ಹೈದರಾಬಾದ್: ಈ ಹಿಂದೆ ಕಾಸ್ಟಿಂಗ್ ಕೌಚ್ ಭಾರತದ ಬಹುತೇಕ ಚಿತ್ರರಂಗದಲ್ಲಿ ಸದ್ದು ಮಾಡಿತ್ತು. ಆಗ ಒಂದೊಂದೆ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಹೆಚ್ಚಾಗಿ ಬಾಲಿವುಡ್ ನಟಿಯರು ಈ ಕಾಸ್ಟಿಂಗ್ ಕೌಚ್ ವಿರುದ್ಧ ಧ್ವನಿ ಎತ್ತಿದ್ದರು. ಇದೀಗ ಇನ್ಸ್ಟಾಗ್ರಾಮ್ನಲ್ಲಿ ಒಂದು ಪೋಸ್ಟ್ ಹಾಕಿದ್ದು, ಬಅಲಿವುಡ್ನಲ್ಲಿ ಮತ್ತೊಂದು ಚರ್ಚೆಗೆ ಕಾರಣವಾಗಿದೆ. ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸದಾ ಸುದ್ದಿಯಲ್ಲಿರುವ ಕಂಗನಾ ರಣಾವತ್, ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್ನಲ್ಲಿ ಸೋಮವಾರ ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದು, 'ಚಲನಚಿತ್ರ ಮಾಫಿಯಾ'ದ ವಿರುದ್ಧ ಗುಡುಗಿದ್ದಾರೆ.
ಹೌದು, 'ಹೆಚ್ಚು ಪ್ರಭಾವಿತ ವ್ಯಕ್ತಿಗಳ ಟ್ಯೂನ್‌ಗಳಿಗೆ ನೃತ್ಯ ಮಾಡದಿದ್ದಕ್ಕಾಗಿ ಹೇಗೆ ಟೀಕೆಗೆ ಒಳಪಡುತ್ತಾರೆ' ಎಂಬ ಕುರಿತು ಚಕಿತಗೊಳಿಸುವ ಹೇಳಿಕೆಗಳೊಂದಿಗೆ ಕಂಗನಾ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಅಷ್ಟೇ ಅಲ್ಲದೆ, 'ಫಿಲ್ಮ್ ಮಾಫಿಯಾ' ಮೇಲೆ ಸಹ ಹೊಸ ದಾಳಿ ಪ್ರಾರಂಭಿಸಿದ್ದಾರೆ. 'ಚಲನಚಿತ್ರ ಮಾಫಿಯಾ' ಎಂಬ ಪದವು ನನಗೆ ಅನ್ವಯಿಸುವುದಿಲ್ಲ, ಬಾಲಿವುಡ್‌ನ ಪವರ್ ಪ್ಲೇಯರ್‌ಗಳಿಗೆ ಬಳಕೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.
ಹಣಕ್ಕಾಗಿ ಹೈ-ಪ್ರೊಫೈಲ್ ಮದುವೆಗಳಲ್ಲಿ ಪ್ರದರ್ಶನ ನೀಡುವ ಬಾಲಿವುಡ್ ಸೆಲೆಬ್ರಿಟಿಗಳ ಬಗ್ಗೆ ಕಿಡಿಕಾರಿರಿರುವ ಕಂಗನಾ, ನಾನು ಬೇರೆ ಹುಡುಗಿಯರಂತೆ ಅಲ್ಲ, ಯಾರ ಬಗ್ಗೆಯೂ ಗಾಸಿಪ್ ಮಾಡುವುದಿಲ್ಲ ಅಥವಾ ಮದುವೆಗಳಲ್ಲಿ ನೃತ್ಯ ಮಾಡಲ್ಲ, ಅವಕಾಶಕ್ಕಾಗಿ ನಾಯಕರ ಕೋಣೆಗೆ ಹೋಗುವುದಿಲ್ಲ. ಈಗಲೂ ನಾನು ಸಿನಿಮಾ ಮಾಡಲು ಪ್ರತಿ ಪೈಸೆ ಕೂಡಿ ಹಾಕುತ್ತೇನೆ. ನನ್ನ ವರ್ತನೆಯನ್ನು ಯಾವಾಗಲೂ ದುರಹಂಕಾರ ಎಂದು ತಪ್ಪಾಗಿ ಗ್ರಹಿಸಲಾಗಿದೆ ಎಂದು ನಟಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: 'ದಿ ಕಾಶ್ಮೀರ್ ಫೈಲ್ಸ್' ಚಿತ್ರದಿಂದ ಬಾಲಿವುಡ್ ಮಾಡಿದ ಎಲ್ಲ ಪಾಪ ಕಳೆದಿದೆ: ಕಂಗನಾ ರಣಾವತ್
ಕಂಗನಾ ತಮ್ಮ ಮುಂಬರುವ ಹೊಸ ಚಿತ್ರ 'ತೇಜಸ್'ನಲ್ಲಿ ಭಾರತೀಯ ವಾಯುಪಡೆಯ ಪೈಲಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಸ್ತುತ ಪಿ. ವಾಸು ನಿರ್ದೇಶನದ 'ಚಂದ್ರಮುಖಿ 2' ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಇದು 2005 ರಲ್ಲಿ ತೆರೆಕಂಡ ಸೂಪರ್‌ಸ್ಟಾರ್ ರಜನಿಕಾಂತ್ ಮತ್ತು ಜ್ಯೋತಿಕಾ ಸರವಣನ್ ಅಭಿನಯದಲ್ಲಿ ಬಿಡುಗಡೆಯಾದ ಸಿನಿಮಾದ ಸೀಕ್ವೆಲ್ ಆಗಿದ್ದು, ರಾಘವ ಲಾರೆನ್ಸ್ ಪ್ರಮುಖ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ದೀಪಿಕಾ ಪಡುಕೋಣೆ ಕುರಿತ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ಕಂಗನಾ ರಣಾವತ್
ಈ ಹಿಂದೆ ನೀಡಿದ್ದ ವಿವಾದಾತ್ಮಕ ಹೇಳಿಕೆ: ಈ ಹಿಂದೆ ಅನೇಕ ವಿವಾದಾತ್ಮಕ ಹೇಳಿಕೆ ನೀಡಿರುವ ಬಾಲಿವುಡ್ ನಟಿ ಕಂಗನಾ ರಣಾವತ್, ಸಂದರ್ಶನವೊಂದರಲ್ಲಿ ಮಾತನಾಡುತ್ತ '1947ರಲ್ಲಿ ದೇಶಕ್ಕೆ ಸಿಕ್ಕಿದ್ದು ಸ್ವಾತಂತ್ರ್ಯ ಅಲ್ಲ, ಅದು ಭಿಕ್ಷೆ. 2014ರಲ್ಲಿ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತು ಎಂದು ಹೇಳಿದ್ದರು. ಅವರ ಈ ಮಾತುಗಳಿಗೆ ಸಾಮಾಜಿಕ ಜಾಲತಾಣಗಳು ಸೇರಿದಂತೆ ಹಲವೆಡೆ ಆಕ್ಷೇಪ ವ್ಯಕ್ತವಾಗಿತ್ತು.
ಇದನ್ನೂ ಓದಿ: ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014 ರಲ್ಲಿ: ವಿವಾದಾತ್ಮಕ ಹೇಳಿಕೆ ಮೂಲಕ ಟ್ರೋಲ್ಗೆ ಗುರಿಯಾದ ಕಂಗನಾ ರಣಾವತ್