈ ಮಿಲಾಯಿಸುವ ನೇರ ಅವಕಾಶವನ್ನು ನೀಡಿದ್ದಾರೆ. ಅದು ಕೆಮ್ಮಣ್ಣಿನ ಅಖಾಡದಲ್ಲಿ!

‘ಆನೆ’ಯಾಗಿ ಬಿಂಬಿಸಿಕೊಂಡಿದ್ದ ವಿನಯ್‌ ಮತ್ತು ಮೈಕಲ್‌ ಅಖಾಡದಲ್ಲಿ ಮುಖಾಮುಖಿಯಾಗಿದರೆ, ಸ್ನೇಹಿತ್‌ ಮತ್ತು ಕಾರ್ತಿಕ್‌ ಜಿದ್ದಾಜಿದ್ದಿಗೆ ಮುಂದಾಗಿದ್ದಾರೆ. ಅತ್ತ, ನೀತು ಮತ್ತು ಸಂಗೀತಾ ಕೂಡ ಪಂದ್ಯಕ್ಕೆ ಇಳಿದಿದ್ದಾರೆ. ವಿನಯ್ ಮತ್ತು ಮೈಕಲ್ ಇಬ್ಬರೂ ಒಮ್ಮೆಲೇ ಅಖಾಡದಿಂದ ಹೊರಬಿದ್ದ ದೃಶ್ಯ, ಸ್ನೇಹಿತ್ ಮತ್ತು ಕಾರ್ತಿಕ್ ಪರಸ್ಪರ ಕೈ ಮಿಲಾಯಿಸಿರುವ ದೃಶ್ಯ ಮತ್ತು ಸಂಗೀತಾ ಮತ್ತು ನೀತು ತಳ್ಳಾಡಿಕೊಳ್ಳುತ್ತಿರುವ ದೃಶ್ಯ ಪ್ರೋಮೊದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಬಿಗ್ ಬಾಸ್‌ ಕನ್ನಡ: ಟಿಶ್ಯೂ ಮೇಲೆ ಇಶಾನಿ ರ‍್ಯಾಪ್ ಲಿರಿಕ್ಸ್!

ಪಂದ್ಯಕ್ಕೂ ಮುನ್ನ ವರ್ತೂರು ಸಂತೋಷ್‌ ಅವರು ತಮಾಷೆಯಾಗಿ ತುಕಾಲಿ ಸಂತೋಷ್‌ಗೆ ‘ಕುಸ್ತಿಯ ರುಚಿ’ ತೋರಿಸಿದ್ದಾರೆ. ಅಖಾಡದಲ್ಲಿ ಕುಸ್ತಿ ನಡೆಯುತ್ತಿದ್ದರೆ ಹೊರಗಡೆ ತನಿಷಾ ಮತ್ತು ವಿನಯ್ ನಡುವೆ ಮಾತಿನ ಚಕಮಕಿಯೂ ಜೋರಾಗಿಯೇ ನಡೆದಿದೆ.

ವಿನಯ್, ತನಿಷಾಗೆ ‘ಡ್ರೆಸ್‌ ಚೇಂಜ್ ಮಾಡ್ಕೊಂಡು ಬಂದ್ಬಿಡಿ ನೀವು’ ಎಂದು ಸವಾಲು ಹಾಕಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ತನಿಷಾ, ‘ಯಾರು ಆಡ್ತಿದ್ದಾರೆ ಅವ್ರು ಮಾತಾಡ್ಲಿ. ಮಿಕ್ಕವ್ರೆಲ್ಲ ಮಾತಾಡಿದ್ರೆ ಸರಿ ಇರಲ್ಲ’ ಎಂದು ಅವಾಜ್ ಹಾಕಿದ್ದಾರೆ. ವಿನಯ್, ‘ಏನೇ’ ಎಂದು ಏಕವಚನಕ್ಕಿಳಿದರೆ, ತನಿಷಾ ಕೂಡ, ‘ನಿಂಗೆ ಯಾವನೋ ಅಧಿಕಾರ ಕೊಟ್ಟಿಲ್ಲ. ಮೈಂಡ್ ಯುವರ್ ವರ್ಡ್ಸ್‌’ ಎಂದು ಕೈ ತೋರಿಸಿ ಉತ್ತರಿಸಿದ್ದಾರೆ.

ಅಖಾಡದ ಒಳಗೆ-ಹೊರಗಿನ ಜಟಾಪಟಿಯಲ್ಲಿ ಗೆಲ್ಲುವವರು ಯಾರು? ಸೋತು ಮಣ್ಣು ಮುಕ್ಕುವವರು ಯಾರು? ತಿಳಿಯಲು ಜಿಯೋ ಸಿನಿಮಾದಲ್ಲಿ ಉಚಿತ ನೇರ ಪ್ರಸಾರವಾಗುತ್ತಿರುವ ಬಿಗ್‌ ಬಾಸ್‌ ಕನ್ನಡ ವೀಕ್ಷಿಸಿ. ಬಿಗ್‌ಬಾಸ್ ಕನ್ನಡ 24 ಗಂಟೆಯ ನೇರ ಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ಪ್ರತಿ ದಿನ ರಾತ್ರಿ 9.30ಕ್ಕೆ ವೀಕ್ಷಿಸಿ.

ಇದನ್ನೂ ಓದಿ: ಕನ್ನಡ ಬಿಗ್​ ಬಾಸ್​: ಹಳ್ಳಿಮನೆಯಲ್ಲಿ ಹೊತ್ತಿಕೊಂಡಿದೆ ಮಾತಿನ ಕಿಚ್ಚು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.