ETV Bharat / entertainment

ಕಾಶ್ಮೀರಿ ಫೈಲ್ಸ್​​ ವಿವಾದ: ಯಹೂದಿ ವಿರೋಧಿ ಸಂದೇಶದ ಸ್ಕ್ರೀನ್‌ಶಾಟ್ ಶೇರ್​ ಮಾಡಿದ ಇಸ್ರೇಲ್​ ರಾಯಭಾರಿ - etv bharat kannada

ಭಾರತದಲ್ಲಿರುವ ಇಸ್ರೇಲ್​ ರಾಯಭಾರಿ ನೌರ್ ಗಿಲೋನ್, ತಾವು ಸ್ವೀಕರಿಸಿದ ಹತ್ಯಾಕಾಂಡ ಸಮರ್ಥಿಸುವ ಮತ್ತು ಹಿಟ್ಲರ್‌ನನ್ನು ಹೊಗಳಿದ ಸಂದೇಶದ ಸ್ಕ್ರೀನ್‌ಶಾಟ್ ​ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

israeli-envoy-naor-gilon-flags-anti-semitic-message-amid-the-kashmir-files-row
ಕಾಶ್ಮೀರಿ ಫೈಲ್ಸ್​​ ವಿವಾದ: ಯಹೂದಿ ವಿರೋಧಿ ಸಂದೇಶದ ಸ್ಕ್ರೀನ್‌ಶಾಟ್ ಶೇರ್​ ಮಾಡಿದ ಇಸ್ರೇಲ್​ ರಾಯಭಾರಿ
author img

By

Published : Dec 3, 2022, 6:24 PM IST

ನವದೆಹಲಿ: ಕಾಶ್ಮೀರಿ ಫೈಲ್ಸ್​​ ಚಲನಚಿತ್ರ ಮತ್ತು ಐಎಫ್‌ಎಫ್‌ಐ ವಿವಾದದ ನಡುವೆ ಭಾರತದಲ್ಲಿರುವ ಇಸ್ರೇಲ್​ ರಾಯಭಾರಿ ನೌರ್ ಗಿಲೋನ್, ತಾವು ಸ್ವೀಕರಿಸಿದ ಹತ್ಯಾಕಾಂಡ ಸಮರ್ಥಿಸುವ ಮತ್ತು ಹಿಟ್ಲರ್‌ನನ್ನು ಹೊಗಳಿದ ಸಂದೇಶದ ಸ್ಕ್ರೀನ್‌ಶಾಟ್​ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಕಳೆದ ವಾರ ಐಎಫ್‌ಎಫ್‌ಐ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಡಾವ್ ಲಪಿಡ್, ಕಾಶ್ಮೀರ ಫೈಲ್ಸ್​​ ಚಿತ್ರವನ್ನು ಪ್ರಚಾರ ಕ್ರಮ ಮತ್ತು ಅಶ್ಲೀಲ ಎಂದು ಹೇಳುವ ಮೂಲಕ ವಿವಾದ ಹುಟ್ಟು ಹಾಕಿದ್ದರು. ಇದನ್ನು ಇಸ್ರೇಲ್​ನ ರಾಯಭಾರಿಯಾದ ನೌರ್ ಗಿಲೋನ್ ಸ್ವತಃ ಟೀಕಿಸಿದ್ದರು. ಇದೀಗ ತಾವು ಸ್ವೀಕರಿಸಿದ ಯಹೂದಿ ವಿರೋಧಿ ಸಂದೇಶವೊಂದನ್ನು ಟ್ವಿಟರ್​ನಲ್ಲಿ ನೌರ್ ಗಿಲೋನ್ ಹಂಚಿಕೊಂಡಿದ್ದಾರೆ.

  • I’m touched by your support. The mentioned DM is in no way reflective of the friendship we enjoy in 🇮🇳, including on social media. Just wanted this to be a reminder that anti-Semitism sentiments exist, we need to oppose it jointly and maintain a civilized level of discussion🙏. https://t.co/y06JJNbKDN

    — Naor Gilon (@NaorGilon) December 3, 2022 " class="align-text-top noRightClick twitterSection" data=" ">

ಇದನ್ನೂ ಓದಿ: ಕಾಶ್ಮೀರಿ ಫೈಲ್ಸ್‌: 'ನನ್ನ ಟೀಕೆಗಳು ತಪ್ಪಾಗಿ ಅರ್ಥವಾಗಿದ್ದರೆ ಕ್ಷಮಿಸಿ'- ನಡವ್​ ಲಪಿಡ್​

ಈ ದಿಕ್ಕಿನಲ್ಲಿ ನಾನು ಪಡೆದ ಕೆಲವು ಡಿಎಂ (DM)ಗಳಲ್ಲಿ ಒಂದನ್ನು ಹಂಚಿಕೊಳ್ಳಲು ಬಯಸುತ್ತೇನೆ. ಪಿಎಚ್‌ಡಿ ಹೊಂದಿರುವ ವ್ಯಕ್ತಿಯೊಬ್ಬರ ಪ್ರೊಫೈಲ್ ಪ್ರಕಾರ ಎಂದು ಬರೆದು, ಆತ ನನ್ನ ರಕ್ಷಣೆಗೆ ಅರ್ಹನಲ್ಲದಿದ್ದರೂ, ಆತನ ಗುರುತಿನ ಮಾಹಿತಿಯನ್ನು ಅಳಿಸಲು ನಾನು ನಿರ್ಧರಿಸಿದೆ ಎಂದು ಟ್ವೀಟ್​ ಮಾಡಿ, ಇದಕ್ಕೆ ಹಿಟ್ಲರ್​​ ಮಹಾನ್ ವ್ಯಕ್ತಿ ಎಂಬ ಹೊಗಳಿದ ಸಂದೇಶದ ಸ್ಕ್ರೀನ್‌ಶಾಟ್​ ಟ್ವೀಟ್​ ಮಾಡಿದ್ದಾರೆ.

ಅಲ್ಲದೇ, ಮತ್ತೊಂದು ಟ್ವೀಟ್​ ಮಾಡಿ, ನಿಮ್ಮ ಬೆಂಬಲವು ನನಗೆ ತಲುಪಿದೆ. ಉಲ್ಲೇಖಿಸಲಾದ ಡಿಎಂ ಭಾರತದಲ್ಲಿ ನಾವು ಆನಂದಿಸುವ ಸ್ನೇಹವನ್ನು ಯಾವುದೇ ರೀತಿಯಲ್ಲಿ ಪ್ರತಿಬಿಂಬಿಸುವುದಿಲ್ಲ. ಯಹೂದಿ ವಿರೋಧಿ ಭಾವನೆಗಳು ಅಸ್ತಿತ್ವದಲ್ಲಿವೆ ಎಂಬುದನ್ನು ಇದು ನೆನಪಿಸಬೇಕೆಂದು ಬಯಸಿದೆ. ನಾವು ಇದನ್ನು ಜಂಟಿಯಾಗಿ ವಿರೋಧಿಸಬೇಕು ಮತ್ತು ನಾಗರಿಕ ಮಟ್ಟದ ಚರ್ಚೆಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೇವರು ಅವರಿಗೆ ಬುದ್ಧಿ ಕೊಡಲಿ: ಲಪಿಡ್ ಹೇಳಿಕೆಗೆ ಅನುಪಮ್ ಖೇರ್ ಕಿಡಿ

1990ರ ಕಾಶ್ಮೀರಿ ಪಂಡಿತರ ವಲಸೆ ಮತ್ತು ಹತ್ಯೆಯ ಕುರಿತಾದ 'ದಿ ಕಾಶ್ಮೀರ್ ಫೈಲ್ಸ್' ಚಲನಚಿತ್ರವನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ್ದರು. ಐಎಫ್‌ಎಫ್‌ಐ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರಾಗಿ ಪಾಲ್ಗೊಂಡಿದ್ದ ನಾಡವ್ ಲಪಿಡ್, 'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಬಗ್ಗೆ ಆಡಿದ್ದ ಮಾತುಗಳ ಕುರಿತಾಗಿ ನಂತರ ಕ್ಷಮೆ ಕೋರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.