ETV Bharat / entertainment

ಬಿಗ್‌ಬಾಸ್‌ ಮೇಲೆ ಮೊದಲ ಬಾರಿ ಇಂಥ ಆರೋಪ: ಕಾರ್ತಿಕ್​ಗೂ ಕ್ಲಾಸ್ ಕೊಟ್ಟ ಕಿಚ್ಚ

'ನ್ಯಾಯ ಸಿಗಬೇಕಿರೋದು ಯಾರಿಗೆ?', 'ಶನಿ ಅಂದಿದ್ದು ನಾನೇ ಅಂತ ಒಪ್ತಾರಾ ಕಾರ್ತಿಕ್?' ಎಂಬ ಶೀರ್ಷಿಕೆಯಡಿ ಎರಡು ಪ್ರೋಮೋ ಅನಾವರಣಗೊಂಡಿದ್ದು, ಸಂಪೂರ್ಣ ಬಿಗ್​ ಬಾಸ್​ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಕಾತರರಾಗಿದ್ದಾರೆ.

Kannada Bigg Boss
ಕನ್ನಡ ಬಿಗ್​ ಬಾಸ್
author img

By ETV Bharat Karnataka Team

Published : Jan 13, 2024, 5:50 PM IST

ಬಿಗ್‌ ಬಾಸ್‌ ಇತಿಹಾಸದಲ್ಲಿಯೇ ಮೊದಲ ಬಾರಿ ಈ ಶೋ ಮೇಲೆ ಒಂದು ಆರೋಪ ಕೇಳಿ ಬಂದಿದೆ. ಏನದು ಆರೋಪ? ಅದು ಎಷ್ಟರಮಟ್ಟಿಗೆ ಸತ್ಯ? ಈ ಪ್ರಶ್ನೆಯ ಕುರಿತಾಗಿಯೇ ಈ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಚರ್ಚೆ ನಡೆಯಲಿದೆ. ಇದರ ಸುಳಿವು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಸಿಕ್ಕಿದೆ.

ಬಿಗ್‌ ಬಾಸ್‌ ಪ್ರೋಮೋ: ಬಿಗ್‌ ಬಾಸ್‌ ಶೋ ಆರಂಭದಿಂದಲೂ ನಿಷ್ಪಕ್ಷಪಾತ ಮತ್ತು ಪಾರದರ್ಶಕತೆಯಂತಹ ಅಂಶಗಳನ್ನು ಕಾಪಾಡಿಕೊಂಡೇ ಬಂದಿದೆ ಅನ್ನೋದು ಹೆಚ್ಚಿನವರ ಅಭಿಪ್ರಾಯ. ಆದರೆ, ಇತ್ತೀಚಿನ ಕೆಲ ಸಂಗತಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಚರ್ಚೆ ನಡೆಯುತ್ತಿದೆ. ಅದನ್ನು ಗಮನಿಸಿದ ಕಿಚ್ಚ ವಾರಾಂತ್ಯದ ಎಪಿಸೋಡ್‌ನಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. 'ನ್ಯಾಯ ಸಿಗಬೇಕಿರೋದು ಯಾರಿಗೆ?' ಎಂಬ ಶೀರ್ಷಿಕೆಯಡಿ ಪ್ರೋಮೋ ಅನಾವರಣಗೊಂಡಿದೆ.

ವಾರ ಪೂರ್ತಿ ಟಾಸ್ಕ್ ಆಡಿ ಲೀಡ್‌ನಲ್ಲಿದ್ದವರನ್ನು ಬಿಟ್ಟು ವೋಟಿಂಗ್‌ ಆಧಾರದ ಮೇಲೆ ಫಿನಾಲೆ ಟಿಕೆಟ್ ಕೊಟ್ಟಿದ್ದು ತಪ್ಪಾ? ಹಾಗಾದರೆ ಎಲ್ಲರೂ ನ್ಯಾಯ ಎಂದು ಯಾವುದನ್ನು ಅಂದುಕೊಂಡಿದ್ದಾರೋ, ಅದು ಸಿಗಬೇಕಾಗಿದ್ದು ಯಾರಿಗೆ? ಈ ಎಲ್ಲದರ ಬಗ್ಗೆ ಈ ವಾರಾಂತ್ಯದ ಸಂಚಿಕೆಯಲ್ಲಿ ಚರ್ಚೆ ಮಾಡೋಣ ಎಂದು ಕಿಚ್ಚ ಹೇಳಿರುವುದು ಪ್ರೋಮೋದಲ್ಲಿ ಕಾಣಿಸಿದೆ.

ಕಳೆದ ವಾರದ ಆರಂಭದಲ್ಲಿ, ಎಲ್ಲರಿಗೂ ವೈಯಕ್ತಿಕ ಟಾಸ್ಕ್‌ ನೀಡಲಾಗುತ್ತದೆ. ಅದರಲ್ಲಿ ಅತ್ಯುತ್ತಮವಾಗಿ ಆಡಿ ಅತಿ ಹೆಚ್ಚು ಪಾಯಿಂಟ್ಸ್ ಪಡೆದುಕೊಂಡವರಲ್ಲಿ ಒಬ್ಬರು ಫಿನಾಲೆಗೆ ನೇರವಾಗಿ ಆಯ್ಕೆಯಾಗುತ್ತಾರೆ ಎಂದು ಬಿಗ್‌ ಬಾಸ್ ಹೇಳಿದ್ದರು. ಅದೇ ಪ್ರಕಾರ ಟಾಸ್ಕ್‌ಗಳನ್ನು ನೀಡಲಾಗಿತ್ತು. ವಾರಾಂತ್ಯದ ಹೊತ್ತಿಗೆ ಪ್ರತಾಪ್‌ 420 ಅಂಕಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದರು. 300 ಅಂಕಗಳನ್ನು ಪಡೆದ ಸಂಗೀತಾ ಎರಡನೇ ಸ್ಥಾನದಲ್ಲಿದ್ದರು ಮತ್ತು 210 ಅಂಕಗಳನ್ನು ಪಡೆದ ನಮ್ರತಾ ಮೂರನೇ ಸ್ಥಾನದಲ್ಲಿದ್ದರು. ಕೊನೆಯಲ್ಲಿ ಬಿಗ್‌ ಬಾಸ್‌ ಅತಿ ಹೆಚ್ಚು ಅಂಕಗಳನ್ನು ಪಡೆದ ಮೂವರು ಸದಸ್ಯರ ಪೈಕಿ ಯಾರು ಫಿನಾಲೆಗೆ ಹೋಗಲು ಅರ್ಹರು ಎಂಬ ನಿರ್ಧಾರವನ್ನು ಬಹುಮತದ ಆಧಾರದ ಮೇಲೆ ಕೈಗೊಳ್ಳಲು ಮನೆಯ ಉಳಿದೆಲ್ಲ ಸದಸ್ಯರಿಗೆ ಸೂಚಿಸಿದ್ದರು. ಅದರಲ್ಲಿ ತುಕಾಲಿ ಸಂತೋಷ್, ಕಾರ್ತಿಕ್ ಮತ್ತು ತನಿಷಾ ಮೂವರೂ ಸಂಗೀತಾ ಅವರಿಗೆ ಓಟ್ ಮಾಡಿದ್ದರಿಂದ ಅತಿ ಹೆಚ್ಚು ವೋಟ್ ಪಡೆದ ಸಂಗೀತಾ ಫಿನಾಲೆಗೆ ನೇರ ಟಿಕೆಟ್ ಪಡೆದುಕೊಂಡಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ 'ಸಲಾರ್'​ ಸಕ್ಸಸ್​ ಸೆಲೆಬ್ರೇಶನ್​: ಫೋಟೋ - ವಿಡಿಯೋಗಳಿಲ್ಲಿವೆ

ವಾರವಿಡೀ ಅತ್ಯುತ್ತಮವಾಗಿ ಆಡಿ ಅತಿ ಹೆಚ್ಚು ಅಂಕ ಪಡೆದಿರುವ ಪ್ರತಾಪ್ ಬಿಟ್ಟು ಸಂಗೀತಾ ಅವರಿಗೆ ಫಿನಾಲೆ ಟಿಕೆಟ್ ಕೊಟ್ಟಿದ್ದು ಸರಿಯೇ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸುದೀಪ್, ವಾರಾಂತ್ಯದ ಎಪಿಸೋಡ್‌ನಲ್ಲಿ ಈ ಕುರಿತಾದ ಗೊಂದಲಗಳಿಗೆ ತೆರೆ ಎಳೆಯಲು ನಿರ್ಧರಿಸಿದ್ದಾರೆ. ಹಾಗಾದರೆ ಸುದೀಪ್ ಈ ವಿಷಯವನ್ನು ಹೇಗೆ ಬಗೆಹರಿಸುತ್ತಾರೆ? ಯಾವುದು ಸರಿ? ಯಾವುದು ತಪ್ಪು? ಈ ಎಲ್ಲಾ ಪ್ರಶ್ನೆಗಳಿಗೆ ಈ ಸಂಜೆಯ ಕಿಚ್ಚನ ಪಂಚಾಯ್ತಿಯಲ್ಲಿ ಉತ್ತರ ಸಿಗಲಿದೆ.

ಇದನ್ನೂ ಓದಿ: ಶಿವಣ್ಣ, ಉಪ್ಪಿ, ರಾಜ್ ಬಿ ಶೆಟ್ಟಿ ಸಿನಿಮಾ ಮೇಲೆ ಕುತೂಹಲ: '45' ಶೂಟಿಂಗ್​ ಫೋಟೋಗಳಿಲ್ಲಿವೆ

'ಶನಿ' ಅಂದಿದ್ದು ನಾನೇ ಅಂತ ಒಪ್ತಾರಾ ಕಾರ್ತಿಕ್? ಎಂಬ ಶೀರ್ಷಿಕೆಯಡಿ ಮತ್ತೊಂದು ಪ್ರೋಮೋ ಅನಾವರಣಗೊಂಡಿದೆ. ಕಾರ್ತಿಕ್​ ಈ ಹಿಂದೆ ಮನೆಯ ಶನಿ ಯಾರು ಎಂದು ವರ್ತೂರು ಸಂತೋಷ್​ ಬಳಿ ಕೇಳಿದ್ದರು. ಆ ಸಂದರ್ಭ ಸಂಗೀತಾ ಹೆಸರು ಬಂದಿತ್ತು. ಸದ್ಯ ಕಾರ್ತಿಕ್ ಈ ವಿಚಾರ ಸ್ವೀಕರಿಸಲು ಸಿದ್ಧರಿಲ್ಲ. ಇದೇ ವಿಚಾರದ ಬಗ್ಗೆ ಸುದೀಪ್​ ಇಂದು ಚರ್ಚೆ ನಡೆಸಿದ್ದಾರೆ. ಕಾರ್ತಿಕ್​ಗೆ ನಯವಾಗೇ ಕಿಚ್ಚ ಕ್ಲಾಸ್ ಕೊಟ್ಟಂತಿದೆ. ಸಂಜೆ ಸಂಪೂರ್ಣ ಸಂಚಿಕೆ ಪ್ರಸಾರ ಆಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.